ಹಾಸನ: ರೈತರಿಗೆ ಟ್ರ್ಯಾಕ್ಟರ್‌ಗಳನ್ನು ಮಾರಾಟ ಮಾಡಿರುವ ವಿವಿಧ ಕಂಪನಿಗಳ ಶೋರೂಂಗಳು ಟ್ರ್ಯಾಕ್ಟರ್‌ಗಳ ದುರಸ್ತಿ ಮಾಡಿಕೊಡದೆ ತೊಂದರೆ ಕೊಡುತ್ತಿವೆ ಎಂದು ಆರೋಪಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.
ಜಿಲ್ಲೆಯಲ್ಲಿರುವ ಕ್ಯಾಪ್ಟನ್ ಟ್ರ್ಯಾಕ್ಟರ್ ಕಂಪನಿಯ ಶೋ ರೂಂ ಸೇರಿದಂತೆ ವಿವಿಧ ಕಂಪನಿಗಳ ಟ್ರ್ಯಾಕ್ಟರ್ ಶೋರೂಂ ಮತ್ತು ಫೈನಾನ್ಸ್ ಕಂಪನಿಗಳು ರೈತರಿಗೆ ಟ್ರ್ಯಾಕ್ಟರ್, ಟಿಲ್ಲರ್, ಮಿನಿ ಟ್ರ್ಯಾಕ್ಟರ್ ಗಳನ್ನು ಮಾರಾಟ ಮಾಡಿವೆ. ಸಾಲ ಪಡೆದು ತಮ್ಮ ಜಮೀ ನನ್ನು ಅಡಮಾನ ಮಾಡಿ ಚೋಳ ಮಂಡಲಂ ಸೇರಿದಂತೆ ವಿವಿಧ ಹಣಕಾ ಸು ಸಂಸ್ಥೆಗಳಿಂದ ಸಾಲ ಪಡೆ ದು ಶೋರೂಂಗಳಿಂದ ಟ್ರ್ಯಾಕ್ಟರ್‌ಗಳನ್ನು ಖರೀದಿ ಮಾಡಿರುವ ರೈತ ರಿಗೆ ಟ್ರ್ಯಾಕ್ಟರ್‌ಗಳನ್ನು ದುರಸ್ತಿ ಮಾಡದೆ ಮೋಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿದರು.
ಮತ್ತೆ ಮತ್ತೆ ರಿಪೇರಿ: ಖರೀದಿಸುವ ಸಂದರ್ಭದಲ್ಲಿ ಶೇ.50ರಷ್ಟು ಮೊತ್ತವನ್ನು ಪಾವತಿಸಿ ಖರೀದಿಸಿರುವ ಟ್ರ್ಯಾಕ್ಟರ್ ಗಳನ್ನು ರೈತರು ಬಳಸಿದ ಒಂದೆರೆಡು ತಿಂಗಳಲ್ಲೇ ದುರಸ್ತಿಗೆ ಬರುತ್ತಿವೆ. ದುರಸ್ತಿ ಮಾಡಿಕೊಟ್ಟರೂ ಮತ್ತೆ ಒಂದೆರೆಡು ದಿನಕ್ಕೆ ದುರಸ್ತಿಗೆ ಬರುತ್ತಿದೆ. ಹೆಚ್ಚಿನ ದುರಸ್ತಿಯನ್ನು ಕಂಪನಿಯು ನಿರ್ವಹಿಸಲು ಸಾಧ್ಯವಿಲ್ಲ ಎಂದು ಇಲ್ಲಸಲ್ಲದ ಸಬೂಬು ಹೇಳುತ್ತಿವೆ. ಕೆಲವೊಂದು ಸಂದರ್ಭದಲ್ಲಿ ಶೋ ರೂಂ ನಲ್ಲೇ ವಾಹನವನ್ನು ಇಟ್ಟುಕೊಂಡು ತಿಂಗಳುಗಟ್ಟಲೇ ಅಲೆಸುತ್ತಿದ್ದಾರೆ. ಇದನ್ನು ಕೇಳಿದರೆ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ. ನಿಮ್ಮ ಜಮೀನನ್ನು ಸಾಲಕ್ಕೆ ಹರಾಜು ಹಾಕಿ ಕೊಳ್ಳುತ್ತೇವೆ. ನ್ಯಾಯಾಲಯದಲ್ಲಿ ನಿಮ್ಮಗಳ ಮೇಲೆ ದಾವೆ ಹಾಕಿಸುತ್ತೇವೆ ಎಂದು ರೈತರಿಗೆ ಟ್ರ್ಯಾಕ್ಟರ್ ಕಂಪನಿಗಳು ಬೆದರಿಕೆ ಹಾಕುತ್ತಿವೆ ಎಂದು ದೂರಿದರು.
