Advertisement

“ಕೃಷಿ ಯೋಜನೆಗಳು ಬರೀ ಕ‌ಡತಕ್ಕೆ ಸೀಮಿತವಾಗದೆ ರೈತರಿಗೆ ಸಿಗಲಿ’

12:43 AM Feb 11, 2020 | Sriram |

ಕೆದೂರು: ಕೃಷಿಕರಿಗೆ ಮೂಲಭೂತವಾಗಿ ಸಿಗುವ ಸವಲತ್ತು ಹಾಗೂ ಅವುಗಳ ಕುರಿತ ಮಾಹಿತಿಯನ್ನು ಅಧಿಕಾರಿಗಳು ಗ್ರಾಮೀಣ ಭಾಗದ ರೈತರಿಗೆ ಅರಿವು ಮೂಡಿಸುವ ಮಹತ್ವದ ಕಾರ್ಯವಾಗಬೇಕಾಗಿದೆ.

Advertisement

ಕೃಷಿ ಯೋಜನೆಗಳು ಬರೀ ಕಚೆೇರಿಯ ಕಡತಕ್ಕೆ ಮಾತ್ರ ಸೀಮಿತವಾಗದೆ ಪ್ರಾಮಾಣಿಕವಾಗಿ ರೈತರಿಗೆ ಸವಲತ್ತುಗಳು ಸಿಗುವಂತಾಗಬೇಕು. ಈನಿಟ್ಟಿನಲ್ಲಿ ಗ್ರಾಮೀಣ ಭಾಗದ ರೈತರಿಗೆ ಪೂರಕವಾದ ಮಾಹಿತಿ ಹಾಗೂ ಉತ್ತೇಜಿಸುವ ಕಾರ್ಯ ನಿರಂತರವಾಗಿ ನಡೆಯಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್‌ ಸದಸ್ಯೆ ಶ್ರೀಲತಾ ಸುರೇಶ್‌ ಶೆಟ್ಟಿ ಹೇಳಿದರು.

ಅವರು ಫೆ. 10ರಂದು ಕೆದೂರು ಗ್ರಾಮದ ಶಾನಾಡಿ ರಾಮಚಂದ್ರ ಭಟ್‌ ಅವರ ಕೃಷಿ ಕ್ಷೇತ್ರದಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌, ಕೃಷಿ ಇಲಾಖೆ ಕುಂದಾಪುರ , ರೈತ ಸಂಪರ್ಕಕೇಂದ್ರ ಕುಂದಾಪುರ ಇವರ ಆಶ್ರಯದಲ್ಲಿ ನಡೆದ 2019-20ನೇ ಸಾಲಿನ ರೈತರ ಸಾಂಸ್ಥಿಕ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಾನಾಡಿ ಶರತ್‌ ಕುಮಾರ್‌ ಹೆಗ್ಡೆ ಮಾತನಾಡಿ, ಬದಲಾದ ವೇಗದ ಬದುಕಿನಲ್ಲಿ ಯುವ ಸಮುದಾಯಗಳಿಗೆ ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯಿಂದಾಗಿ ಪದವೀಧರ ಪ್ರತಿಭಾನ್ವಿತ ಯುವಕರು ಅಧುನಿಕ ಕೃಷಿ ಶೈಲಿಯೆಡೆಗೆ ಆಸಕ್ತಿ ತೋರುತ್ತಿದ್ದಾರೆ. ಪ್ರಸ್ತುತ ವಿದ್ಯಮಾನದಲ್ಲಿ ಇಲಾಖೆಯವರೇ ಕೃಷಿಕರನ್ನು ಅರಸಿ ಬರುವ ಕಾಲ ಸನ್ನಿಹಿತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯುವ ಕೃಷಿ ವಿಜ್ಞಾನಿ ಡಾ| ಸಚಿನ್‌ ಯು.ಎಸ್‌. ಮಾತನಾಡಿ, ಬದಲಾದ ಕೃಷಿ ಪದ್ಧತಿ ಹಾಗೂ ಭತ್ತದ ಕೃಷಿ ಚಟುವಟಿಕೆ ನಂತರ ಎರಡನೆಯ ಬೆಳೆಯಾಗಿ ದ್ವಿದಳ ಧಾನ್ಯ ಪದ್ಧತಿಯನ್ನು ಅನುಸರಿಸುವುದರಿಂದ ಕೀಟಗಳ ಬಾದೆ ಕಡಿಮೆಯಾಗುವುದು. ನೈಸರ್ಗಿಕ ಪ್ರಕ್ರಿಯೆಯಿಂದಾಗಿ ಹಸಿರೆಲೆ ಗೊಬ್ಬರಗಳು ಮಣ್ಣಿನೊಂದಿಗೆ ಬೆರೆತು ಮಣ್ಣಿನ ಫಲವತ್ತತೆ ಹೆಚ್ಚಾಗುವುದು ಎಂದು ಹೇಳಿದರು.

