Advertisement

E-KYC: ಅನ್ನದಾತರ ಮನೆ ಬಾಗಿಲಿನಲ್ಲೇ ಇ-ಕೆವೈಸಿ ದಾಖಲು

04:04 PM Aug 23, 2023 | Team Udayavani |

ಹುಳಿಯಾರು: ಕೃಷಿ ಸಮ್ಮಾನ್‌ ಯೋಜನೆಗೆ ಇ-ಕೆವೈಸಿ ದಾಖಲಿಸಲು ರೈತನ ಮನೆ ಬಾಗಿಲಿಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕೃಷಿ ಇಲಾಖೆಯ ತಂಡ ಹೋಗುತ್ತಿದೆ. ಇಲಾಖೆಯ ಯಾವುದೇ ಕಟ್ಟಪ್ಪಣೆ ಇಲ್ಲದಿದ್ದರೂ ಕೃಷಿ ಸಮ್ಮಾನ್‌ ಯೋಜನೆ ಯಿಂದ ರೈತ ವಂಚಿತರಾಗಬಾರದು ಎಂದು ಸ್ವಯಂ ಪ್ರೇರಣೆಯಿಂದ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರದಿಂದ ಈ ಅಭಿಯಾನ ಕೈಗೊಂಡಿದೆ. ಹಳ್ಳಿಗೆ ತೆರಳಿ ಅವರಿವರನ್ನು ಕೇಳಿ ರೈತನ ಮನೆ ಹುಡಿಕಿ ಇ-ಕೆವೈಸಿ ಮಾಡುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Advertisement

ಪಿ.ಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ನೋಂದಾಯಿತ ರೈತರು ಇ-ಕೆವೈಸಿ ಮಾಡುವುದು ಅವಶ್ಯಕವಾಗಿದೆ. ಮುಂದಿನ ಕಂತಿನ ನೆರವಿನ ಹಣ ವರ್ಗಾವಣೆ ಇ- ಕೆವೈಸಿ ಮಾಡಿಸಿರುವ ಮತ್ತು ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡಿರುವ ಫ‌ಲಾನುಭವಿಗಳಿಗೆ ಮಾತ್ರ ಬರುತ್ತದೆ. ಹೀಗಾಗಿ ಇ-ಕೆವೈಸಿ ಮಾಡಿಸದ ಅರ್ಹರ ಬ್ಯಾಂಕ್‌ ಖಾತೆಗೆ ಕೇಂದ್ರದ ನೆರವಿನ ಹಣ ಜಮೆಯಾಗುವುದಿಲ್ಲ.

ಇ-ಕೆವೈಸಿ ಮಾಡಿಸಿಲ್ಲ: ಚಿಕ್ಕನಾಯಕನಹಳ್ಳಿ ತಾಲೂ ಕಿನ 30,246 ಮಂದಿ ರೈತರ ಪೈಕಿ 6100 ರೈತರು ಇ-ಕೆವೈಸಿ ಮಾಡಿಸದೆ ನಿರ್ಲಕ್ಷಿéಸಿದ್ದಾರೆ. ಇ-ಕೆವೈಸಿ ಮಾಡಿಸದ ರೈತರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರದಲ್ಲಿ ಪ್ರಕಟಿಸಿ ಪತ್ರಿಕಾ ಹೇಳಿಕೆ ನೀಡಿದ್ದರೂ ಸಹ, ರೈತರು ಇ-ಕೆವೈಸಿ ಮಾಡಿಸಲು ನಿರಾಸಕ್ತಿ ತೋರಿ ದ್ದಾರೆ. ದೂರವಾಣಿ ಕರೆ ಮಾಡಿ ಕಚೇರಿಗೆ ಬಂದು ಇ-ಕೆವೈಸಿ ಮಾಡಿಸಿ ಎಂದರೂ ಸ್ಪಂದನೆಯಿಲ್ಲ. ಮೊಬೈಲ್‌ ಆ್ಯಪ್‌ ಮೂಲಕ ನೀವೆ ನಿಮ್ಮ ಮನೆಯಲ್ಲಿ ಕುಳಿತು ಇ-ಕೆವೈಸಿ ಮಾಡಿ ಎಂಬ ಪ್ರಾತ್ಯಕ್ಷಿಕೆ ಕೊಟ್ಟರೂ ಮಾಡಿಸುವ ಗೋಜಿಗೆ ಹೋಗಿಲ್ಲ ಎಂದು ತಿಳಿದು ಬಂದಿದೆ.

