ಕೋಟ: ಕೃಷಿ ಇಲಾಖೆಯಿಂದ ಹಲವಾರು ಜನಪರ ಯೋಜನೆಗಳು ಜಾರಿಯಲ್ಲಿದೆ. ಆದರೆ ಇವುಗಳ ಕುರಿತು ರೈತರಿಗೆ ನೇರ ಮಾಹಿತಿ ಇರುವುದಿಲ್ಲ. ಆದ್ದರಿಂದ ಇವುಗಳ ಕುರಿತು ನೇರವಾಗಿ ರೈತರಿಗೆ ಮಾಹಿತಿ ತಲುಪುವ ವ್ಯವಸ್ಥೆಯಾಗಬೇಕು ಎಂದು ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ತಿಳಿಸಿದರು.
ಅವರು ಉಡುಪಿ ಜಿ.ಪಂ., ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ಯಡ್ತಾಡಿ ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ, ಯಡ್ತಾಡಿ ಗ್ರಾ.ಪಂ. ಸಭಾಂಗಣದಲ್ಲಿ ಜೂ.6ರಂದು ನಡೆದ ಕೋಟ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಕೃಷಿ ಇಲಾಖೆಯ ಸಮಗ್ರ ಮಾಹಿತಿಯನ್ನೊಳಗೊಂಡ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ಯಡ್ತಾಡಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಎಚ್. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಿ., ಸದಸ್ಯರಾದ ಅರುಣ್ ನಾಯ್ಕ, ಭಜುಂಗ ಶೆಟ್ಟಿ, ನಿರ್ಮಲ ಎಸ್. ಶೆಟ್ಟಿ, ಗುಂಡು ಶೆಟ್ಟಿ, ಉಮೇಶ್ ಶೆಟ್ಟಿ, ತೋಟಗಾರಿಕೆ ಇಲಾಖೆಯ ಶ್ರೀರಾಮ್ ಹೆಗ್ಡೆ, ಕೃಷಿ ಪ್ರಾಧ್ಯಾಪಕ ಡಾ. ಕೆ.ವಿ. ಸುಧೀರ್ ಕಾಮತ್, ಕೆ.ವಿ.ಕೆ. ಕಾರ್ಯಕ್ರಮ ಸಂಯೋಜಕ ಡಾ| ಧನಂಜಯ್, ಡಾ| ಎಸ್.ವಿ.ಪಾಟೀಲ್, ಮೀನುಗಾರಿಕೆ ಇಲಾಖೆಯ ಕಿರಣ್, ಕೋಟ ಕೃಷಿ ಕೇಂದ್ರ ಕೃಷಿ ಅಧಿಕಾರಿ ಸುಪ್ರಭಾ, ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್ ಉಪಾಧ್ಯ ಮುಂತಾದವರು ಉಪಸ್ಥಿತರಿದ್ದರು. ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್ ಸ್ವಾಗತಿಸಿ, ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಾಮಾಜಿಕ ಜಾಲತಾಣದಲ್ಲಿ
ಕೃಷಿ ವಿಚಾರ ಹಂಚಿಕೊಳ್ಳಿ
ನಾವು ವಾಟ್ಸಾ ್ಯಪ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ವಿಚಾರಗಳನ್ನು ಹಂಚಿಕೊಳ್ಳುತ್ತೇವೆ. ಅದರ ಬದಲಿಗೆ ಕೃಷಿ ಸಂಬಂಧಿತ ಯೋಜನೆಗಳು, ರೈತರಿಗೆ ಸಿಗುವ ಸಹಾಯಧನಗಳು, ಸೌಲಭ್ಯಗಳ ಕುರಿತು ಮಾಹಿತಿಗಳನ್ನು ಹಂಚಿಕೊಂಡಲ್ಲಿ ಕೃಷಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಪ್ರಾಸ್ತಾವಿಕ ಮಾತುಗಳ ಸಂದರ್ಭ ಕೃಷಿ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಮೋಹನ್‌ರಾಜ್ ಅಭಿಪ್ರಾಯಪಟ್ಟರು.