Advertisement
ಈಗಾಗಲೇ ಪೈಪಲೈನ್ ಅಳವಡಿಸಲು ರೈತರೊಂದಿಗೆ ಒಪ್ಪಂದದ ಮೇರೆಗೆ ಅವರ ಜಮೀನಿನಲ್ಲಿ ಸುಮಾರು 6 ಅಡಿ ವ್ಯಾಸದ ಪೈಪಲೈನ್ ಅಳವಡಿಸಲಾಗುತ್ತಿದೆ. ವಿರೋಧ ವ್ಯಕ್ತಪಡಿಸಿದ ರೈತರ ಜಮೀನು ಹೊರತು ಪಡಿಸಿ ಒಪ್ಪಂದ ಮಾಡಿಕೊಂಡ ರೈತರ ಜಮೀನಿನಲ್ಲಿ ಪೈಪ್ ಅಳವಡಿಸಲಾಗುತ್ತಿದೆ.ಕೆಲ ರೈತರ ಒಪ್ಪಂದಕ್ಕೆ ಪಕ್ಕದ ಜಮೀನಿನ ರೈತರು ಇಕ್ಕಟ್ಟಿಗೆ ಸಿಲುಕಿಕೊಳ್ಳುವಂತಾಗಿದೆ. ಈಗಾಗಲೇ ರೈತರೊಬ್ಬರ ಅವರ ಜಮೀನಿನಲ್ಲಿ ಪೈಪು ಅಳವಡಿಸಲಾಗಿದ್ದು, ಪಕ್ಕದ ನಂತರದ ಜಮೀನು ಚಂದಪ್ಪ ಕಂದಗಲ್ ತಮ್ಮ ಪಾಲಿಗೆ ಕೇವಲ 3 ಎಕರೆ ಜಮೀನು ಇದ್ದು ಇದರಲ್ಲಿ ಪೈಪಲೈನ್ ಅಳವಡಿಸಿದರೆ ಜಮೀನು ಹಾಳಾಗುತ್ತಿದ್ದು, ಜಮೀನಿನ ಫಲವತ್ತತೆ ನಾಶವಾಗುತ್ತಿದೆ. ಕಂಪನಿವರು ಕೊಡುವ ಬಿಡಿಗಾಸು ಆಸೆ ಇಲ್ಲ ಇದರ ಸಹವಾಸವೇ ಬೇಡವೆಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೂ ಸಂಬಂಧಿಸಿದ ಕಂಪನಿ ಸದರಿ ರೈತರ ಮನ ಒಲಿಸಲು ಮುಂದಾಗಿದ್ದು, ತಹಶೀಲ್ದಾರ ಹಾಗೂ ಸಿಪಿಐ ಮೂಲಕ ಒತ್ತಡ ತಂತ್ರ ಅನುಸರಿಸುತ್ತಿರುವುದು ಗೊತ್ತಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸದರಿ ಉದ್ದೇಶಿತ ಪೈಪಲೈನ್ ಅಕ್ಕ ಪಕ್ಕದ ರೈತರಿಗೆ ಆತಂಕ ಶುರುವಾಗಿದೆ.
Advertisement
‘ಆಲಮಟ್ಟಿ-ಕುಡತಿನಿ ಉಷ್ಣ ಸ್ಥಾವರ’ ಪೈಪಲೈನ್ ಗೆ ರೈತರ ವಿರೋಧ
08:20 PM Aug 21, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.