ಮಸ್ಕಿ: ಸಕಾಲಕ್ಕೆ ಮಳೆ ಬಾರದ ಕಾರಣ ತಾಲೂಕಿನಾದ್ಯಂತ ಬೆಳೆಗಳು ಒಣಗಲು ಪ್ರಾರಂಬಿಸಿವೆ. ಸತತ ಬರಗಾಲದಿಂದ ಕಂಗೆಟ್ಟ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮುಂಗಾರು ಮಳೆ ಆರಂಭದಲ್ಲೆ ಅರ್ಭಟಿಸಿದ್ದರಿಂದ ಹರ್ಷದಿಂದ ರೈತಾಪಿ ವರ್ಗ ಸಾಲ ಸೂಲ ಮಾಡಿ ತೊಗರಿ, ಎಳ್ಳು, ಹತ್ತಿ, ಸಜ್ಜೆ ವಿವಿಧ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಕೈಗೊಂಡಿದ್ದರು. ಮಳೆ ಕೈ ಕೊಟ್ಟಿರುವ ಪರಿಣಾಮ ಉತ್ತಮ ಬೆಳೆ ನೀಕ್ಷೆಯಲ್ಲಿದ್ದ ರೈತನ ಮಂದಹಾಸ ಮುದಡಿ ಹೋಗಿದೆ. ಮಳೆಯ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸಿದ್ದು, ಬಿಸಿಲಿನ ತಾಪಕ್ಕೆ ಭೂಮಿಯಲ್ಲಿನ ತೇವಾಂಶ ಕಡಿಮೆಯಾಗಿ ವಿವಿಧ ಬೆಳೆಗಳು ಬೆಳವಣಿಗೆ ಆಗದೇ ತಳಮಟ್ಟದಲ್ಲೆ ಒಣಗಿ ಹೋಗುತ್ತಿವೆ.
ಇನ್ನೂ ವಾರದೊಳಗೆ ಸಮರ್ಪಕ ಮಳೆ ಬರದೇ ಇದ್ದರೆ ಈ ಭಾರಿಯು ಬೀಕರ ಬರಗಾಲದ ಛಾಯೆ ಎದುರಾಗುವುದು ಖಚಿತವಾಗಿದೆ. ಮಾರಲದಿನ್ನಿ, ಉಸ್ಕಿಹಾಳ, ಮಟ್ಟೂರು, ಮೆದಕಿನಾಳ, ಅಡವಿಭಾವಿ ತಾಂಡಾ, ಮಾರಲದಿನ್ನಿ ತಾಂಡಾ, ಮೂಡಲದಿನ್ನಿ, ಬೈಲಗುಡ್ಡ, ದೇಸಾಯಿ ಬೋಗಾಪುರ, ತಲೆಖಾನ, ಜೆಕ್ಕೇರಮಡು, ತೀರ್ಥಭಾವಿ, ಸಂತೆಕೆಲ್ಲೂರು, ಅಂಕುಶದೊಡ್ಡಿ, ಮಸ್ಕಿ ತಾಂಡಾಗಳಲ್ಲಿ ಮಳೆ ಕಾಣಿಸಿಕೊಂಡಿಲ್ಲ ಇದರಿಂದ ರೈತರ ಬೆಳೆ ನೆಲ ಕಚ್ಚುವ ಹಂತದಲ್ಲಿವೆ, ಶೀಘ್ರದಲ್ಲಿಯೇ ಗ್ರಾಮಗಳಿಗೆ ಕೃಷಿ ಇಲಾಖೆ ಅಧಿಕರಿಗಳು ಭೇಟಿ ನೀಡಿ ನಾಶ ಆಗುವ ಹಂತದಲ್ಲಿರುವ ಬೆಳೆಗಳನ್ನು ಪರಿಶೀಲನೆ ಮಾಡಿ, ಸೂಕ್ತ ಪರಿಹಾರ ಒದಗಿಸುವಂತೆ ರೈತರು ಆಗ್ರಹಿಸಿದಾರೆ.
