Advertisement

ರೈತರ ಕೈ ಹಿಡಿಯುವ ಸಾವಯವ

04:46 PM Dec 03, 2020 | Suhan S |

ಸಿಂದಗಿ: ರೈತರು ಆಧುನಿಕ ಕೃಷಿ ಪದ್ಧತಿಗೆ ಶರಣಾಗಿ ಸಾಲ ಸೋಲ ಮಾಡಿ ಬೆಳೆ ಬೆಳೆದು ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದಿದ್ದಾಗ ಹತಾಶರಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಹೊಸತಲ್ಲ. ಹೆಚ್ಚು ಹೆಚ್ಚು ರಾಸಾಯನಿಕ ಬಳಕೆ ಮತ್ತು ಸಾವಯವ ಕೃಷಿ ಮರೆತಿರುವುದೇ ಇದಕ್ಕೆ ಕಾರಣ.

Advertisement

ರೈತರು ಉತ್ತಮ ಇಳುವರಿ ಹಾಗೂ ತ್ವರಿತಗತಿಯಲ್ಲಿ ಬೆಳೆ ಬೆಳೆಯಲು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಇದರಿಂದ ಭೂಮಿಯಲ್ಲಿನ ಜೀವಸತ್ವಗಳು ನಾಶವಾಗಿ ಮಣ್ಣಿನ ಫಲವತ್ತತೆಕಡಿಮೆಯಾಗುತ್ತಿದೆ. ಇದರಿಂದರೈತರು ನಿರೀಕ್ಷಿಸಿದಷ್ಟುಪ್ರಮಾಣದಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ.

ಪೌಷ್ಟಿಕ, ಶುದ್ಧ ಆಹಾರ ಸೇವನೆ ನಮ್ಮೆಲ್ಲರ ಆರೋಗ್ಯಕ್ಕೆ ಪೂರಕ. ಅಂತೆಯೇ ಫಲವತ್ತಾದಮಣ್ಣು, ಸಮರ್ಪಕ ಪೋಷಕಾಂಶ ದೊರೆತರೆ ಸಮೃದ್ಧ ಬೆಳೆ, ಭರಪೂರ ಫಸಲು ಬರುತ್ತದೆ. ಕೃಷಿಯಲ್ಲಿ ಪೋಷಕಾಂಶ ನಿರ್ವಹಣೆ ಮಹತ್ವದ್ದು. ಚೆನ್ನಾಗಿ ಫಸಲು ಬರಲು ಮಣ್ಣು ಮತ್ತು ಪೋಷಕಾಂಶಗಳ ಕೊಡುಗೆ ಮಹತ್ವದ್ದು. ಪೋಷಕಾಂಶಗಳನ್ನು ಸಾವಯವಮೂಲಕ ಮಣ್ಣಿಗೆ ನೀಡಬಹುದು. ಸೂಕ್ತ ಸಮಯದಲ್ಲಿಪೋಷಕಾಂಶ ದೊರೆತರೆ ಅದು ಬೆಳೆಗೆ ಪೂರಕ ಹಾಗೂ ಸದುಪಯೋಗವೂ ಆಗುತ್ತದೆ.

ಬಹಳಷ್ಟು ರೈತರು ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದರ ಕಡೆಗೆ ಗಮನ ಹರಿಸುತ್ತಿಲ್ಲ. ಕಡ್ಡಾಯವಾಗಿ ಮಣ್ಣು, ನೀರು, ಎಲೆಗಳನ್ನುಪರೀಕ್ಷೆಗೆ ಒಳಪಡಿಸಬೇಕು. ಮಣ್ಣಿನ ಪರೀಕ್ಷೆಯಿಂದ ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ ತಿಳಿಯಲುಸಾಧ್ಯ. ಇದರಿಂದ ಮಣ್ಣಿಗೆ ಅಗತ್ಯ ಬೇಕಾಗುವಪೋಷಕಾಂಶಗಳು ನೀಡಲು ಸಹಕಾರಿಯಾಗುತ್ತದೆ.ಹೆಚ್ಚು ಇಳುವರಿ ಬರಲೆಂದು ಸಿಕ್ಕಾಪಟ್ಟೆ ಪೋಷಕಾಂಶ ನೀಡಿದರೆ ಅದು ವ್ಯರ್ಥವಾಗುವುದೇ ಹೆಚ್ಚು. ಕಾರಣ ಎಲ್ಲಗಿಡಗಳಿಗೂ ಅದರದೇ ಆದ ಪೋಷಕಾಂಶ ಹೀರಿಕೊಳ್ಳುವ ಸಾಮರ್ಥ್ಯವಿರುತ್ತದೆ. ಸಸ್ಯಗಳ ಬೆಳವಣಿಗೆಗೆ 16 ಬಗೆಯ ಪೋಷಕಾಂಶಗಳು ಬೇಕು ಎಂದು ವಿಜ್ಞಾನಿಗಳುಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ಅವುಗಳನ್ನು ಪ್ರಧಾನ ಪೋಷಕಾಂಶಗಳು, ದ್ವಿತೀಯ ಹಂತದ ಪೋಷಕಾಂಶಗಳು ಮತ್ತು ಕಿರು ಪೋಷಕಾಂಶಗಳು ಎಂದು ಹೇಳಲಾಗುತ್ತದೆ. ಸಾವಯವ ಕೃಷಿ ಪದ್ಧತಿಯಿಂದ ವಿಷಮುಕ್ತ ಆಹಾರ ಧಾನ್ಯಗಳನ್ನು ಬೆಳೆಯಲು ರೈತರು ಮುಂದಾಗಬೇಕು.

