Advertisement

ಜೇನು ಸಾಕಾಣಿಕೆಯಿಂದ ರೈತರ ಬದುಕು ಸಿಹಿ; ಜೇನು ತುಪ್ಪ ಒಂದು ಪಂಚಾಮೃತ

06:28 PM Jun 13, 2023 | Team Udayavani |

ಬಾಗಲಕೋಟೆ: ಜೇನು ಹುಳುಗಳು ಸತತ ಕಾರ್ಯಶೀಲರಾಗಿರುತ್ತವೆ. ಅದೇ ರೀತಿ ರೈತರು ಜೇನು ಸಾಕಾಣಿಕೆಯನ್ನು ತಮ್ಮ ಕೃಷಿಯಲ್ಲಿ ಅಳವಡಿಸಿ ಚಟುವಟಿಕೆಯಿಂದ ಕಾಯಕವನ್ನು ಮಾಡಿದರೆ ಎಲ್ಲ ಕೆಲಸದಲ್ಲಿಯೂ ರೈತರು ಯಶಸ್ಸು ಪಡೆಯಬಹುದು ಎಂದು ಕಮತಗಿ ಹುಚ್ಚೇಶ್ವರ ಮಠದ ಶ್ರೀ ಹುಚ್ಚೇಶ್ವರ ಸ್ವಾಮೀಜಿ ಹೇಳಿದರು.

Advertisement

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ವಿಸ್ತರಣಾ ನಿರ್ದೇಶನಾಲಯ ಮತ್ತು ಮಕರಂದ ಜೇನು ಕೃಷಿ ರೈತ ಉತ್ಪಾದಕರ ಸಂಸ್ಥೆ, ತೋವಿವಿ ಸಹಯೋಗದಲ್ಲಿ ಸೋಮವಾರ ಜರುಗಿದ ಮಕರಂದ ಜೇನು ಕೃಷಿ ರೈತ ಉತ್ಪಾದಕರ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆರೂರಿನ ಚರಂತಿಮಠ ಶ್ರೀ ಡಾ| ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜೇನು ತುಪ್ಪ ಒಂದು ಪಂಚಾಮೃತ ಅದರಲ್ಲಿರುವ ಔಷಧಿಯ ಗುಣಗಳು ಹಲವಾರು ರೋಗಗಳನ್ನು ಗುಣಪಡಿಸುತ್ತದೆ ಮತ್ತು ಪ್ರತಿದಿನ ನಿಯಮಿತವಾಗಿ ಮಧುವನ್ನು ಸೇವಿಸುವುದರಿಂದ ಮಾನವನ ಆಯಸ್ಸು ವೃದ್ಧಿ ಆಗುತ್ತದೆ ಹಾಗೂ ಜೇನು ಕೃಷಿಯಿಂದ ಪ್ರಕೃತಿ ಕಾಪಾಡಬಹುದು ಎಂದರು.

ತೋಟಗಾರಿಕೆ ವಿವಿಯ ಶಿಕ್ಷಣ ನಿರ್ದೇಶಕ ಹಾಗೂ ಪ್ರಭಾರ ಕುಲಪತಿ ಡಾ|ಎನ್‌.ಕೆ. ಹೆಗಡೆ ಮಾತನಾಡಿ, ಹಾಲು ಮತ್ತು ಜೇನು ಪ್ರಕೃತಿಯ ಕೊಡುಗೆಗಳು ಮತ್ತು ಜೇನು ಕೃಷಿಗಾಗಿ ಸರ್ಕಾರದಿಂದ ಇರುವ ತರಬೇತಿಗಳು ಹಾಗೂ ಎಲ್ಲ ಸೌಲಭ್ಯಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ನೈಸರ್ಗಿಕ ಕೃಷಿ ಹೆಚ್ಚು ಪ್ರೋತ್ಸಾಹ ನೀಡಿ ವಿಷಮುಕ್ತ ಬೆಳೆ ಬೆಳೆದು ಪ್ರಕೃತಿ ಕಾಪಾಡಬೇಕು ಎಂದು ತಿಳಿಸಿದರು. ಅಂಚೆ ಇಲಾಖೆಯಿಂದ ಆಗಮಿಸಿದ ಶ್ರೀನಿವಾಸ ಹೊಸಮನಿ ಅವರು ಪ್ರಚಲಿತದಲ್ಲಿ ಅಂಚೆ ಇಲಾಖೆಯಲ್ಲಿ ಯೋಜನೆಗಳನ್ನು ತಿಳಿಸಿದರು.

ತೋವಿವಿಯ ಸಂಶೋಧನಾ ನಿರ್ದೇಶಕ ಡಾ|ಎಚ್‌.ಪಿ. ಮಹೇಶ್ವರಪ್ಪ ತೋಟಗಾರಿಕೆ ಕಾಲೇಜಿನ ಡೀನ್‌ ಡಾ|ಬಾಲಾಜಿ ಕುಲಕರ್ಣಿ, ನಬಾರ್ಡ್‌ನ ಡಿಡಿಎಂ ಮಂಜುನಾಥ ರೆಡ್ಡಿ, ಜಿಪಂನ ತೋಟಗಾರಿಕೆ ಉಪ ನಿರ್ದೇಶಕ ಡಾ| ರಾಹುಲಕುಮಾರ ಭಾವಿದೊಡ್ಡಿ, ತೋಟಗಾರಿಕೆ ವಿವಿಯ ಕೀಟ ಶಾಸ್ತ್ರದ ಪ್ರಾಧ್ಯಾಪಕ ಡಾ| ವೆಂಕಟೇಶಲು ಬಿ., ಸಹಾಯಕ ಪ್ರಾಧ್ಯಾಪಕ ಪ್ರೊ|
ಡಾ|ರಾಮನಗೌಡ ಎಚ್‌., ಡಾ|ಎಸ್‌.ಎಂ. ಪ್ರಸನ್ನ ಉಪಸ್ಥಿತರಿದ್ದರು.

Advertisement

ಹನುಮಂತಗೌಡ ನಾಯ್ಕರ ಸ್ವಾಗತ ಗೀತೆ ಹಾಡಿದರು. ಮಕರಂದ ಜೇನು ಕೃಷಿ ರೈತ ಉತ್ಪಾದಕರ ಸಂಸ್ಥೆಯ ಖಜಾಂಚಿ ಪುಷ್ಪಾ ಅಂಗಡಿ ಸ್ವಾಗತಿಸಿದರು. ಫೆಸಿಲಿಟೇಟರ ಎಫ್‌ಪಿಒ ಪೂರ್ಣಿಮ ಕೊಪ್ಪದ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಅರ್ಥಶಾಸ್ತ್ರದ
ಸಹಾಯಕ ಪ್ರಾಧ್ಯಾಪಕ ಶ್ರೀಪಾದ ವಿಶ್ವೇಶ್ವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next