Advertisement

ಕೆರೆ ಭರ್ತಿಗೆ ರೈತರಿಂದ ಅಹೋರಾತ್ರಿ ಧರಣಿ

01:32 PM Feb 26, 2022 | Team Udayavani |

ಚಾಮರಾಜನಗರ: ತಾಲೂಕಿನ ಆನೆಮಡುವಿನ ಕೆರೆಗೆ ನೀರು ತುಂಬಿಸುವ ವಿಳಂಬ ನೀತಿ ಖಂಡಿಸಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಹಗಲು-ರಾತ್ರಿ ಪ್ರತಿಭಟನಾ ಧರಣಿ ಸತ್ಯಾಗ್ರಹವನ್ನು ಶುಕ್ರವಾರ ಆರಂಭಿಸಲಾಯಿತು. ಉಡಿಗಾಲ ಗ್ರಾಮದ ಪಟ್ಟಲದಮ್ಮ ದೇವಸ್ಥಾನದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ದೇವರಿಗೆ ಪೂಜೆ ಸಲ್ಲಿಸಿ ನಂತರ ಮುಖ್ಯರಸ್ತೆಯಲ್ಲಿಮೆರವಣಿಗೆ ಹೊರಟು ಚಿಕ್ಕಮೋರಿ ಕಾಲುವೆ ಬಳಿ ಧರಣಿ ಕುಳಿತರು.

Advertisement

ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ,ಗ್ರಾಮದ ಹತ್ತಿರದಲ್ಲಿರುವ ಆನೆ ಮಡುವಿನಕೆರೆಗೆ ಗುರುತ್ವಾ ಕರ್ಷಣೆ ಮೂಲಕ ನೀರುತುಂಬಿಸಲು ಯೋಜನೆ ಸಿದ್ಧವಾಗಿದ್ದು, ಈಯೋಜನೆಯು ಸುಮಾರು 7 ವರ್ಷಗಳಿಂದನನೆಗುದಿಗೆ ಬಿದ್ದಿದೆ. 20 ಕೆರೆಗಳಿಗೆ ಆಲಂ ಬೂರು ಯೋಜನೆಯಿಂದ ನೀರು ಹರಿ ಸಲು ಪ್ರಾರಂಭವಾಗಿದೆ. ಆದರೆ, ಆನೆ ಮಡುವಿನ ಕೆರೆಗೆ ಸೂಕ್ತ ಹಾಗೂ ಸಮರ್ಪಕವಾಗಿ ನೀರು ಹರಿ ಸುವಲ್ಲಿ ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾಡಳಿತ,ನೀರಾವರಿ ಇಲಾಖೆಯ ಅಧಿಕಾರಿಗಳು ಮೂಗಿಗೆ ತುಪ್ಪ ಸವರುವಂತೆ ಯೋಜನೆಗೆಬೇಕಾದ ವ್ಯವಸ್ಥೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಿದರು.

ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ಮಾತನಾಡಿ, ಆನೆಮಡುಕೆರೆಗೆ ನೀರು ತುಂಬಿಸಿ ದಲ್ಲಿ, ಈ ಅಚ್ಚುಕಟ್ಟು ಭಾಗದ 5 ಸಾವಿರಕ್ಕೂಹೆಚ್ಚು ಎಕರೆ ಪ್ರದೇಶಕ್ಕೆ ಅಂತರ್ಜಲ, ಜನ ಜಾನುವಾರುಗಳಿಗೆ ನೀರು ಹಾಗೂ ಕೃಷಿಗೆ ಪೂರಕವಾದಸ್ವ ಉದ್ಯೋಗ ಸೃಷ್ಟಿಗೆ ಅನುಕೂಲ ವಾಗುತ್ತದೆ. ಅಲ್ಲದೇ ಕುಡಿಯುವ ನೀರಿಗಾಗಿ ಈ ಯೋಜನೆ ಎಂದು ಬಿಂಬಿತವಾಗಿ 7 ವರ್ಷಗಳು ಕಳೆದಿದ್ದು ಇನ್ನೂ ತುಂಬಿಸದಿರುವುದು ವಿಪರ್ಯಾಸ ಎಂದರು.

ಇದೇ ರೀತಿಯ ವಿಳಂಬ ನೀತಿ ಅನು ಸರಿಸಿದರೆ ಚಳವಳಿಯನ್ನು ತೀವ್ರಗೊಳಿಸಲಾಗು ವುದು ಎಂದುಎಚ್ಚರಿಸಿದರು. ಪ್ರತಿಭಟನೆಯಲ್ಲಿ ತಾಲೂಕುಉಪಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯ ದರ್ಶಿಕಿರಗಸೂರು ಶಂಕರ್‌, ಉಡಿಗಾಲ ಪ್ರಭು ಸ್ವಾಮಿ,ಪಟೇಲ್‌ ಶಿವಮೂರ್ತಿ, ನಾಗರಾಜಪ್ಪ, ರಾಜೇಂದ್ರ, ನಾಗ ರಾಜಪ್ಪ ಮಹೇಶ್‌ ಹಾಗೂ ಅಚ್ಚುಕಟ್ಟು ಭಾಗದ ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next