Advertisement

ಕೆದೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಭುಜಂಗ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸಂಜೀವ ನಾಯ್ಕ, ಹಿರಿಯ ಸಾವಯವ ಕೃಷಿಕ ಸೋಮ ಪೂಜಾರಿ ಶಿರಿಯಾರ ಸಕ್ಕಟ್ಟು , ಹಿರಿಯ ಪ್ರಗತಿಪರ ಕೃಷಿಕ ಶಾನಾಡಿ ರಾಮಚಂದ್ರ ಭಟ್‌, ಸಹಾಯಕ ಕೃಷಿ ಅಧಿಕಾರಿ ಶಂಕರ್‌ ಶೇರೆಗಾರ್‌, ತಾಂತ್ರಿಕ ಸಹಾಯಕಿ ವೃಂದ ಮತ್ತು ಜ್ಯೋತಿ ಹಾಗೂ ರೈತ ಬಾಂಧವರು ಉಪಸ್ಥಿತರಿದ್ದರು ಸಹಾಯಕ ಕೃಷಿ ಅಧಿಕಾರಿ ಶಂಕರ್‌ ಶೇರೆಗಾರ್‌ ಸ್ವಾಗತಿಸಿ , ಶ್ಯಾಮಲ ಅಡಿಗ ಪ್ರಾರ್ಥಿಸಿ, ವಂದಿಸಿದರು.

ಭತ್ತು ಬೆಳ್‌ ಮಾರಿ ಆದ್‌ ಮೇಲ್‌, ಬೆಳದ್‌ ಭತ್ತಕೆ ಬೆಂಬಲ ಬೆಲಿ?
ಹಿಂದೆ ನಾವ್‌ ಅಡ್ಡ್ ಪಂಜಿ ಯರ್‌ ಕೃಷಿ ಕೇಂದ್ರಕೆ ಹೋದ್ರೆ ಮಾತಾಡುÕವರಿಲ್ಲಾ …! , ನಮ್‌ ಗ್ರಾಮಕೆ ನೀರಿನ ಸಮಸ್ಯೆ ಇದೆ. ಆರೆ ಈಗೀನ ಪ್ಯಾಂಟ್‌ ಶರ್ಟ್‌ ಯುಗದಲ್‌ ಅಧಿಕಾರಿಗಳ್‌ ರೈತ್ರನ್‌ ಕರ್‌ª ಮಾತಾಡು ಪರಿಸ್ಥಿತಿ ಬಂದಿತ್‌. ನಾವ್‌ ಭತ್ತು ಬೆಳ್‌ª ಮಾರಿ ಆದ್‌ ಮೇಲ್‌, ಬೆಳದ್‌ ಭತ್ತಕೆ ಬೆಂಬಲ ಬೆಲಿ ಕೊಡು ಪರಿಸ್ಥಿತಿ ಬಂದೀತ್‌ !.
– ಭುಜಂಗ ಶೆಟ್ಟಿ ಅಧ್ಯಕ್ಷರು,
ಕೆದೂರು ಗ್ರಾಮ ಪಂಚಾಯತ್‌.

ಜೋನಿ ಬೆಲ್ಲ , ಕಬ್ಬಿನ್‌ ಹಾಲ್‌
2019-20ನೇ ಸಾಲಿನ ರೈತರ ಸಾಂಸ್ಥಿಕ ತರಬೇತಿ ಶಿಬಿರದಲ್ಲಿ ಕೆದೂರು ಹಾಗೂ ಜಪ್ತಿ ಗ್ರಾಮದ ಸುಮಾರು 75 ಕ್ಕೂ ಅಧಿಕ ಮಂದಿ ರೈತ ಬಾಂಧವರು ಒಂದೆಡೆ ಸೇರಿ ಸಂವಾದ ನಡೆಸಿದರು. ರೈತ ಬಾಂಧವರು ನೈಸರ್ಗಿಕವಾದ ಅಕ್ಕಿ ಶಾವಿಗೆ, ಶಾನಾಡಿ ಆಲೆಮನೆಯ ಜೋನಿ ಬೆಲ್ಲ ಹಾಗೂ ಕಬ್ಬಿನ ಹಾಲಿನ ಸವಿ ರುಚಿ ಸವಿದರು. ಇದು ನಮ್ಮ ಗ್ರಾಮೀಣ ಕೃಷಿ ಸಂಸ್ಕೃತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next