Advertisement

ರೈತರನ್ನುಳಿಸಿ ಲಾಭ ಪಡೆಯಿರಿ

05:12 PM Nov 27, 2020 | Suhan S |

ಅಫಜಲಪುರ: ಯಾವುದೇ ಕಾರ್ಖಾನೆ, ಕಂಪನಿಗೆ ಲಾಭದ ಉದ್ದೇಶ ಇರುವುದು ಸಹಜ. ಆದರೆ ರೈತರನ್ನು ಉಳಿಸಿ ಆಮೇಲೆ ಲಾಭದ ಲೆಕ್ಕ ಹಾಕಿ ಎಂದುಶಾಸಕ ಎಂ.ವೈ. ಪಾಟೀಲ ಮನವಿ ಮಾಡಿದರು.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ರೇಣುಕಾ ಸಕ್ಕರೆ ಕಾರ್ಖಾನೆ ಅ ಧಿಕಾರಿಗಳು ಮತ್ತು ರೈತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಒಂದೇ ಸಕ್ಕರೆ ಕಾರ್ಖಾನೆ ಇದೆ. ಆದ್ದರಿಂದ ಆಡಳಿತ ಮಂಡಳಿ ಜವಾಬ್ದಾರಿಯಿಂದ ಇರಬೇಕು. ರೈತರು ಕಷ್ಟದಲ್ಲಿದ್ದಾರೆ. ಪ್ರವಾಹದಿಂದ ಕಬ್ಬು ಹಾಳಾಗುತ್ತಿದೆ. ಇಂತಹ ರೈತರಿಗೆ ಮೊದಲ ಆದ್ಯತೆ ನೀಡಿ, ಕಬ್ಬು ಕಟಾವು ಮಾಡಿಸಿ ಎಂದು ಸಲಹೆ ನೀಡಿದರು.

ಕಾರ್ಖಾನೆ ಸರ್ಕಾರದ ನಿಯಮ ಪಾಲಿಸುತ್ತಿಲ್ಲ. ಕಾರ್ಖಾನೆ ಆರಂಭಿಸುವ ಮುನ್ನ ರೈತರು, ಜನಪ್ರತಿನಿ ಧಿಗಳೊಂದಿಗೆ ಸಭೆ ನಡೆಸಿ, ನಡಾವಳಿ ಮಾಡಿದ ಪ್ರಕಾರ ನಡೆದುಕೊಳ್ಳಬೇಕು. ಆದರೆ ಮನಸೋ ಇಚ್ಚೆ ನಡೆದುಕೊಳ್ಳುತ್ತಿದ್ದಿರಿ. ಸರ್ಕಾರರೈತರ ನೆರವಿಗೆ ಬರುವ ಮುನ್ನ ನೀವು ಬರಬೇಕಿತ್ತು. ಆದರೆ ನಿಮ್ಮಲ್ಲಿ ರೈತರ ಮೇಲೆ ಕಾಳಜಿ ಕಾಣುತ್ತಿಲ್ಲ ಎಂದು ತರಾಟೆ ತೆಗೆದುಕೊಂಡರು.

ಕಾರ್ಖಾನೆಗೆ ಸಂಬಂಧ ಪಟ್ಟ ಘತ್ತರಗಿ ಗ್ರಾ.ಪಂಗೆ ನೀವು ತೆರಿಗೆ ಕಟ್ಟುತ್ತಿಲ್ಲ.ಆದ್ದರಿಂದ ಕೂಡಲೇ ಕಾರ್ಖಾನೆ ಪ್ರಾರಂಭದಿಂದ ಇಲ್ಲಿಯವರೆಗೆ ಪಂಚಾಯಿತಿಗೆ ಬರಬೇಕಾಗಿರುವ ತೆರಿಗೆ ಪಾವತಿಸಿ ಎಂದು ಸೂಚಿಸಿದರು.

ಶರಣು ಕುಂಬಾರ, ಸಿದ್ದರಾಮ ದಣ್ಣೂರ, ಅರ್ಜುನ ಕುಂಬಾರ, ಶಂಕರ ಸೋಬಾನಿ ಮಾತನಾಡಿ, ಕಬ್ಬು ಕಟಾವುಮಾಡಿ ಕಾರ್ಖಾನೆಗೆ ಸಾಗಿಸಲುಮಾರ್ಗ ವೆಚ್ಚವನ್ನು ಕಿಲೋ ಮಿಟರ್‌ ಪ್ರಕಾರ ನಿಗದಿ ಪಡಿಸಬೇಕು. ಕಟಾವಾದ ಹದಿನೈದು ದಿನಗಳಲ್ಲಿ ರೈತರ ಖಾತೆಗೆ ಹಣ ಜಮೆ ಮಾಡುತ್ತಿಲ್ಲ, ಯಾಕೆ ಹೀಗೆ ಎಂದು ಕೇಳಿದರೆ ಎಫ್‌ಆರ್‌ಪಿ ಬರುವುದಿಲ್ಲ ಎಂದು ಹಾರಿಕೆ ಉತ್ತರ ನಿಡಲಾಗುತ್ತಿದೆ.

