ಮೈಸೂರು: ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಗೊಳಿಸು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯ ರೈತ ವಿರೋಧಿ ಕಾಯಿದೆ ಹೋರಾಟ ಸಮಿತಿ ಯಿಂದ ಪ್ರತ್ಯೇಕವಾಗಿ ಶಾಸಕರ ಕಚೇರಿಗಳ ಮುಂದೆ ಪ್ರತಿಭಟನೆ ಮನವಿ ಸಲ್ಲಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿರುವ ಶಾಸಕರ ಕಚೇರಿ ಮುಂದೆ ರೈತ ಸಂಘಟನೆಗಳ ಕಾರ್ಯಕರ್ತರು ಭಿತ್ತಿಫಲಕ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಭೂ ಸುಧಾರಣಾ ಕಾಯಿದೆ ಬಗ್ಗೆ ಸದನದಲ್ಲಿ ಚರ್ಚೆ ಮಾಡದೆ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಹೊರಟಿರುವುದು ಜನವಿರೋಧಿಯಾಗಿದೆ.
ಕೃಷಿಕರಲ್ಲದಿದ್ದರೂ ಭೂಮಿ ಖರೀದಿಸುವುದು ಸೇರಿ ಇನ್ನಿತರ ಅಂಶಗಳು ರೈತರ ಪಾಲಿಗೆ ಮರಣ ಶಾಸನವಾಗಲಿದೆ. ರೈತರ ಪರವೆಂದು ಹೇಳಿಕೊಳ್ಳುವಮುಖ್ಯಮಂತ್ರಿ ಯಡಿಯೂರಪ್ಪ ಈ ಕಾಯಿದೆ ಕೈಬಿಡದಿದ್ದರೆ ರಾಜ್ಯದ ರೈತರು ದಂಗೆ ಎದ್ದು ತಮ್ಮ ಕುರ್ಚಿಯನ್ನೇ ಅಲು ಗಾಡಿಸುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು. ಬಳಿಕ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ, ಬಳಿಕ ನಗರದ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಾಸಕ ರಾಮದಾಸ್‌ರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ರೈತ ವಿರೋಧ ಕಾಯ್ದೆ ಹೋರಾಟ ಸಮಿತಿ ಪದಾಧಿಕಾರಿಗಳು ಸಮಿತಿ ಯ ಪ್ರಧಾನ ಸಂಚಾಲಕ ಕುರುಬೂರ್ ಶಾಂತ ಕುಮಾರ್ ಶಾಸಕ ಸಾ.ರಾ.ಮಹೇಶ್ ಮನೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹಿರಿಯ ಮುಖಂಡರಾದ ಅಶ್ವಥ್ ನಾರಾಯಣರಾಜೇ ಅರಸ್, ಲೋಕೇಶ್ ರಾಜೇ ಅರಸ್, ವಿಭಾಗೀಯ ಕಾರ್ಯದರ್ಶಿ ಸರಗೂರು ನಟರಾಜ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಮಹಿಳಾ ಅಧ್ಯಕ್ಷೆ ನೇತ್ರಾವತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೆಟ್ಟಹಳ್ಳಿ ಚಂದ್ರೇಗೌಡ, ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ ಪಾಲ್ಗೊಂಡಿದ್ದರು
ರೈತರಿಗೆ ಜಿಟಿಡಿ ಸಾಥ್: ಶಾಸಕ ಜಿ.ಟಿ.ದೇವೇಗೌಡ ರೈತರ ಪ್ರತಿಭಟನೆಗೆ ಸಾಥ್ ನೀಡಿ, ರೈತರೊಂದಿಗೆ ತಾವು ಭಿತ್ತಿ ಫಲಕ ಹಿಡಿದು ಪ್ರತಿಭಟನೆಗೆ ಬಂಬಲ ಸೂಚಿಸಿದರು. ರೈತ ಉಳಿದರೆ ದೇಶ ಉಳಿಯುತ್ತದೆ. ರೈತನೇ ಉಳಿಯ ದಿದ್ದರೆ ಆಹಾರ ಬೆಳೆಯುವುದು ಕಷ್ಟ. ಸರ್ಕಾರ ಜಾರಿಗೆ ತರುತ್ತಿರುವ ಭೂ ಸುಧಾ ರಣಾ ಕಾಯಿದೆಗೆ ನಮ್ಮ ವಿರೋಧವಿದೆ. ಅಧಿವೇಶನದಲ್ಲಿ ಕಾಯಿದೆ ಬಗ್ಗೆ ಚರ್ಚೆ ಮಾಡಿ, ಯೋಜನೆ ಕೈಬಿಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.