Advertisement

ರೈತನ ಪರಿಶ್ರಮಕ್ಕಿಲ್ಲ ತಕ್ಕ ಬೆಲೆ: ಕವಿತಾ ಮಿಶ್ರಾ

07:00 PM Mar 13, 2021 | Team Udayavani |

ಕಲಬುರಗಿ: ರೈತ ಹಗಲಿರಳು ಅವಿರತ ಶಮ್ರದ ಫಲವಾಗಿ ಸಮಾಜದಲ್ಲಿ ಪ್ರತಿಯೊಬ್ಬರು ಸುಖಕರ ಜೀವನ ಸಾಗಿಸಲು ಸಾಧ್ಯವಾಗಿದೆಯಾದರೂ ಆತನ ಶ್ರಮಕ್ಕೆ ತಕ್ಕ ಬೆಲೆ ಸಿಗದೇ ಇರುವುದರಿಂದ ರೈತ ಮಾತ್ರ ಕಂಗಾಲಾಗಿ ಬದುಕು ಸಾಗಿಸುತ್ತಿದ್ದಾನೆ ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಕಳವಳ ವ್ಯಕ್ತಪಡಿಸಿದರು.

Advertisement

ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಗೋದುತಾಯಿ ಅವ್ವಾಜಿಯವರ 50ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮಲ್ಲಿ ಮಾತೋಶ್ರೀ ಗೋದುತಾಯಿ ಅವ್ವಾಜಿ 2021 ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ರೈತ ಬಿಸಿಲಿಗೆ ಸುಟ್ಟಿ, ಮಳೆಗೆ ನೆನೆದು, ಚಳಿಗೆ ನಡುಗಿ ತನ್ನ ಇಡೀ ದೇಹವನ್ನು ಭೂತಾಯಿಗೆ ಅರ್ಪಿಸಿ ಬೆಳೆ ಬೆಳೆಯುತ್ತಾನೆ. ಹೀಗಾಗಿ ಪ್ರತಿ ಬೆಳೆಯಲ್ಲೂ ಆತನ
ರಕ್ತ ಕಾಣುತ್ತೇವೆ. ರೈತ ಎಂಬ ಎರಡಕ್ಷರಲ್ಲಿ ಪ್ರತಿದಿನ ನಮ್ಮ ಜೀವನ ಆರಂಭವಾಗುತ್ತದೆ. ಹಾಲು, ಹಣ್ಣು, ಕಾಯಿ, ಪಲ್ಯ ಹೀಗೆ ಆರಂಭವಾಗುತ್ತದೆ. ಆದರೆ
ನೆಮ್ಮದಿ, ಸಮೃದ್ಧಿ ಎಂಬುದಾಗಿ ದೊರೆಯುತ್ತಿಲ್ಲ ಎಂದು ವಿವರಿಸಿದರು.

ಯುನೈಟೆಡ್‌ ಆಸ್ಪತ್ರೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೆಶಕರಾದ ಡಾ| ವಿಕ್ರಂ ಎಸ್‌. ಸಿದ್ಧಾರೆಡ್ಡಿ ಧನ್ವಂತರಿ -2021 ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕೋವಿಡ್‌ ಸಂದರ್ಭವನ್ನು ಎಲ್ಲಾ ವೈದ್ಯಕೀಯ ಸಿಬ್ಬಂದಿ ವರ್ಗ ಛಲದಾಯಕವಾಗಿ ಸ್ವೀಕರಿಸಿ, ತಮ್ಮ-ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದರು. ಶರಣರ ಶಿಕ್ಷಣ ಸಂಸ್ಥೆ ಬಹು ಶಿಸ್ತಿನ ಹಾಗೂ ಬಹು ಸಂಸ್ಕೃತಿ ಹೊಂದಿದ್ದ ಸಂಸ್ಥೆಯಾಗಿದೆ. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಈ ಸಂಸ್ಥೆ ಪ್ರಮುಖ
ಪಾತ್ರ ನಿರ್ವಹಿಸುತ್ತದೆ ಎಂದರು.

ವಿವಿ ಕುಲಪತಿ ಡಾ| ನಿರಂಜನ್‌ ವಿ ನಿಷ್ಠಿ ಅಧ್ಯಕ್ಷತೆ ವಹಿಸಿ, ಪ್ರಸ್ತುತ ದಿನದಲ್ಲಿ ಕೃಷಿ ಎಂಬ ಪದ ಬಡತನ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇದಕ್ಕೆ ಕಾರಣ ರೈತ
ಬೆಳೆದ ಬೆಲೆಗೆ ಸರಿಯಾದ ಬೆಲೆ ದೊರೆಯದೇ ಇದಕ್ಕೆ ಕಾರಣ ಎಂದು ಹೇಳಿದರು. ಡಾ| ಸಾರೀಕಾದೇವಿ ಕಾಳಗಿ ಅವ್ವಾಜೀಯವರ ಜೀವನ ಚರಿತ್ರೆ ಬಗ್ಗೆ
ಮಾತನಾಡಿದರು.

Advertisement

ವಿವಿ ಕುಲಸಚಿವ ಡಾ| ಅನಿಲಕುಮಾರ ಜಿ. ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರಿ, ಡೀನ್‌ ಲಕ್ಷಿ ಪಾಟೀಲ, ಮಾಕಾ ಮತ್ತು ಡಾ| ಬಸವರಾಜ ಎಸ್‌ ಮಠಪತಿ ಸೇರಿದಂತೆ ಮುಂತಾದವರಿದ್ದರು. ಪ್ರೊ| ಅಭಿಲಾಷಾ ಪಾಟೀಲ ಮತ್ತು ಪ್ರೊ| ಶ್ರುತಿ ಹಂಚಿನಾಳ ನಿರೂಪಿಸಿದರು. ಪ್ರೊ| ಶೋಭನಾ ಪ್ರಾರ್ಥನಾ ಗೀತೆ ಹಾಡಿದರು. ಡಾ| ಶಿಲ್ಪಾ ಬಿ. ಶ್ರೀಗಿರಿ ಸ್ವಾಗತಿಸಿದರು. ಪ್ರೊ| ಆಶಾರಾಣಿ ಪಾಟೀಲ ವಂದಿಸಿದರು.

ಹೆಬ್ಬಟ್ಟು ಒತ್ತುವ ರೈತನ ಕೈ ಕೂಡ ಕೋಟಿ-ಕೋಟಿ ರೂಪದಲ್ಲಿ ಮಾತನಾಡಬೇಕು. ರೈತನ ಹೆಂಡತಿ ಮತ್ತು ಮಕ್ಕಳು ಅ ಧಿಕಾರಸ್ಥರ ಕುಟುಂಬಸ್ಥರ ರೀತಿಯಲ್ಲಿ ಜೀವನ ಸಾಗಿಸಬೇಕು. ಪ್ರತಿ ರೈತ ಕುಟುಂಬ ಸಂತೋಷದ ಜೀವನ ಸಾಗಿಸಬೇಕು. ಆಗ ರೈತ ಸಮಾಜದಲ್ಲಿ ಸಂತೋಷದಾಯಕ ಜೀವನ ಸಾಗಿಸಲು ಸಾಧ್ಯ.
ಕವಿತಾ ಮಿಶ್ರಾ, ಪ್ರಗತಿಪರ ರೈತ ಮಹಿಳೆ

Advertisement

Udayavani is now on Telegram. Click here to join our channel and stay updated with the latest news.

Next