ಸವದತ್ತಿ: ಸಕಾಲಕ್ಕೆ ಎಪಿಎಂಸಿಗಳನ್ನು ಆರಂಭಿಸಿ ಎಂಎಸ್‌ಪಿ ದರದಲ್ಲಿ ಕಡಲೆ ಹಾಗೂ ರೈತ ಬೆಳೆದ ಇತರೆ ಬೆಳೆ ಖರೀದಿಸಬೇಕು.. ಇಲ್ಲದಿದ್ದಲ್ಲಿ ತಹಶೀಲ್ದಾರ್ ಕಚೇರಿಗೆ ಬೀಗ ಹಾಕುವ ಮೂಲಕ ಅಹೋರಾತ್ರಿ ಧರಣಿ ನಡೆಸುತ್ತೇವೆಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ವಿ. ನಾಯಕ ಎಚ್ಚರಿಸಿದರು.
ಸ್ಥಳೀಯ ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದಕಡಲೆ ಖರೀದಿ ಹಾಗೂ ಕೃಷಿ ಕಾಯ್ದೆ ಹಿಂಪಡೆಯುವಂತೆ ಪ್ರತಿಭಟಿಸಿ ಮನವಿ ಸಲ್ಲಿಸಿ ಅವರು ಮಾತನಾಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಈ ಮೂಲಕ ಸಂದೇಶ ರವಾನಿಸುತ್ತೇವೆ. ಚುನಾವಣಾ ಪ್ರಣಾಳಿಕೆಯಲ್ಲಿಬರೆದ ರೀತಿ ನಡೆದುಕೊಳ್ಳಿ. ಯಾವುದೇ ಪಕ್ಷಗಳಾಗಲಿ ರೈತರಿಗೆಸ್ಪಂದಿಸಿ. ವಿರೋಧಿ ನೀತಿ ಕೈ ಬಿಡಿ. ರೈತರಿಗೆ ಬೇಡವಾದ ಕಾಯ್ದೆ ಬಿಟ್ಟು ಉಪಯುಕ್ತವಾದವುಗಳನ್ನು ಮಾಡಿ. ಇಲ್ಲದಿದ್ದಲ್ಲಿ 14 ತಾಲೂಕಿನಲ್ಲಿ ದೊಡ್ಡ ಪ್ರಮಾಣದ ಹೋರಾಟನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು. ರೈತ ಮುಖಂಡ ಜೆ.ವಿ. ಅಗಡಿ ಮಾತನಾಡಿ, ಮೊದಲು ರಾಜ್ಯವಾರು ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸದೇ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ. ಸಂಸತ್‌ನಲ್ಲಿ ಭಾಷಣ ಮಾಡಿದ ಮೋದಿ ಬೆಂಬಲ ಬೆಲೆ ಎಲ್ಲಿದೆ? ಎಂದು ಪ್ರಶ್ನಿಸಿದ ಅವರು, ಇನ್ನು 10 ದಿನಗಳಲ್ಲಿ ಕಡಲೆ ಖರೀದಿಸದಿದ್ದಲ್ಲಿ ಅಹೋರಾತ್ರಿ ಹೋರಾಟ ನಡೆಸಲಾಗುವು ದೆಂದರು. ಇದಕ್ಕೂ ಮೊದಲು ಎಸ್‌ಎಲ್ ಎಒ ಕ್ರಾಸ್ ಗಣೇಶ ದೇವಸ್ಥಾನದಲ್ಲಿ ರಾಘವೇಂದ್ರ ನಾಯಕ, ಸುರೇಶ ಸಂಪಗಾವಿ, ಪ್ರವೀಣ ಪಟಾತರ, ಸುರೇಶ ಹಿಟ್ಟಣಗಿ, ಜೆ.ವಿ. ಅಡಡಿ ನೇತƒತ್ವದಲ್ಲಿ ಸಭೆ ನಡೆಸಿ ಕೃಷಿ ಕಾಯ್ದೆ ಕೈಬಿಡುವಂತೆ ಹಾಗೂ ದೆಹಲಿ ವಿದ್ಯಮಾನಗಳ ಕುರಿತು ಚರ್ಚಿಸಲಾಯಿತು.
ಅಲ್ಲದೇ ಮುಂದಿನ ಹೋರಾಟಗಳ ಬಗ್ಗೆ ರೂಪರೇಷೆ ತಯಾರಿಸಲಾಯಿತು. ಈ ಹಿಂದೆ ಗೋವಿನ ಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಮನವಿ ಸಲ್ಲಿಸಲಾಗಿತ್ತು. ಅದು ಈಡೇರಲಿಲ್ಲ. ಈಗಲಾದರೂ ಕಡಲೆ ಖರೀದಿ ಕೇಂದ್ರ ತರೆಯಲು ಒತ್ತಾಯಿಸಿ ಪ್ರತಿಭಟಿಸಲು ತೀರ್ಮಾನ ಕೈಕೊಳ್ಳಲಾಯಿತು.
ಈ ವೇಳೆ ಎಸ್.ಐ. ಸಂಪಗಾವ, ಎಮ್.ಬಿ. ಚರಂತಿಮಠ, ಮಂಜುನಾಥ ಅಂಗಡಿ, ಸುರೇಶ ಅಂಗಡಿ, ಪ್ರವೀಣ ಪಠಾತ,ರಮೇಶ ಗುಮ್ಮಗೋಳ, ಕಲ್ಲಪ್ಪ ಗಾಣಿಗೇರ, ರಾಜೇಶ್ವರಿ ರೇಣಿಗೌಡ್ರ, ಗೀರಿಜಾ ಕರಿಗೌಡ್ರ, ಮಲ್ಲವ್ವ ಲಗಮನ್ನವರ, ಕಲ್ಲವ್ವ ಲಗಮನ್ನವರ, ದ್ಯಾಮವ್ವ ಮಾಸನ್ನವರ, ಸುಶೀಲಾ ಪೂಜಾರ. ಇತರರು ಇದ್ದರು.