ಮಾಗಡಿ: ಮುಂದಿನ 15 ದಿನಗಳಲ್ಲಿ ರೈತರ ಸಮಸ್ಯೆಗಳನ್ನು ಬೆಸ್ಕಾಂ ಎಂಜಿನೀಯರ್‌ಗಳು ಬಗೆಹರಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್ ಬೆಸ್ಕಾಂಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪಟ್ಟಣದ ಬೆಸ್ಕಾಂ ಕಚೇರಿ ಮುಂದೆ ನೂರಾರು ರೈತರು ಎತ್ತಿನಗಾಡಿಯೊಂದಿಗೆಕೈಗೊಂಡಪ್ರತಿಭಟನಾ ಧರಣಿ ಉದ್ದೇಶಿಸಿ ಮಾತನಾಡಿದರು. ರೈತರ ಪಂಪ್‌ಸೆಟ್‌ಗಳಿಗೆ ಪರಿವರ್ತಕಅಳವಡಿಸುವಂತೆ ಬೆಸ್ಕಾಂಗೆ ಹಣ ಪಾವತಿಸಿ ವರ್ಷಗಳೆ ಕಳೆದರೂ ಇನ್ನೂ ಪರಿವರ್ತಕ ಅಳವಡಿಸಿಲ್ಲ. ಇದರಿಂದ ರೈತರು ಕೊಳವೆಬಾವಿ ಕೊರೆಸಿದ್ದು, ವಿದ್ಯುತ್ ಸಂಪರ್ಕಕ್ಕಾಗಿಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಿನ ಆಸೆಗಾಗಿ ಸಾಲ ಮಾಡಿ ಹಣ ಕಟ್ಟಿದ್ದಾರೆ. ಈಗ ಸಾಲ ಪಡೆದವರು ಬಡ್ಡಿ ಕಟ್ಟಲಾಗದ ಪರಿಸ್ಥಿತಿಯಲ್ಲಿದ್ದಾರೆ. ಇಷ್ಟೆಲ್ಲನೋವಿದ್ದರೂ, ಸಹ ಒಬ್ಬ ರೈತನುಎಂಜಿನೀಯರ್‌ಗಳಿಗೆ ಕಿರುಕುಳ ನೀಡಿಲ್ಲ.ರೈತರಕೆಲಸ ಮಾಡುವಂತೆ ಒತ್ತಾಯಿಸಿದ್ದೇವೆ.ಆದರೂ ಅಧಿಕಾರಿಗಳ ಕಿರುಕುಳಕ್ಕೆರೈತರೆಲ್ಲರೂ ಬೇಸತ್ತಿದ್ದಾರೆ ಎಂದರು.ಎಕ್ಸಿಕಿಟೀವ್ ಎಂಜಿನಿಯರ್ ಚಿಕ್ಕೇಗೌಡ ಮಾತನಾಡಿ, 3 ತಿಂಗಳಲ್ಲಿ ಗ್ರಾಮೀಣಪ್ರದೇಶದಲ್ಲಿ ಎಚ್‌ವಿಡಿಎಸ್ ಯೋಜನೆಕಾಮಗಾರಿ ಪೂರ್ಣಗೊಳಿಸುತ್ತೇವೆ. ಅಕ್ರಮಸಕ್ರಮಕ್ಕೂ ಸಹ ರೈತರು ಹಣ ಕಟ್ಟಿದ್ದಾರೆ. ಬಜೆಟ್‌ನಲ್ಲಿ ಅನುದಾನ ಬಂದಿಲ್ಲ ಬಂದ ಕೂಡಲೇ ಟಿಸಿಅಳವಡಿಸುವಕೆಲಸಆಗಲಿದೆ. ರೈತರು ಸಹಕರಿಸುವಂತೆ ಕೋರಿದರು.
ಬೆಸ್ಕಾಂ ಎಇಇ ಎಂ.ಸುಭಾಷ್ ಮುತ್ತು ಮಾತನಾಡಿ, ತಾಲೂಕಿನಲ್ಲಿ 3 ಸಾವಿರ ಎಚ್ ವಿಡಿಎಸ್ ಪಲಾನುಭವಿಗಳಿದ್ದಾರೆ. ಐಪಿ ಸರ್ಟಿಫಿಕೇಟ್ ಪಡೆದು ಗುತ್ತಿಗೆದಾರಿಗೆಕೊಟ್ಟಿರುವುದರಿಂದ ಅದನ್ನು ಕಾಫಿ ಮಾಡಿಕೊಂಡುಶಾಖಾಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದಅವರು, ನನ್ನೊಂದಿಗೆ ಬೆಸ್ಕಾಂ ಶಾಖಾಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಈಸಂಬಂಧ ಈಗಾಗಲೇ ಮೇಲಾಧಿಕಾರಿಗಳಿಗೆಲಿಖೀತ ದೂರು ನೀಡಿದ್ದೇನೆ. ಆದರೂ 15 ದಿನಗಳಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಒಂದೇ ಆರ್‌ಟಿ ನಂಬರ್‌ಗೆ ದಿನಾಂಕ ಬದಲಾಯಿಸಿ ಬೋಗಸ್ 9 ಸರ್ಟಿಫಿಕೇಟ್ ಕೊಡಲಾಗಿದೆ. ಜೊತೆಗೆ ಸಣ್ಣ ನೀರಾವರಿಇಲಾಖೆಯಿಂದ ಬಡವರಿಗೆಮುಂಜೂರಾಗಿದ್ದ ಟಿಸಿ ಸಹ ದುರ್ಬಳಕೆಮಾಡಿಕೊಂಡು ಅನರ್ಹರಿಗೆ ನೀಡಲಾಗಿದೆ.ಈ ಸಂಬಂಧ ನನ್ನ ಬಳಿ ದಾಖಲೆ ಇದೆಯಾರು ಬೇಕಾದರು ಪ್ರಶ್ನಿಸಲಿ ಎಂದುಬೆಸ್ಕಾಂ ಇಲಾಖೆಯ ಎಸ್.ಡಿ .ಎಮಲವೇಗೌಡ ಮಾಹಿತಿ ನೀಡಿದರು.
ಕಾರ್ಯದರ್ಶಿ ಮಧುಗೌಡ,ರಂಗಸ್ವಾಮಯ್ಯ, ಮಂಜುನಾಥ್,ಮಾಯಣ್ಣ, ಚೆನ್ನರಾಯಪ್ಪ, ಜಯಣ್ಣ,ಕಾಲೋನಿ ರಂಗಪ್ಪ, ಬೆಸ್ಕಾಂ ಎಂಜಿನೀಯರ್‌ಮೂರ್ತಿ, ಶಿವರಾಜು, ಬೆಸ್ಕಾಂ ಶಬೀರ್, ಮೂರ್ತಿ ರವಿ, ಹರೀಶ್, ಜಯಮ್ಮ ಮತ್ತಿತರರು ಇದ್ದರು.