Advertisement
ಹೌದು, ಪ್ರತಿವರ್ಷ ಮುಂಗಾರು ಹಂಗಾಮಿನಲ್ಲಿ ಸಕಾಲಿಕ ಮಳೆಗೆ ಬಹುತೇಕ ರೈತರು ಹೆಸರು ಬೆಳೆ ಬೆಳೆಯುವುದು ಸಾಮಾನ್ಯ. ಆದರೆ ಈ ಬಾರಿ ಕೆಲವರು ಹೆಸರು ಬೆಳೆ ಬದಲಿಗೆ ಅಲಸಂದಿ ಬಿತ್ತನೆ ಮಾಡಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ಮಾಹಿತಿ ಪ್ರಕಾರ 6,026 ಹೆಕ್ಟೇರ್ ನಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಸಕಾಲಿಕ ಮಳೆಯಿಂದ ಉತ್ತಮ ಬೆಳೆ ಇದೆ. ಪ್ರತಿ ವರ್ಷ ಹೆಸರು ಬೆಳೆಯುತ್ತಿದ್ದ ರೈತರ ಪೈಕಿ ಕೆಲವರು ಅಲಸಂದಿ ಬೆಳೆ ಬೆಳೆಯಲು ಮುಂದಾಗಿದ್ದಾರೆ.
Related Articles
Advertisement
ಅಲಸಂದಿಯ ಬುಡ್ಡಿ (ಕಾಯಿ) ದೊಡ್ಡವು ಆಗಿರುವುದರಿಂದ ಕಟಾವು ಸಲೀಸು. ಈ ಬಾರಿ ಮುಂಗಾರು ಪೂರ್ವ ಮಳೆಯಾಗಿದ್ದು, 6 ಎಕರೆಯಲ್ಲಿ ಅಲಸಂದಿ ಬೆಳೆದಿರುವೆ. ಈ ಬೆಳೆ ಮೂರು ತಿಂಗಳಿನಲ್ಲಿ ಮುಗಿಯುತ್ತಿದ್ದು, ಹಿಂಗಾರು ಬೆಳೆಗೆ ಅವಕಾಶ ಸಿಗುತ್ತದೆ. ಸೂರ್ಯಕಾಂತಿ ಬೆಳೆಗಿಂತ ಅಲಸಂದಿ ಧಾನ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ಜಾನುವಾರುಗಳಿಗೆ ಹೊಟ್ಟು ಸಿಗಲಿದೆ. –ಹನುಮಂತಪ್ಪ ದೊಡ್ಡಪ್ಪ ಕಂಬಳಿ, ಗುಮಗೇರಾ ರೈತ
ದ್ವಿದಳ ಧಾನ್ಯ ಬಳಕೆ ಹೆಚ್ಚಿದ್ದು, ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಸುಧಾರಿತ ಅಲಸಂದಿ ತಳಿಗಳು ಲಭ್ಯ ಇದೆ. ಅಲ್ಪಾವಧಿ ಬೆಳೆಯಾಗಿರುವ ಅಲಸಂದಿ ಬೆಳೆಯುವುದರಿಂದ ಭೂಮಿಗೆ ಹಸಿರೆಲೆ ಗೊಬ್ಬರ ಸಿಗಲಿದ್ದು, ಫಲವತ್ತತೆ ಹೆಚ್ಚಲಿದೆ. ಮಾರುಕಟ್ಟೆಯಲ್ಲಿ ಅಲಸಂದಿಗೆ ಸ್ಥಿರವಾದ ಉತ್ತಮ ಬೆಲೆ ಖಾತ್ರಿ ಹಿನ್ನೆಲೆಯಲ್ಲಿ ರೈತರು ಅಲಸಂದಿ ಬೆಳೆ ಬೆಳೆದಿದ್ದಾರೆ. -ಬಾಲಪ್ಪ ಜಲಗೇರಿ, ತಾಂತ್ರಿಕ ಕೃಷಿ ಸಹಾಯಕ ಕೃಷಿ ಇಲಾಖೆ ಕುಷ್ಟಗಿ
ಮಂಜುನಾಥ ಮಹಾಲಿಂಗಪುರ