Advertisement

ಪ್ರಭಾವ ಬಳಸಿ ರೈತರ ಹಣ ಲೂಟಿ

05:12 PM Jan 01, 2022 | Team Udayavani |

ಕನಕಪುರ: ಹಾಲು ಉತ್ಪಾದಕರ ಕಟ್ಟಡ ಕಾಮಗಾರಿಯಲ್ಲಿ ನಕಲಿ ಎಸ್ಟಿಮೆಟ್‌ ಸೃಷ್ಟಿಸಿ ಸಂಘದಅಧ್ಯಕ್ಷ ಮತ್ತು ಕಾಂಗ್ರೆಸ್‌ ಮುಖಂಡ ಹಾಗೂ ಹಾಲುಒಕ್ಕೂಟಗಳ ಶಿಬಿರದ ಉಪವ್ಯವಸ್ಥಾಪಕರು ಶಾಮಿಲಾಗಿರೈತರ ಹಣ ಲೂಟಿ ಮಾಡಿದ್ದಾರೆ ಎಂದು ಸಂಘದಸದಸ್ಯ ಕಾಳರಾಜು ಗಂಭೀರವಾದ ಆರೋಪ ಮಾಡಿದರು.

Advertisement

ತಾಲೂಕಿನ ಸಾತನೂರು ಹೋಬಳಿಯ ಕಬ್ಟಾಳು ಗ್ರಾಮದಲ್ಲಿ ಹಾಲು ಉತ್ಪಾದಕರಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರದಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಡೇರಿ ಸಂಘದ ಅಧ್ಯಕ್ಷಸ್ವಾಮಿ ಮತ್ತು ಕಾಂಗ್ರೆಸ್‌ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಶಂಕರ್‌ ತಮ್ಮ ರಾಜಕೀಯ ಪ್ರಭಾವ ಬಳಸಿ ಸಂಘದ ಮುಖ್ಯಕಾರ್ಯನಿರ್ವಹಕ ಅಧಿಕಾರಿಗೆ ತಪ್ಪು ಮಾಹಿತಿ ನೀಡಿ ಅವರ ಮೇಲೆ ಒತ್ತಡ ತಂದು 14 ಲಕ್ಷ ಹಣಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಒಂದು ವರ್ಷದ ಹಿಂದೆ ನೂತನವಾಗಿ ನಿರ್ಮಾಣ ಮಾಡಿರುವ ಹಾಲು ಉತ್ಪಾದಕರ ಸಹಕಾರ ಸಂಘದನೂತನ ಕಟ್ಟಡಕ್ಕೆ 11.92ಲಕ್ಷ ರೂ ಗೆ ಎಸ್ಟಿಮೆಟ್‌ರೂಪಿಸಲಾಗಿತ್ತು. ಆದರೆ ಕಾಮಗಾರಿ ನೆಪದಲ್ಲಿಹಣ ಲೂಟಿ ಮಾಡಲು ಸಂಘದ ಅಧ್ಯಕ್ಷ ಸ್ವಾಮಿ,ಆಡಳಿತ ಮಂಡಳಿಯ ಕೆಲ ನಿರ್ದೇಶಕರು,ಜಿಪಂ ಮಾಜಿ ಸದಸ್ಯ ಶಂಕರ್‌ ಅವರೊಂದಿಗೆಶಾಮಿಲಾಗಿದ್ದಾರೆ. ಶಂಕರ್‌ ತಮ್ಮರಾಜಕೀಯ ಪ್ರಭಾವ ಬಳಸಿ ಸಂಘದಮುಖ್ಯ ಕಾರ್ಯನಿರ್ವಾಹಕರಿಗೆ ತಪ್ಪುಮಾಹಿತಿ ನೀಡಿ 26 ಲಕ್ಷ ರೂಗೆ ನಕಲಿಎಸ್ಟಿಮೆಟ್‌ ಸೃಷ್ಟಿಸಿ ಸಂಘದಿಂದ 14 ಲಕ್ಷ.ವಿಧಾನ ಪರಿಷತ್‌ ಸದಸ್ಯರ ಅನುದಾನದಿಂದ3.ಹಾಲು ಒಕ್ಕೂಟದಿಂದ 3, ಕೆಎಂಎಫ್ ನಿಂದ 3, ಹಾಗೂ ಧರ್ಮ ಸ್ಥಳ ಸಂಸ್ಥೆಯಿಂದ1ಲಕ್ಷ ಸೇರಿ ಒಟ್ಟು 24 ಲಕ್ಷ ರೂ.ಹಣ ಬಿಡುಗಡೆಮಾಡಿಕೊಂಡು ಸಂಘದ ಸದಸ್ಯರಿಗೆ ವಂಚಿಸಿದ್ದಾರೆ.

ಸಹಕಾರ ಸಂಘದ ಮೇಲಧಿಕಾರಿಗಳು ಸೂಕ್ತ ತನಿಖೆನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಂಡು ರೈತರಹಣವನ್ನು ವಸೂಲಿ ಮಾಡಬೇಕು ಎಂದು ಸಂಘದ ಸದಸ್ಯ ಕಾಳರಾಜು ಆಗ್ರಹ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next