ಬಲು ತುಟ್ಟಿ ಎಡಿ,ಕುಂಟಿ ಗಳೆವೂ: ಆಗಿನ ಕಾಲದಲ್ಲಿ ಪ್ರತಿ ಮನೆಯಲ್ಲಿ ಎತ್ತುಗಳಿದ್ದವು, ತಮ್ಮ ತಮ್ಮ ಜಮೀನಿನಲ್ಲಿ ಎಡಿ,ಕುಂಟಿಗಳಿAದ ಕಸ ಹಸನು ಮಾಡುತ್ತಿದ್ದರು, ಆಧುನಿಕ ಯುಗದಲ್ಲಿ ಎತ್ತುಗಳ ಸಂಖ್ಯೆ ಕ್ಷೀನಸಿದ್ದು, ಬಾಡಿಗೆ ಎತ್ತುಗಳಿಗಳಿಂದ ಎಡಿ,ಕುಂಟಿ ಹೊಡೆಯುವಂತಾಗಿದೆ, ಒಂದು ತಳಕ ಎತ್ತಿಗೆ ದಿನಕ್ಕೆ 2ಸಾವಿರ ರೂಪಾಯಿ ಇದ್ದು, ಆದರೂ ಸಹ ರೈತರು ಆಳು ಹಾಗೂ ಎತ್ತಿ ಕುಂಟಿ, ಎಡಿಗಳಿಂದ ಹೊಲ ಹಸನು ಮಾಡಿದ್ದರಿಂದ ಮಳೆ ಬಾರದಿರುವುದರಿಂದ ಬೆಳೆ ಒಣಗುವ ಹಂತದಲ್ಲಿದೆ. ಮಳೆರಾಯ ಧರೆಗೆ ಇಳಿದು ಬಾ ಎಂದು ರೈತರು ದಿನಾಲು ಗೋಣಗುತ್ತಿದ್ದಾರೆ.
ವಾರದೊಳಗೆ ಮಳೆ ಬರದಿದ್ದರೆ ಬಿತ್ತನೆ ಮಾಡಿರುವ ವಿವಿಧ ಬೆಳೆಗಳು ಒಣಗಿ ಹೋಗಲಿದ್ದು ಹೀಗಾಗಿ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕರಿಗಳು ಗ್ರಾಮಗಳಿಗೆ ಬೇಟಿ ನೀಡಿ ರೈತರು ಬೆಳೆದಿರುವ ಬೆಳೆಗಳನ್ನು ಸಮೀಕ್ಷೆ ಮಾಡಬೇಕು, ರೈತರಿಗೆ ಪರಿಹಾರಧನ ಒದಗಿಸಲು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
ಸಾಲ-ಸೂಲ ಮಾಡಿ ಬೀಜ ಗೊಬ್ಬರ ಖರೀಸಿದ ತೊಗರಿ, ಎಳ್ಳು ಬಿತ್ತನೆ ಮಾಡಿದ್ದು, ಇದೀಗ ಮಳೆ ಕೈ ಕೊಟ್ಟಿದ್ದರಿಂದ ಬೆಳೆ ಒಣಗುವ ಹಂತಕ್ಕೆ ತಲುಪಿದೆ. ಬೆಳೆ ಒಣಗಿ ನಾಶವಾದರೆ, ಸಾಲ ಮಾಡಿರುವ ರೈತರು ಬೆಂಗಳೂರು, ಮಂಗಳೂರುಗಳಂತಹ ನಗರಕ್ಕೆ ಗೂಳೆ ಹೋಗುವ ಪ್ರಸಂಗ ಎದುರಾಗುತ್ತದೆ. ವಾರದೊಳಗೆ ಮಳೆ ಬರದೇ ಇದ್ದರೆ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡಿ ಬೆಳೆ ಸಮೀಕ್ಷೆ ಮಾಡಬೇಕು.
– ವೆಂಕಟೇಶ, ದೇಸಾಯಿ ಬೋಗಾಪುರ, ರೈತ.
ಇನ್ನೂ ಎರಡು-ಮೂರು ದಿನಗಳಲ್ಲಿ ಆರಿದ್ರಾ ಮಳೆ ಆಗುವ ಸಮಭವ ಇದ್ದು, ಈ ಮಳೆಯು ಕೈ ಕೊಟ್ಟರೆ ಬೆಳೆ ಖಂಡಿತ ಒಣಗಿ ಹೋಗುತ್ತದೆ, ಮುಂದೆ ಸರ್ಕಾರ ಗಮನಕ್ಕೆ ತಂದು ರೈತರ ಹೊಲಗಳಿಗೆ ಕಂದಾಯ-ಕೃಷಿ ಇಲಾಖೆಯಿಂದ ಬೇಟಿ ಕೊಟ್ಟು ಬೆಳೆ ಸಮೀಕ್ಷೆ ಮಾಡಲಾಗುವುದು.
-ಶಿವರಾಜ. ಕೃಷಿ ಅಧಿಕಾರಿಗಳು ಮಸ್ಕಿ,
– ವಿಠ್ಠಲ ಕೆಳೂತ್