ಸಂಸ್ಥೆ ಗಡಿಪಾರಿನ ಎಚ್ಚರಿಕೆ: ಶೋರೂಂ ಮಾಲೀಕರು, ಫೈನಾನ್ಸ್ ಕಂಪನಿಗಳು ಕಾನೂನು ರೀತಿಯಲ್ಲಿ ರೈತರಿಗೆ ಸೇವೆಯನ್ನು ನೀಡುವ ಬದಲಾಗಿ ಗೂಂಡಾ ವರ್ತನೆ ತೋರಿಸುತ್ತಿದ್ದಾರೆ. ರೈತರು ಯಾವುದಾದರೂ ಬ್ಯಾಂಕಿ ನಲ್ಲಿ ಅವಶ್ಯಕವಾದ ಸಾಲ ಪಡೆಯಲು ಮುಂದಾದರೆ ಅಂತಹ ಬ್ಯಾಂಕುಗಳಿಗೆ ಚೋಳಮಂಡಲ ದಂತಹ ಫೈನಾನ್ಸ್ ಕಂಪನಿಗಳು ಸಾಲ ಕೊಡದಂತೆ ಉದ್ದೇಶ ಪೂರ್ವಕವಾಗಿ ಅಡಚಣೆ ಮಾಡುತ್ತಿ ವೆ. ಇಂತಹ ಟ್ರ್ಯಾಕ್ಟರ್ ಶೋರೂಂಗಳು, ಫೈನಾನ್ಸ್ ಕಂಪನಿಗಳು ಈ ರೀತಿ ರೈತರಿಗೆ ತೊಂದರೆ ಕೊ ಡುವುದನ್ನು ಮುಂದುವರಿಸಿದರೆ ರಾಜ್ಯದಿಂದ ಹೊರಗಡೆ ಓಡಿಸುವ ಅಭಿಯಾನವನ್ನು ಹಮ್ಮಿಕೊ ಳ್ಳಬೇಕಾದೀತು ಎಂದು ಎಚ್ಚರಿಸಿದರು.
ಬೆದರಿಕೆ ತಂತ್ರ ನಿಲ್ಲಿಸಿ : ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಸರ್ಕಾರದಿಂದಲೇ ರೈತರಿಗೆ ಸಾಲಮನ್ನಾದ ಅರ್ಜಿಗಳು ರವಾನೆ ಯಾಗಿದ್ದವು. ಬ್ಯಾಂಕುಗಳು ಸಾಲದ ವಿವರವನ್ನೂ ಪಡೆದಿದ್ದವು. ಆದರೆ ಬ್ಯಾಂಕುಗಳು ಮಾತ್ರ ಇನ್ನೂ ರೈತರಿಗೆ ನೋಟಿಸ್ ಕಳುಹಿಸಿ ಸಾಲಮನ್ನಾ ಆಗಿಲ್ಲ ಎಂದು ಹೇಳುತ್ತಿವೆ. ರೈತರ ಸಾಲ ಮನ್ನಾ ಅಡಚಣೆಗಳನ್ನು ನಿವಾರಿಸಲು ಸಂಬಂಧಿಸಿದ ಇಲಾಖೆಗಳು ಕೂಡಲೇ ಮುಂದಾಗಬೇಕು. ಬ್ಯಾಂಕು ಗಳು ರೈತರಿಗೆ ನೋಟಿಸ್ ಕಳುಹಿಸಿ ನ್ಯಾಯಾಲಯಕ್ಕೆ ದಾವೆ ಹೂಡುತ್ತೇವೆ ಎಂಬ ಬೆದರಿಕೆ ಕೂಡ ಲೇ ನಿಲ್ಲಿಸಬೇಕೆಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು, ಶಿವರಾಮೇ ಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.