Advertisement

ಆದರೆ ಇಥೆನಾಲ್‌ ಹಾಗೂ ಸ್ಪಿರಿಟ್‌ ತಯಾರಿಕೆ ಬಿಟ್ಟರೆ ಸರಿಯಾಗಿ ಎಫ್‌ ಆರ್‌ಪಿ ಬರುತ್ತದೆ. ಇದೆಲ್ಲವನ್ನು ಕಾರ್ಖಾನೆಯವರು ಮಾಡದೆ ತಮ್ಮ ಲಾಭಕ್ಕಾಗಿ ರೈತರನ್ನು ಬಲಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರಲ್ಲದೇ, ವಾರದೊಳಗೆ ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಖಾನೆ ಅಧಿಕಾರಿ ಸಂಜುಕುಮಾರ ಮಾತನಾಡಿ, ಎಫ್‌ಆರ್‌ಪಿ ಪ್ರಕಾರವೇ ನಾವು ರೈತರಿಗೆ ಹಣ ಪಾವತಿ ಮಾಡುತ್ತಿದ್ದೇವೆ. ಸಭೆಯಲ್ಲಿ ನಡೆದ ಚರ್ಚೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು, ಸಮಸ್ಯೆ ಪರಿಹರಿಸುವ ಕೆಲಸ ಮಾಡಲಾಗುವುದು ಎಂದರು.

ತಹಶೀಲ್ದಾರ್‌ ನಾಗಮ್ಮ ಕೆ. ಮಾತನಾಡಿ, ಕಾರ್ಖಾನೆಯಲ್ಲಿನಸಮಸ್ಯೆ ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ. ಆದಷ್ಟು ಬೇಗ ಶಾಸಕರು, ಕಂದಾಯ ಇಲಾಖೆ ಹಾಗೂ ರೈತರ ಜಂಟಿ ಸಭೆ ನಡೆಸಬೇಕು. ರೈತರಿಗೆ ಅನ್ಯಾಯವಾದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ತಾ.ಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ಸದಸ್ಯ ರಾಜು ಬಬಲಾದ, ಮುಖಂಡರಾದ ದತ್ತು ಜಮಾದಾರ,ರಘುನಾಥ, ಸುನಿಲ ಹೊಸಮನಿ, ರಾಜು ಬಡದಾಳ, ಸಿದ್ದು ದಣ್ಣುರ, ವಿಶ್ವನಾಥ ಪಿಎಸ್‌ಐ ವಿಶ್ವನಾಥ ಮುದರೆಡ್ಡಿ ಮತ್ತಿತರರು ಇದ್ದರು.

ರೇಣುಕಾ ಸಕ್ಕರೆ ಕಾರ್ಖಾನೆಯಲ್ಲಿ ಬಡ ರೈತರಿಗೆ ಅನ್ಯಾಯವಾಗುತ್ತಿದೆ. ಯಾರು ಅಧಿಕಾರಿಗಳಿಗೆ ಹಣ ನೀಡುತ್ತಾರೋ, ದಬ್ಟಾಳಿಕೆ ಮಾಡುತ್ತಾರೋ ಅಂತವರ ಕಬ್ಬನ್ನು ಮೊದಲು ತೆಗೆದುಕೊಳ್ಳಲಾಗುತ್ತಿದೆ. ಆರರಿಂದ ಎಂಟು ತಿಂಗಳ ಕಬ್ಬು ತೆಗೆದುಕೊಳ್ಳುತ್ತಿದ್ದಾರೆ. 12 ತಿಂಗಳು ಕಷ್ಟಪಟ್ಟು ಬೆಳೆದ ಕಬ್ಬನ್ನು ತೆಗೆದುಕೊಳ್ಳದೆ ತಾರತಮ್ಯ ಮಾಡುತ್ತಿದ್ದಾರೆ. ತೂಕದಲ್ಲೂವ್ಯತ್ಯಾಸ ಮಾಡುತ್ತಿದ್ದಾರೆ. ಎಫ್‌ಆರ್‌ಪಿ ಪ್ರಕಾರ ಹಣ ಪಾವತಿಸುತ್ತಿಲ್ಲ. ಕೆಪಿಆರ್‌ ಕಾರ್ಖಾನೆ ನಿಗದಿ ಪಡಿಸಿದ ಹಣವನ್ನು ಇಲ್ಲೂ ನೀಡಬೇಕು. – ಶ್ರೀಮಂತ ಬಿರಾದಾರ, ರೈತ

Advertisement

Udayavani is now on Telegram. Click here to join our channel and stay updated with the latest news.

Next