ಸ್ವಯಂ ಪ್ರೇರಿತ ಅಭಿಯಾನಕ್ಕೆ ಸ್ಪಂದನೆ: ಚಿಕ್ಕನಾಯ ಕನಹಳ್ಳಿ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳ ತಂಡ ಹಳ್ಳಿಹಳ್ಳಿಗೆ ತೆರಳಿ, ರೈತನ ಮನೆ ಬಾಗಿಲಿಗೆ ಹೋಗಿ ಇ-ಕೆವೈಸಿ ಮಾಡಲು ನಿರ್ಧ ರಿಸಿದೆ. ಸೋಮವಾರದಿಂದ ಕೈಯಲ್ಲಿ ಇ-ಕೆವೈಸಿ ಮಾಡಿಸದವರ ಪಟ್ಟಿ ಹಿಡಿದು ಊರೂರು ಅಲೆದು ಹುಡುಕಿ ತಡುಕಿ ಫ‌ಲಾನುಭವಿಗಳ ಇ-ಕೆವೈಸಿ ಮಾಡುತ್ತಿದ್ದಾರೆ. ಅಧಿಕಾರಿಗಳ ಈ ಸ್ವಯಂ ಪ್ರೇರಿತ ಅಭಿಯಾನಕ್ಕೆ ರೈತರು ಸ್ಪಂದಿಸುತ್ತಿದ್ದು, ಹಳ್ಳಿಗೆ ಇಲಾಖೆಯ ತಂಡ ಬಂದಿದ್ದೇ ತಡ ಗುಂಪು ಸೇರಿ ಇ-ಕೆವೈಸಿ ಮಾಡಿಸದ ರೈತನ ಮನೆ ತೋರಿಸಿ ಸಹಕಾರ ನೀಡುತ್ತಿದ್ದಾರೆ.

ಸಿಬ್ಬಂದಿ ಅವಿರತ ಪ್ರಯತ್ನ: ಕೃಷಿ ಇಲಾಖೆ ಸಿಬ್ಬಂ ದಿಯ ಅವಿರತ ಪ್ರಯತ್ನದ ನಡುವೆಯೂ ಶೇ.100 ರಷ್ಟು ಇ-ಕೆವೈಸಿ ಪ್ರಗತಿ ಕಷ್ಟವಾಗಿದೆ. ಆಧಾರ್‌ ಲಿಂಕ್‌, ಮೊಬೈಲ್‌ ಸಂಖ್ಯೆ ಲಿಂಕ್‌ ಆಗದ ಕಾರಣ ಇ-ಕೆವೈಸಿ ಮಾಡಿಸಲು ರೈತರಿಗೆ ಸಮಸ್ಯೆಯಾಗುತ್ತಿದೆ. ಇನ್ನು ಹಲವು ರೈತರು ಮರಣ ಹೊಂದಿದ ಹಿನ್ನೆಲೆ ಯಲ್ಲಿ ಅವರ ಮಕ್ಕಳಿಗೆ ಖಾತೆಯಾಗದೆ ಇ-ಕೆವೈಸಿ ಆಗುತ್ತಿಲ್ಲ. ಜಮೀನು ವ್ಯಾಜ್ಯಗಳಿಂದ ಖಾತೆ ಮಾಡಿಸಿ ಕೊಳ್ಳಲಾಗದೆ ಇ-ಕೆವೈಸಿ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನೂ ಬೆಂಗಳೂರು ಸೇರಿದಂತೆ ಅನ್ಯ ಜಿಲ್ಲೆಯವರು ತಾಲೂಕಿನಲ್ಲಿ ಕೃಷಿ ಜಮೀನು ಖರೀದಿಸಿರುವುದರಿಂದ ಅವರಾರೂ ಇ-ಕೆವೈಸಿಗೆ ಸಿಗದೆ ಶೇ.100 ಪ್ರಗತಿಗೆ ತೊಡಕಾಗಿದೆ ಎಂದು ತಿಳಿದು ಬಂದಿದೆ.

