Advertisement

ರಾಜ್ಯದ ರೈತರು ಈ ಬಾರಿ ಸೋಯಾಬೀನ್ ಬೆಳೆಯಬೇಡಿ: ಸಚಿವ ಬಿ.ಸಿ. ಪಾಟೀಲ್ ಸಲಹೆ

08:14 PM Jun 08, 2020 | Sriram |

ಹಾವೇರಿ: ಈ ಬಾರಿ ರಾಜ್ಯಕ್ಕೆ ವಿತರಣೆಯಾಗಿರುವ ಸೋಯಾಬೀನ್ ಬಿತ್ತನೆ ಬೀಜದಲ್ಲಿ ಮೊಳಕೆಬರಿಸುವ ಸಾಮರ್ಥ್ಯ ಕಡಿಮೆಯಿದ್ದು ರೈತರು ಈ ವರ್ಷ ಸೋಯಾಬೀನ್ ಬಿಟ್ಟು ಬೇರೆ ಬೆಳೆ ಬೆಳೆಯುವುದು ಸೂಕ್ತ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸಲಹೆ ನೀಡಿದ್ದಾರೆ.

Advertisement

ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಸಲಹೆ ನೀಡಿದರು. ರಾಜ್ಯಕ್ಕೆ ಸೋಯಾಬೀನ್ ಬೀಜ ಉತ್ಪಾದಿಸಿ ಪೂರೈಸುವ ಮಧ್ಯಪ್ರದೇಶ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಕಳೆದ ವರ್ಷ ಸೋಯಾ ಬಿತ್ತನೆ ಬೀಜ ಕೊಯ್ಲು ವೇಳೆ ನೆರೆ ಬಂದಿದ್ದರಿಂದ ಸೋಯಾಬೀನ್ ಬೀಜದ ಮೊಳಕೆಬರಿಸುವ ಸಾಮರ್ಥ್ಯ ಕಡಿಮೆಯಾಗಿದೆ. ಹೀಗಾಗಿ ರೈತರು ಈ ವರ್ಷ ಸೋಯಾ ಬಿತ್ತನೆ ಕೈಬಿಡುವುದು ಒಳಿತು ಎಂದರು.

ವಿವಿಧ ಕಂಪನಿಗಳು ಈಗಾಗಲೇ ರಾಜ್ಯಕ್ಕೆ 1.3೦ಲಕ್ಷ ಕ್ವಿಂಟಾಲ್ ಸೋಯಾಬಿತ್ತನೆ ಬೀಜ ಪೂರೈಸಿವೆ. ಕೆಲವು ಕಡೆ ಕೆಲವು ಬೀಜ ಉತ್ತಮವಾಗಿ ಮೊಳಕೆಯೊಡೆದಿದ್ದರೆ ಇನ್ನು ಕೆಲವು ಕಡೆ ಮೊಳಕೆಯೊಡೆದಿಲ್ಲ. ಬಿತ್ತನೆ ಬೀಜ ಹೆಚ್ಚಾಗಿ ಹಾಕಿದರೆ ಒಂದು ಮೊಳಕೆಯೊಡೆಯದಿದ್ದರೆ ಇನ್ನೊಂದಾದರೂ ಮೊಳಕೆಯೊಡೆಯಬಹುದು. ಆದರೆ, ರೈತರು ಈ ಬಾರಿ ಆದಷ್ಟು ಈ ಬೆಳೆ ಬಿಟ್ಟು ಬೇರೆ ಬೆಳೆ ಬೆಳೆಯುವುದು ಸೂಕ್ತ. ಈ ಸಮಸ್ಯೆ ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲ ದೇಶಾದ್ಯಂತ ಕಂಡು ಬಂದಿದೆ ಎಂದರು.

ಜೂ. 9 ರಂದು ಸಭೆ
ಈಗಾಗಲೇ ಬಿತ್ತನೆ ಮಾಡಿ ನಷ್ಟ ಅನುಭವಿಸಿದ ರೈತರಿಗೆ ಕಂಪನಿಗಳ ಕಡೆಯಿಂದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಈ ಹಾನಿಗೆ ಕಂಪನಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು. ಈ ಬಗ್ಗೆ ಚರ್ಚಿಸಲು ಸೋಯಾಬೀಜ ವಿತರಕ ಕಂಪನಿಗಳ ಸಭೆಯನ್ನು ಬೆಂಗಳೂರಿನಲ್ಲಿ ಜೂ. 9 ರಂದು ಕರೆಯಲಾಗಿದೆ ಎಂದು ತಿಳಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next