Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್, ಮಹಾ ಪಂಚಾಯತ್ ಗೆ ಸಾವಿರಾರು ಮಂದಿ ರೈತರು ಭಾಗವಹಿಸಲಿದ್ದಾರೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಚರ್ಚೆ ಮಾಡಲಾಗುತ್ತದೆ. ಎಷ್ಟು ಮಂದಿ ರೈತರು ಸೇರುತ್ತಾರೆ ಎನ್ನುವುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ದೇಶದಾದ್ಯಂತ ಸಹಸ್ರಾರು ಮಂದಿ ಭಾಗಿಯಾಗಲಿದ್ದಾರೆ. ಕೇಂದ್ರ ಸರ್ಕಾರದ ವಿರುದ್ದ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದಿದ್ದಾರೆ.
Related Articles
Advertisement
ಸರಿ ಸುಮಾರು 2000ಕ್ಕೂ ಅಧಿಕ ಮಂದಿ ರೈತರು ಅಮೃತಸರದಿಂದ ಬೆಳಿಗ್ಗೆ 4 ಗಂಟೆಗೆ, ಜಲಂಧರ್ ನಿಂದ 5 ಗಂಟೆಗೆ ಮತ್ತು ಲುಧಿಯಾನದಿಂದ ಬೆಳಿಗ್ಗೆ 6 ಗಂಟೆಗೆ ಎಕ್ಸ್ ಪ್ರೆಸ್ ರೈಲುಗಳ ಮೂಲಕ ಬರಲಿದ್ದಾರೆ.
ದೆಹಲಿ ಗಡಿಯಲ್ಲಿರುವ ಪ್ರತಿಭಟನಾ ಸ್ಥಳಗಳಿಂದ 400-500 ರೈತರು ಮಹಾಪಂಚಾಯತ್ ಗೆ ತೆರಳುತ್ತಾರೆ. ರೈತರು ಟಿಕ್ರಿ ಮತ್ತು ಗಾಜಿಪುರ ಗಡಿಗಳಿಂದ ಬಸ್ಸುಗಳಲ್ಲಿ ಹೊರಡುತ್ತಿದ್ದಾರೆ. ಪ್ರತಿಭಟನಾ ಸ್ಥಳಗಳಿಂದ ಎರಡು ಬಸ್ಸುಗಳು ಈಗಾಗಲೇ ಮುಜಫರ್ ನಗರಕ್ಕೆ ಶುಕ್ರವಾರ ರಾತ್ರಿ ಹೊರಟವು. ಇಂದು(ಶನಿವಾರ) ಬೆಳಿಗ್ಗೆ ಇನ್ನೆರಡು ಹೊರಟಿದ್ದವು ಮತ್ತು ಇನ್ನೂ ಎರಡು ಬಸ್ ಗಳು ಇಂದು ಸಂಜೆ 4 ಗಂಟೆಗೆ ಹೊರಡುತ್ತವೆ.
ಆದಾಗ್ಯೂ, ರೈತರು ಮುಖ್ಯವಾಗಿ ಹಳ್ಳಿ ಹಳ್ಳಿಗಳಿಂದ ಬರುತ್ತಿದ್ದಾರೆ. ಹರಿಯಾಣ, ಮಹಾರಾಷ್ಟ್ರ ಮತ್ತು ಭಾರತದ ಇತರ ಭಾಗಗಳ ರೈತರು ಸಹ ಸೇರುವ ನಿರೀಕ್ಷೆಯಿದೆ ಎಂದು ಟಿಕಾಯತ್ ತಿಳಿಸಿದ್ದಾರೆ.
ಇನ್ನು, ಈ ಮಹಾಪಂಚಾಯತ್ ಕೇವಲ ಚುನಾವಣೆಗೆ ಸಂಬಂಧಿಸಿಲ್ಲ. ಚುನಾವಣೆ ಆರು ತಿಂಗಳ ನಂತರ. ಯುಪಿಯಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಯುಪಿಯಲ್ಲಿ ವಿದ್ಯುತ್ ದರಗಳು ಕೂಡ ಹೆಚ್ಚಾಗಿದೆ. ಕಳೆದ 2016 ರಿಂದ ಕಬ್ಬಿನ ದರ ಏರಿಕೆಯಾಗಿಲ್ಲ. ಕೇಂದ್ರವು ಇದನ್ನು ಪ್ರತಿ ಕಿಲೋಗ್ರಾಂಗೆ ಐದು ಪೈಸಯಂತೆ ಹೆಚ್ಚಿಸಿದೆ. ನೀವು ರೈತರನ್ನು ಅವಮಾನಿಸುತ್ತಿದ್ದೀರಾ? ಎಂದು ಅವರು ಕಿಡಿ ಕಾರಿದ್ದಾರೆ.
ರೈತರ ಮಹಾ ಪಂಚಾಯತ್ ಹಿನ್ನೆಲೆಯಲ್ಲಿ ಹೆಚ್ಚಿದ ಬಿಗಿ ಭದ್ರತೆ :
ಕೇಂದ್ರದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳು ಸೇರಿದಂತೆ ರೈತರಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಭಾನುವಾರ(ಸೆ.5) ಇಲ್ಲಿ ಆಯೋಜಿಸಲಾಗಿರುವ ‘ರೈತರ ಮಹಾಪಂಚಾಯತ್‘ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.
ಭದ್ರತೆಗಾಗಿ ಆರು ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆಗಳ (ಪಿಎಸಿ) ತಂಡಗಳು ಮತ್ತು ಎರಡು ಕ್ಷಿಪ್ರ ಕಾರ್ಯಪಡೆಯ (ಆರ್ ಎ ಎಫ್) ತುಕಡಿಗಳನ್ನು ನಿಯೋಜಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಹಾರನ್‌ಪುರ ವಲಯದ ಡಿಐಜಿ ಪ್ರೀತಿಂದರ್ ಸಿಂಗ್, ‘ರೈತ ಮಹಾಪಂಚಾಯತ್ ಹಿನ್ನೆಲೆಯಲ್ಲಿ ಐದು ಎಸ್‌ಎಸ್‌ಪಿ, ಏಳು ಎಎಸ್‌ಪಿ ಮತ್ತು 40 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ಭದ್ರತೆಗೆ ನಿಯೋಜಿಸಲಾಗುವುದು. ಇಡೀ ಕಾರ್ಯಕ್ರಮವನ್ನು ವಿಡಿಯೊ ಚಿತ್ರೀಕರಣ ಮಾಡಿಸಲಾಗುವುದು‘ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೆರಿಸ್ಟೋ ಮೇಲೆ ಹಲ್ಲೆ ಆರೋಪ: ವಿಚಿತ್ರ ಅಭಿಮಾನಿ ‘ಜಾರ್ವೋ’ ಇದೀಗ ಪೊಲೀಸರ ಅತಿಥಿ!