Advertisement

100 ರೂ. ದುಡಿಯಲು ಕಷ್ಟವಿರುವ ಈ ಕಾಲದಲ್ಲಿ ವಾರ್ಷಿಕ 6,000 ರೂ. ಸಹಾಯ ಧನ ಸಿಕ್ಕರೆ ಹಳ್ಳಿ ಜನರಿಗೆ ಅನುಕೂಲ ವಾತ್ತದೆ ಎನ್ನುವ ಅರಿವು ಹಳ್ಳಿಯಿಂದ ಬಂದಿರುವ ನನಗಿದೆ. ಹಳ್ಳಿಯ ಅದೆಷ್ಟೋ ವೃದ್ಧರ ಬಳಿ ಸ್ಮಾರ್ಟ್‌ಪೋನ್‌ ಇಲ್ಲ. ಇದ್ದರೂ ಬಳಸಲು ಬರುವುದಿಲ್ಲ. ಮಕ್ಕಳು ಪಟ್ಟಣದಲ್ಲಿರುವುದ

ರಿಂದ ಇ-ಕೆವೈಸಿ ಮಾಡಿಸಲು ಸಾಧ್ಯವಾಗಿಲ್ಲ ಎನ್ನುವುದನ್ನು ಮನಗಂಡು ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಇ-ಕೆವೈಸಿ ಮಾಡುತ್ತಿದ್ದಾರೆ. ರೈತರು ಮನೆ ಬಾಗಿಲಿಗೆ ಬಂದಾಗ ನಿರಾಸಕ್ತಿ ತೋರದೆ ಇ-ಕೆವೈಸಿ ಮಾಡಿಸಿ, ಕೃಷಿ ಸಮ್ಮಾನ್‌ ಹಣ ಪಡೆಯಲು ಅರ್ಹರಾಗಲಿ.-ಎಚ್‌.ಎಸ್‌.ಶಿವರಾಜ್‌ಕುಮಾರ್‌,  ಸಹಾಯಕ ಕೃಷಿ ನಿರ್ದೇಶಕ, ಚಿ.ನಾ.ಹಳ್ಳಿ

ನನಗೆ ಕೃಷಿ ಸಮ್ಮಾನ್‌ ಹಣ ಬರುತ್ತಿರಲಿಲ್ಲ. ಕೇಳಿದರೆ ಇ-ಕೆವೈಸಿ ಮಾಡಿಸಿಲ್ಲ ಮಾಡಿಸಿದರೆ ಹಣ ಬರುತ್ತದೆ ಎನ್ನುತ್ತಾರೆ. ನನ್ನ ಬಳಿ ಸ್ಮಾರ್ಟ್‌ ಪೋನ್‌ ಇರಲಿಲ್ಲ. ವಯಸ್ಸಾದ ನನಗೆ ನಮ್ಮೂರಿನಿಂದ ಹುಳಿ ಯಾರಿಗೆ ಹೋಗಿ ಇ-ಕೆವೈಸಿ ಮಾಡಿಸಲು ಸಾಧ್ಯವಾಗದೆ ಮಗ ಊರಿನಿಂದ ಬಂದಾಗ ಮಾಡಿಸಿದರಾಯ್ತು ಎಂದು ಸುಮ್ಮನಿದ್ದೆ. ಈಗ ಕೃಷಿ ಇಲಾಖೆಯವರೇ ಮನೆ ಬಾಗಿಲಿಗೆ ಬಂದು ಇ-ಕೆವೈಸಿ ಮಾಡಿದ್ದಾರೆ. 3-4 ಕಿ.ಮೀ. ಬಿಸಿಲಿನಲ್ಲಿ ಪಟ್ಟಣಕ್ಕೆ ಹೋಗಿ ಬರುವ ಶ್ರಮ ತಪ್ಪಿದಂತ್ತಾಗಿದೆ.-ನಿಂಗಪ್ಪ, ರೈತ, ಕೆ.ಸಿ.ಪಾಳ್ಯ

-ಕಿರಣ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next