ಕೋಲಾರ: ಕೋಚಿಮುಲ್(ಕೋಲಾರ- ಚಿಕ್ಕಬ ಳ್ಳಾಪುರ) ಒಕ್ಕೂಟದ ವ್ಯಾಪ್ತಿಯಲ್ಲಿ ಹಸಿರು ಮೇವು ಬೆಳೆಯಲು ರೈತರಿಗೆ ಎಕರೆಗೆ 3 ಸಾವಿರ ರೂ. ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಗಿದೆ.
ಒಕ್ಕೂಟ ವ್ಯಾಪ್ತಿ ರಾಸುಗಳಿಗೆ ಅವಶ್ಯವಿರುವ ಹಸಿರು ಮೇವನ್ನು ನೀಗಿಸಲು ಹಾಗೂ ಹಸಿರು ಮೇವು ಅಭಿವೃದ್ಧಿಗೊಳಿಸಲು ನೀರಾವರಿ ಸೌಲಭ್ಯವುಳ್ಳ ಭೂಮಾಲೀಕರು, ಹಾಲು ಉತ್ಪಾದಕರಿಗೆ ಒಕ್ಕೂ ಟದ ವತಿಯಿಂದ ಪ್ರತಿ ಎಕರೆಗೆ 3 ಸಾವಿರ ರೂ. ಪ್ರೋತ್ಸಾಹಧನವನ್ನು ಪಾವತಿಸಲು ಮತ್ತು ಶೇ.50ರಷ್ಟು ರಿಯಾಯಿತಿ ದರದಲ್ಲಿ ವಿತರಿಸಿ ಒಕ್ಕೂಟ, ಸಂಘ ಮತ್ತು ಉತ್ಪಾದಕರ ತ್ರಿಪಕ್ಷೀ ಯ ಕರಾರಿನೊಂದಿಗೆ ಹಸಿರು ಮೇವು ಬೆಳೆಯ ಲು ಯೋಜನೆಯನ್ನು ರೂಪಿಸಲು ನಿರ್ಧರಿಸಲಾಗಿದೆ.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ 11 ತಾಲೂಕುಗಳ ವ್ಯಾಪ್ತಿಯಲ್ಲಿ ಮುಂಗಾರು ಮಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲಿ ಹಸಿರು ಮೇವು ಕೊರೆತೆಯಿಂದ ಮುಂದಿನ ದಿನಗಳಲ್ಲಿ ಹಾಲಿನ ಶೇಖರಣೆ ಕಡಿಮೆಯಾಗು ವುದನ್ನು ನಿರೀಕ್ಷಿಸಿ ಸೆ.4 ನಡೆದ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಈ ಯೋಜನೆಯನ್ನು ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರತಿ ತಾಲೂಕಿಗೆ ಕನಿಷ್ಠ 250 ಎಕರೆ, ಗರಿಷ್ಠ ಎಷ್ಟು ಬೇಕಾದರೂ ಬೆಳೆಯುವಂತೆ ಅವಕಾಶ ಕಲ್ಪಿಸಿರುವುದರಿಂದ ಅಂದಾಜು ವೆಚ್ಚ 2.5 ಕೋಟಿ ರೂ. ವರೆಗೂ ವೆಚ್ಚವಾಗಲಿದೆ. ಈ ಯೋಜನೆಯನ್ನು ರಾಜ್ಯ ವ್ಯಾಪ್ತಿಯ 14 ಹಾಲು ಒಕ್ಕೂಟಗಳ ಪೈಕಿ ಮೊದಲ ಬಾರಿಗೆ ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಜಾರಿಗೆ ತರುತ್ತಿದೆ. ಇದ್ದರಿಂದ ಹಾಲು ಉತ್ಪಾದಕರ ಹಸಿರು ಮೇವಿನ ಕೋರತೆ ನೀಗಿಸುವುದಲ್ಲದೆ ಹಾಲು ಉತ್ಪಾದಕರ ಆರ್ಥಿಕತೆಯನ್ನು ಸಹ ಹೆಚ್ಚಿಸಲು ಸಹಾಯ ಮಾಡುವಂತಾಗಿದೆ.
ಈ ಯೋಜನೆಯನ್ನು ಉಭಯ ಜಿಲ್ಲೆಗಳ ಹಾಲು ಉತ್ಪಾದಕರು ಸದುಪಯೋಗಪಡಿ ಸಿಕೊಂಡು ಹಾಲಿನ ಶೇಖರಣೆಯನ್ನು ಹೆಚ್ಚಿಸಲು ಕೋಚಿ ಮುಲ್ ಆಡಳಿತ ಮಂಡಳಿ ಕೋರಿದೆ. ಸೋಮವಾರ ನಡೆದ ಸಭೆಯಲ್ಲಿ ಒಕ್ಕೂಟದ ಆಡಳಿತ ಮಂಡಲಿ ಸದಸ್ಯರಾದ ಕೆ.ಎನ್. ನಾಗರಾಜ್, ಮಂಜುನಾಥರೆಡ್ಡಿ, ಜೆ.ಕಾಂತರಾಜ್, ವೈ.ಬಿ. ಅಶ್ವತ್ಥನಾರಾಯಣ, ಆರ್.ಶ್ರೀನಿವಾಸ್, ಎನ್.ಸಿ. ವೆಂಕಟೇಶ್, ಎನ್.ಹನುಮೇಶ್, ಆದಿನಾರಾಯಣ ರೆಡ್ಡಿ, ಸುನಂದಮ್ಮ, ಕಾಂತಮ್ಮ, ಸಹಕಾರ ಸಂಘ ಗಳ ಉಪನಿಬಂಧಕರಾದ ಮಂಜುಳಾ, ಪಶು ಇಲಾಖೆ ಉಪನಿರ್ದೇಶಕ ಡಾ: ಜಿ.ಟಿ. ರಾಮಯ್ಯ, ಕೆ ಎಂಎಫ್ ಪ್ರ ತಿ ನಿಧಿ ಡಾ.ಪಿ.ಬಿ.ಸುರೇಶ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಗೋಪಾಲಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಲೀಟರ್‌ಗೆ 34.40 ರೂ. ಪಾವತಿ: ರಾಜ್ಯದಲ್ಲೇ ಅತಿ ಹೆಚ್ಚು ದರ: ಒಕ್ಕೂಟದ ಆಡಳಿತ ಮಂಡಲಿಯು ಹಾಲು ಉತ್ಪಾದಕರ ಸಮಾಜಿಕ ಮತ್ತು ಆರ್ಥಿಕ ಏಳಿಗೆಗಾಗಿ ಕಾಲಕಾಲಕ್ಕೆ ಅವಶ್ಯವಿರುವ ಉಪಕರಣಗಳು, ಸೌಲಭ್ಯಗಳು ಮತ್ತು ರಿಯಾಯಿತಿಗಳನ್ನು ನೀಡುವು ದಲ್ಲದೆ, ನೆರೆಯ ಹಾಲು ಒಕ್ಕೂಟಗಳಾದ ಬೆಂಗ ಳೂರು, ಮಂಡ್ಯ ಮತ್ತು ಹಾಸನ ನೀಡುತ್ತಿರುವ ಹಾಲು ಖರೀದಿ ದರಕ್ಕಿಂತ ಹೆಚ್ಚಿನ ದರ 34.40 ರೂ. ರಂತೆ ಹಾಲು ಉತ್ಪಾದಕರಿಗೆ ಪಾವತಿಸಲಾಗುತ್ತಿದೆ.