Advertisement

ಕಾಡಾನೆ ಸ್ಥಳಾಂತರಕ್ಕೆ ಆಗ್ರಹಿಸಿ ಆಗುಂಬೆ ಬಂದ್‌

07:00 AM Aug 05, 2018 | Team Udayavani |

ತೀರ್ಥಹಳ್ಳಿ: ಕಾಡಾನೆ ಕಾಟದಿಂದ ಬೇಸತ್ತ ತಾಲೂಕಿನ ಆಗುಂಬೆ ಭಾಗದ ಜನ ಆನೆ ಸ್ಥಳಾಂತರಕ್ಕೆ ಒತ್ತಾಯಿಸಿ ಶನಿವಾರ ಬಂದ್‌ ಆಚರಿಸಿದರು. ಬೆಳಗ್ಗೆಯಿಂದಲೇ ಹೊಟೇಲ್‌, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಆಗುಂಬೆಯ ಮುಖ್ಯ ರಸ್ತೆಯಲ್ಲಿ ಗ್ರಾಮಸ್ಥರು ಹಾಗೂ ರೈತರು ಸುರಿಯುವ ಮಳೆಯಲ್ಲೂ ರಸ್ತೆ ತಡೆ ನಡೆಸಿದರು. 10 ನಿಮಿಷಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

Advertisement

ಆಗುಂಬೆ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಲೇ ಇದೆ. ಆನೆಗಳನ್ನು ಕಾಡಿಗೆ ಅಟ್ಟುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಸಲಗಗಳು ತೋಟ, ಗದ್ದೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದು, ಬೆಳೆ ನಾಶಪಡಿಸುತ್ತಿವೆ. ಅಲ್ಲದೆ ಗ್ರಾಮಗಳಲ್ಲೆಲ್ಲ ಸಂಚರಿಸುವುದರಿಂದ ಭಯದಲ್ಲೇ ಕಾಲಕಳೆಯುವ ಸ್ಥಿತಿ ನಿರ್ಮಾಣವಾಗಿದೆ.ಹೀಗಾಗಿ ಆನೆಗಳ ಸ್ಥಳಾಂತರಕ್ಕೆ ಒತ್ತಾಯಿಸಿ ಕೆಲ ಸಮಯ  ಬಂದ್‌ ಮಾಡಲಾಗಿದೆ ಎಂದು ಆಗುಂಬೆ ಹಾಗೂ ಬಿದರಗೋಡು ಗ್ರಾಮಸ್ಥರು ಹೇಳಿದರು.

ಪ್ರತಿಭಟನೆ ವೇಳೆ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಹಿಂದಿನ ಸರ್ಕಾರ ಹಾಗೂ ಇಲಾಖೆಯ ಕೆಲವು ಅಧಿಕಾರಿಗಳ ನಿರ್ಲಕ್ಷéದಿಂದಲೇ ಸಮಸ್ಯೆ ಉಲ್ಬಣಿಸಿದೆ. 15 ದಿನಗಳಲ್ಲಿ ಈ ವಿಚಾರವಾಗಿ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಇಲಾಖೆಯ ಎರಡೂ ಜಿಲ್ಲೆಗಳ ಅಧಿ ಕಾರಿಗಳನ್ನು ಕರೆಸಿ ಸಭೆ ನಡೆಸಲು ತೀರ್ಮಾನಿಸಿದ್ದೇವೆ. ನಂತರ ಈ ವಿಚಾರವನ್ನು ಸರ್ಕಾರದ ಗಮನಕ್ಕೂ ತರಲಿದ್ದೇನೆ ಎಂದರು.

ಜೆಡಿಎಸ್‌ ಮುಖಂಡ ಆರ್‌.ಎಂ. ಮಂಜುನಾಥ ಗೌಡ ಮಾತನಾಡಿ, ರೈತರಿಗೆ ಸಮಸ್ಯೆಯಾಗಿ ಕಾಡುತ್ತಿರುವ ಒಂಟಿ ಸಲಗದ ಆತಂಕ ನಿರಂತರವಾಗಿದೆ. ಶೀಘ್ರದಲ್ಲಿಯೇ ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯೊಂದಿಗೆ ಚರ್ಚಿಸಲಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next