Advertisement

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ರೈತರ ವಿರೋಧ

10:46 AM May 26, 2020 | Suhan S |

ಹಾನಗಲ್ಲ: ಎಪಿಎಂಸಿ ಕಾಯ್ದೆಗೆ ತರಾತುರಿ ತಿದ್ದುಪಡಿ ಕುರಿತು ಸಂಸದ ಶಿವಕುಮಾರ ಉದಾಸಿ ಹಾಗೂ ರೈತ ಸಂಘದ ಪದಾಧಿಕಾರಿಗಳೊಂದಿಗೆ ನಡೆದ ಸಂವಾದದಲ್ಲಿ ಹಲವು ಅನುಮಾನಗಳಿಗೆ ಉತ್ತರ ಹುಡುಕುವ ಹಾಗೂ ರೈತರ ಆದಾಯ ಹೆಚ್ಚಿಸುವ ನಿಯಮಗಳಿಗೆ ಮಾತ್ರ ಅವಕಾಶ ನೀಡುವಂತೆ ಸರಕಾರಕ್ಕೆ ಸಂದೇಶ ರವಾನಿಸಲಾಯಿತು.

Advertisement

ಶಾಸಕ ಸಿ.ಎಂ. ಉದಾಸಿ ನಿವಾಸದಲ್ಲಿ ನಡೆದ ಚರ್ಚೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರೈತರ ಹಿತವನ್ನು ಕಡೆಗಣಿಸಿ ಬಂಡವಾಳಶಾಹಿಗಳ ಲಾಭಕ್ಕೆ ಈ ಹೊಸ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ರೈತನ ಬೆಳೆಗೆ ಬೆಲೆ ನಿರ್ಧರಿಸುವವರುಯಾರು. ಈ ವ್ಯಾಪಾರಿಗಳು ಯಾರ ಅಧೀನದಲ್ಲಿರುತ್ತಾರೆ ಎಂಬ ಪ್ರಶ್ನೆಯ ಜೊತೆಗೆ ಗಾಳಿಬಿಟ್ಟಾಗ ತೂರಿಕೊಂಡು ಹೋಗುವ ಈ ಎಪಿಎಂಸಿ ಕಾನೂನು ರೈತ ವಿರೋಧಿಯಾಗಿದೆ ಎಂದು ವಾದಿಸಿದರು.

ಸಂಸದ ಶಿವಕುಮಾರ ಉದಾಸಿ, ರೈತರ ಸಂದೇಹ ಸಲಹೆಗಳಿಗಾಗಿಯೇ ಈ ಸಭೆ ಕರೆಯಲಾಗಿದೆ. ಯಾವುದೇ ಕಾನೂನು ನಿಂತ ನೀರಲ್ಲ. ಇಲ್ಲಿ ರೈತರ ಹಿತಾಸಕ್ತಿ ನ್ಯಾಯಬದ್ಧ ರಚನಾತ್ಮಕ ಸಲಹೆಗಳನ್ನು ಒಳಗೊಂಡು ಕಾನೂನು ತರಲಾಗುತ್ತಿದೆ. ರೈತರ ಶೋಷಣೆ ಮಾಡಿ ಯಾವುದೇ ಸರಕಾರ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಈ ಹೊಸ ಎಪಿಎಂಸಿ ಕಾನೂನು ರೈತ ಪರವಾಗಿದೆ. ಇನ್ನೂ ಬದಲಾವಣೆಗೆ ಅವಕಾಶಗಳಿದ್ದು, ಸಲಹೆ ನೀಡುವಂತೆ ಮನವಿ ಮಾಡಿದರು.

ರೈತರ ಪ್ರಶ್ನೆಗಳಿಗೆ ಉತ್ತರಿಸಿದ ಸಂಸದ ಶಿವಕುಮಾರ ಉದಾಸಿ, ರೈತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಇದರಲ್ಲಿ ರೈತವಿರೋಧಿ ಯಾವುದೇ ಹುನ್ನಾರವಿಲ್ಲ. ಸಂದರ್ಭಕ್ಕನುಗುಣವಾಗಿ ಸರಕಾರ ಯಾವುದೇ ವ್ಯವಹಾರದ ಮೇಲೆ ನಿಗಾ ಇಟ್ಟಿರುತ್ತದೆ. ಹೀಗಾಗಿ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚೆಳ್ಳೇರ ಮಾತನಾಡಿ, ರೈತ ಬೆಳೆದ ಉತ್ಪನ್ನಗಳನ್ನು ಗ್ರೇಡ್‌ ಮಾಡಿ ಎ ಗ್ರೇಡ್‌ ಖರೀದಿಸಿ ಬಿ ಹಾಗೂ ಸಿ ಗ್ರೇಡ್‌ಗಳನ್ನು ಬಿಟ್ಟು ಹೋದರೆ ರೈತರ ಗತಿ ಏನು ಇದು ಯಕ್ಷ ಪ್ರಶ್ನೆ. ಬರುವ ವ್ಯಾಪಾರಿ ಕಂಪನಿಗಳ ಮೇಲೆ ಸರಕಾರದ ಹಿಡಿತವಿರಬೇಕು. ಈ ಎಪಿಎಂಸಿ ಕಾಯ್ದೆ ಮತ್ತೂಂದು ರೈತನನ್ನು ಹತ್ತಿಕ್ಕುವ ಕಾನೂನಾಗುವುದು ಬೇಡ ಎಂದು ಎಚ್ಚರಿಸಿದರು.

Advertisement

ಶಾಸಕ ಸಿ.ಎಂ. ಉದಾಸಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಸ್‌. ಅಕ್ಕಿವಳ್ಳಿ, ಬ್ಯಾಡಗಿ ತಾಲೂಕು ಎಪಿಎಂಸಿ ಅಧ್ಯಕ್ಷ ಕೆ.ಎಸ್‌. ನಾಯ್ಕರ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕಾಧ್ಯಕ್ಷ ಮರಿಗೌಡ ಪಾಟೀಲ, ಗೌವಾಧ್ಯಕ್ಷ ಮಾಲತೇಶ ಪರಪ್ಪನವರ, ರಾಜೂ ಗೌಳಿ, ಕಲ್ಯಾಣಕುಮಾರ ಶೆಟ್ಟರ, ರಾಜಣ್ಣ ಪಟ್ಟಣದ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next