Advertisement
ದೇಶದ ಕೋಟ್ಯಂತರ ಜನರ ಆಹಾರ ಭದ್ರತೆಒದಗಿಸುವ ರೈತನೇ ತುತ್ತು ಅನ್ನಕ್ಕಾಗಿ ಹೋರಾಡುತ್ತಿದ್ದು,ಆವನು ಕಾನೂನು ಕೈಗೆತ್ತಿಕೊಳ್ಳುವ ಮುಖಾಂತರದೇಶದಲ್ಲಿ ಆಹಾರ ಹೋರಾಟ ನಡೆಯುವ ಕಾಲ ದೂರವಿಲ್ಲವೆಂದು ಸರ್ಕಾರಗಳಿಗೆ ರೈತಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಎಚ್ಚರಿಸಿದರು.
Related Articles
Advertisement
ಟೊಮೆಟೋ ಕ್ಯಾಪ್ಸಿಕಂಗೂ ಬೆಳೆ ವಿಮೆ ಅಗತ್ಯ: ವಿಮಾ ಕಂಪನಿಗಳು ಮಳೆಯಾಶ್ರಿತ ರಾಗಿ, ಜೋಳ,ತೊಗರಿ, ನೆಲಗಡಲೆ, ಬೆಳೆಗಳಿಗೆ ವಿಮೆ ಕಟ್ಟಿಸಿಕೊಂಡು ಲಕ್ಷಾಂತರ ರೂ. ಬಂಡವಾಳ ಹಾಕುವ ಟೊಮೆಟೋ ಕ್ಯಾಪ್ಸಿಕಂ ಮತ್ತಿತರರ ವಾಣಿಜ್ಯ ಬೆಳೆಗಳಿಗೆವಿಮೆಯನ್ನು ಕಟ್ಟಿಸಿಕೊಳ್ಳದೆ ಸರ್ಕಾರದ ದಿಕ್ಕುತಪ್ಪಿಸುತ್ತಿದ್ದಾರೆ. ಸಂಬಂಧಪಟ್ಟ ವಿಮಾ ಕಂಪನಿಗಳು, ರೈತರು ಅಧಿಕಾರಿಗಳ ಸಭೆ ಕರೆದು ವಾಣಿಜ್ಯ ಬೆಳೆಗಳಿಗೂ ವಿಮಾ ಪಾಲಿಸಿ ಕಡ್ಡಾಯ ಮಾಡುವ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಆನಂದ್ ಪ್ರಕಾಶ್ ಮಿನಾ, ಸಂಬಂಧಪಟ್ಟ ಅಧಿಕಾರಿಗಳನ್ನು ಸಭೆ ಕರೆದು ವರದಿ ತರಿಸಿಕೊಂಡು ಸರ್ಕಾರಕ್ಕೆ ಕಳುಹಿಸಿ ಬೆಂಬಲ ಬೆಲೆ ಜೊತೆಗೆ ಮಾರುಕಟ್ಟೆ ಜಾಗ ಹಾಗೂ ನಕಲಿ ಬಿತ್ತನೆ ಬೀಜ , ರಸಗೊಬ್ಬರಗಳ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಭರವಸೆಯನ್ನು ನೀಡಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಯುವ ರೈತ ಮುಖಂಡ ನಂಗಲಿ ಕಿಶೋರ್, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಈಕಂಬಳ್ಳಿ ಮಂಜುನಾಥ್, ತೆರ್ನಹಳ್ಳಿಆಂಜಿನಪ್ಪ, ಮಾಸ್ತಿ ಯಲ್ಲಣ್ಣ, ಹರೀಶ್, ಚಂದ್ರಪ್ಪ, ಫಾರೂಖ್ ಪಾಷ, ಬಂಗಾರಿ ಮಂಜು, ರಾಜೇಶ್,ಮರಗಲ್ ಮುನಿಯಪ್ಪ, ಸಂದೀಪ್‌ರೆಡ್ಡಿ, ಸಂದೀಪ್ ಗೌಡ, ಅಜಯ್, ಮಣಿ, ರಂಜಿತ್, ಅಭಿಷೇಕ್, ಪಾರಂಡಹಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ನಾರಾಯಣಗೌಡ, ವೆಂಕಟೇಶಪ್ಪ, ಸುಪ್ರೀಂ ಚಲ ಇತರರು ಇದ್ದರು.
ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸಿ :
ಏಷ್ಯಾದಲ್ಲೇ 2ನೇ ಅತಿದೊಡ್ಡ ಮಾರುಕಟ್ಟೆ ಜಾಗದ ಸಮಸ್ಯೆಯೂ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಟೊಮೆಟೋ ಖರೀದಿ ಮಾಡುವ ವ್ಯಾಪಾರಸ್ಥರು ಲೋಡ್ ಮಾಡಲು ಮಳೆ ಅಡ್ಡಿ ಹಾಗೂ ಟ್ರಾಫಿಕ್ ಸಮಸ್ಯೆಯಾದಾಗ 1 ಬಾಕ್ಸ್ ನ ಮೇಲೆ 100 ರೂ. ಬೆಲೆ ಕಡಿತವಾಗುತ್ತದೆ. ಈ ಸಮಸ್ಯೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಇದ್ದರೂ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.