Advertisement
ಮಸ್ಕಿ ನೀರಾವರಿ ವ್ಯಾಪ್ತಿಗೆ ಒಳಪಡುವ ಈ ಕಾಲುವೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನೀರಾವರಿ ಮಾಡಲಾಗಿದೆ. ಸುಮಾರು 50ಕ್ಕೂ ಹೆಚ್ಚು ಪಂಪ್‌ಸೆಟ್ ಅಳವಡಿಕೆ ಮಾಡಲಾಗಿದೆ. ಅಕ್ರಮ ಪೈಪ್ ಗಳ ತೂಬುಗಳನ್ನು ಕೂಡಲೇ ಬಂದ್ ಮಾಡಿಸಬೇಕು. 55ನೇ ಕಾಲುವೆ 0ದಿಂದ 16 ಕಿಮೀವರೆಗೆ ಎಡಭಾಗದವರೆಗೆ ಮಾತ್ರ ನೀರಾವರಿ ಅಚ್ಚುಕಟ್ಟು ಪ್ರದೇಶವಾಗಿದೆ. ಆದರೆ, ಬಲಭಾಗದಲ್ಲೂ ನೀರಾವರಿಗೆ ನೀರು ಬಳಸಿಕೊಳ್ಳಲಾಗುತ್ತಿದೆ. ಸಿಂಧನೂರು ನೀರಾವರಿ ಇಲಾಖೆ ಇಇ ಹಾಗೂ ಮಸ್ಕಿಯ ಎಇಇ ಕೂಡಲೇ ಅಕ್ರಮ ಪಂಪ್ ಸೆಟ್ ಹಾಗೂ ಪೈಪ್‌ಗ್ಳ ತೆರವಿಗೆ ಮುಂದಾಗಬೇಕು. ಟಿಎಲ್‌ಬಿಸಿ ವ್ಯಾಪ್ತಿಯ ಅಕ್ರಮ ನೀರುಗಳ್ಳರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕೆಳಭಾಗದವರಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಕಾಲುವೆಗೆ ನೀರು ಹರಿಸಿದ ತಕ್ ಕ್ಷಣ ವಾರ ಬಂದಿ ಪ್ರಕಾರ ಮೇಲ್ಭಾಗದಲ್ಲಿ 16ನೇ ಕಿಮೀವರೆಗೂ ಗೇಜ್ ನಿರ್ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
Advertisement
ನೀರುಗಳ್ಳರ ವಿರುದ್ಧ ಕ್ರಮಕ್ಕೆ ರೈತ ಸಂಘ ಆಗ್ರಹ
02:44 PM Jul 29, 2020 | Suhan S |
Advertisement
Udayavani is now on Telegram. Click here to join our channel and stay updated with the latest news.