ಭೂಮಿ ತಾಯಿ ನಂಬಿ ಕೆಟ್ಟವರಿಲ್ಲ. ಭೂಮಿ ತಾಯಿ ಪರಿಶ್ರಮ ವಹಿಸಿ ಬೆವರು ಸುರಿಸಿ ದುಡಿದರೆ ಪ್ರಯತ್ನಕ್ಕೆ ಫಲ ದೊರಕದೇ ಇರದು. ಜತೆಗೆ ಸಕಾಲಕ್ಕೆ ಮಳೆರಾಯನ ಕೃಪೆಯೂ ಬೇಕು. ಎಲ್ಲ ರೈತರು ರಾಸಾಯನಿಕ ಗೊಬ್ಬರ ಬಳಕೆ ಬದಲಿಗೆ ಸಾವಯವ ಗೊಬ್ಬರ ಬಳಸಿ ಅಧಿಕ ಇಳುವರಿ ಪಡೆಯುವ ಮೂಲಕ ಆರೋಗ್ಯಕರ ಪ್ರಯೋಜನ ಪಡೆಯಬಹುದು.  –ಶಾಂತಾಬಾಯಿ ಶಿವಶಂಕ್ರೆಪ್ಪ ಅಂಬಲಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆ, ಹರನಾಳ.

Advertisement

ಭೂ ಮಿಗೆ ರಾಸಾಯನಿಕ ಗೊಬ್ಬರ ಹಾಕಿದರೆ ದುಡ್ಡು ನಷ್ಟ  ಮಾಡಿಕೊಳ್ಳುವುದಲ್ಲದೆ ಭೂಮಿಯ ಫಲವತ್ತತೆಯೂಕಡಿಮೆಯಾಗುತ್ತದೆ. ಆದ್ದರಿಂದ ಎರೆಹುಳ ಗೊಬ್ಬರ ಬಳಕೆಗೆ ಹೆಚ್ಚು ಒತ್ತುನೀಡಬೇಕು. ಇದರಿಂದ ಬೆಳೆ ಉತ್ತಮಇಳುವರಿ ಬರುವುದಲ್ಲದೇ ಭೂ ಫಲವತ್ತತೆ ಯಥಾಸ್ಥಿತಿಯಾಗಿರುತ್ತದೆ. –ಡಾ| ಪ್ರಭುಸಾರಂಗದೇವ ಶಿವಾಚಾರ್ಯರು, ಸಾರಂಗಮಠ-ಗಚ್ಚಿನಮಠ, ಸಿಂದಗಿ.

ಅನಿಯಮಿತ ಮತ್ತು ಅವೈಜ್ಞಾನಿಕ ರಾಸಾಯನಿಕಗೊಬ್ಬರ ಉಪಯೋಗ ಮಾಡಿಕೊಂಡು ಭೂಮಿಯಫಲವತ್ತತೆಯನ್ನು ಕಳೆದುಕೊಂಡು ರೈತರು ಪರದಾಡುತ್ತಿದ್ದಾರೆ. ಮೊದಲು ರಾಸಾಯನಿಕ ಗೊಬ್ಬರ ಬಿಟ್ಟು ಸಾವಯವ ಕೃಷಿಗೆ ಬದಲಾಗುವುದರಿಂದ ಭೂಮಿಯ ಫಲವತ್ತತೆ ಕಾಪಾಡುವುದರ ಜತೆಗೆ ಉತ್ತಮ ಇಳುವರಿ ತೆಗೆಯಲು ಸಹಕಾರಿಯಾಗುತ್ತದೆ.  –ಡಾ|ಶಾಮರಾವ ಕುಲಕರ್ಣಿ, ಬೇಸಾಯ ಶಾಸ್ತ್ರಜ್ಞರು, ಭೀಮರಾಯನಗುಡಿ.

 

ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next