Advertisement
1,658 ರೈತರು ಆತ್ಯಹತ್ಯೆ: ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾವಯವ ಗೊಬ್ಬರ ಬಳಸುವ ಅಗತ್ಯತೆಯಿದ್ದು ಇಳುವರಿ ಹೆಚ್ಚಾಗಿ ಪಡೆಯಲು ರೈತರು ರಸಗೊಬ್ಬರಗಳನ್ನೆ ಅವಲಂಬಿಸಿದ್ದಾರೆ. ಇದು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಕೃಷಿ ಸಚಿವರೇ ಹೇಳುವಂತೆ ರಾಜ್ಯ ದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ 1,658 ರೈತರು ಆತ್ಯಹತ್ಯೆ ಮಾಡಿಕೊಂಡಿದ್ದರೂ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಕಂಗಾಲಾಗಿರುವ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಲಾಭ ದಾಯಕ ವಲ್ಲದ ಕೃಷಿಯಿಂದ ಯುವಕರು ವಿಮುಖರಾಗುತ್ತಿದ್ದು ಪರ್ಯಾಯ ಉದ್ಯೋಗ ಕೈಗೊಳ್ಳುತ್ತಿದ್ದಾರೆ. ರಾಷ್ಟ್ರವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಪ್ರೋತ್ಸಾಹಿಸುವ ಯೋಜ ನೆಗಳನ್ನು ಜಾರಿಗೊಳಿಸಬೇಕು ಎಂದು ಕಿವಿ ಮಾತು ಹೇಳಿದರು.
Related Articles
ಪ್ರಮಾಣದ ಸಾವಯವ ಇಂಗಾಲ ಪತ್ತೆಯಾಗಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ. ಈಗಲಾದರೂ ರೈತರು ಎಚ್ಚೆತ್ತು ಸಂರಕ್ಷಣೆಯಲ್ಲಿ ತೊಡಗಬೇಕಾಗಿದೆ. ಸಂಸ್ಥೆಯ ಬೆಳ್ಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ರೈತರಿಗೆ ಉಚಿತ ಮಣ್ಣಿನ ಪರೀಕ್ಷೆ ನಡೆಸಲಾಗುತ್ತಿದೆ. ರಿಯಾಯಿತಿ ದರದಲ್ಲಿ ನೀರು, ಎಲೆ ಪರೀಕ್ಷೆ ಮಾಡಲಾಗುವುದು. ರೈತರಿಗಾಗಿ 1800 1212 333 ಸಂಖ್ಯೆ ಸಹಾಯವಾಣಿ ಪ್ರಾರಂಭಿಸಿದ್ದು ಉಚಿತ ಮೊಬೈಲ್ ಆ್ಯಪ್ ಸಿದ್ಧಪಡಿಸಿದ್ದು ಅಗತ್ಯ ಮಾಹಿತಿ ಪಡೆಯ ಬಹುದಾಗಿದೆ ಎಂದರು.
Advertisement
ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸೊಣ್ಣಪ್ಪ, ನಿರ್ದೇಶಕ ನಾರಾಯಣಪ್ಪ, ಕಾರ್ಯದರ್ಶಿ ಶ್ರೀನಿವಾಸಪ್ಪ, ತಾಲೂಕು ಕೃಷಿ ಸಹಾಯಕ ನಿರ್ದೇಶಕ ಶಂಕರಮೂರ್ತಿ, ರಸಗೊಬ್ಬರ ತಯಾರಿಕಾ ಸಂಸ್ಥೆ ಅಧಿಕಾರಿಗಳಾದ ನದೀಮ್, ಸಿದ್ದರಾಮರೆಡ್ಡಿ, ರುದ್ರಪ್ಪ, ನಾಗೇಶ್, ನಾಗರಾಜ್ ಉತ್ತಂಗಿ ಇನ್ನಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಉಚಿತ ಮಣ್ಣಿನ ಪರೀಕ್ಷೆ ಕಾರ್ಡ್‌ಗಳನ್ನು ವಿತರಿಸಲಾಯಿತು.