ಸಿಂಧನೂರು: ಇಂದು ದೇಶ ಮತ್ತು ಕರ್ನಾ ಟಕದಲ್ಲಿ ಸಹಕಾರಿ ಕ್ಷೇತ್ರವೂ ಬಲಿಷ್ಠವಾಗಿ ಮುನ್ನಡೆಯಲು ರೈತರು ಹಾಗೂ ಸಣ್ಣ ಪ್ರಮಾಣದ ವರ್ತಕರೇ ಜೀವಾಳವಾಗಿದ್ದಾರೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ್ ಹೇಳಿದರು.
ಇಲ್ಲಿನ ಪಿಎಲ್‌ಡಿ ಬ್ಯಾಂಕಿನಲ್ಲಿ ಹಮ್ಮಿಕೊಂಡಿದ್ದ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರವೂ ಒಬ್ಬರಿಗೊಬ್ಬರೂ ಸಹಕಾರ ನೀಡುವ ತತ್ವದಿಂದಲೇ ಮುನ್ನಡೆದಿದೆ. ಸಾಲ ಪಡೆದ ತಿರುವಳಿ ಮಾಡುವುದರಿಂದ ಸಹಕಾರಿ ಸಂಸ್ಥೆಗಳು ಬೆಳೆಯುತ್ತಿವೆ. ಆ ನಿಟ್ಟಿನಲ್ಲಿ ಪಿಎಲ್‌ಡಿ ಬ್ಯಾಂಕ್ ಹೊಸ ಅಧ್ಯಾಯ ಆರಂಭಿಸುವ ಮೂಲಕ ಅಭಿವೃದ್ಧಿಯತ್ತ ಮುನ್ನಡೆದಿದೆ. ನೂರಾರು ರೈತರಿಗೆ ಸಾಲದ ರೂಪದಲ್ಲಿ ನೆರವು ನೀಡಿ, ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವ ಕೆಲಸ ಮಾಡುತ್ತಿದೆ. ಇಂತಹ ಪ್ರಕ್ರಿಯೆ ಚುರುಕಾಗಿ ನಡೆದ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ಸಿಂಧನೂರಿನ ಪಿಎಲ್‌ಡಿ ಬ್ಯಾಂಕ್‌ಗೆ ಉತ್ತಮ ರ್‍ಯಾಂಕ್ ಒದಗಿಬಂದಿದೆ. ಇದರ ಕೀರ್ತಿ ರೈತರು ಮತ್ತು ನನ್ನೆಲ್ಲ ಬ್ಯಾಂಕಿನ ನಿರ್ದೇಶಕರಿಗೆ ಸಲ್ಲುತ್ತದೆ ಎಂದರು.
ಪಿಎಲ್‌ಡಿ ಬ್ಯಾಂಕಿನ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಯ್ಯಸ್ವಾಮಿ ವಾರ್ಷಿಕ ಮಹಾಸಭೆ ವರದಿಯನ್ನು ವಾಚನ ಮಾಡಿದರು.
ಉಪಾಧ್ಯಕ್ಷ ಸಿದ್ದನಗೌಡ ಮಾಟೂರು, ನಿರ್ದೇಶಕರಾದ ಪಕ್ಕೀರಪ್ಪ ಹೆಡಗಿನಾಳ, ಸಂಜಯ್ ಕುಮಾರ್ ಜೈನ್, ವೆಂಕಪ್ಪ ತಿಪ್ಪನಹಟ್ಟಿ, ಬಸವರಾಜ ಉಪ್ಪಳ, ರೇವಣಸಿದ್ದಪ್ಪ ಸಂಗಟಿ, ಶಿವಪ್ಪ ನಾಯಕ ಯದ್ದಲದೊಡ್ಡಿ, ಗಂಗಮ್ಮ ಜಾಲಿಹಾಳ, ಹಂಪಮ್ಮ ಉಮಲೂಟಿ, ರಮೇಶ ಚಿಕ್ಕಕಡಬೂರು, ರಮೇಶ ಮುಕ್ಕುಂದಾ, ಶಿವಪ್ಪ ಸಾಸಲಮರಿ, ಅಮರೇಶ ಅಂಗಡಿ ಇದ್ದರು.