Advertisement

ರೈತರ ಮನೆಬಾಗಿಲಿಗೆ ತೋಟಗಾರಿಕೆ

02:39 PM Mar 05, 2017 | Team Udayavani |

ಕಲಬುರಗಿ: ಇವತ್ತಿನ ದಿನಗಳಲ್ಲಿ ರೈತರನ್ನು ಆರ್ಥಿಕವಾಗಿ ಬಲಗೊಳಿಸುವ ಹಿನ್ನೆಲೆಯಲ್ಲಿ ತೋಟಗಾರಿಕೆಯನ್ನು ರೈತರ ಮನೆ ಬಾಗಿಲಿಗೆ ಕೊಂಡೊಯ್ಯುವ ಜರೂರತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.ಇಲ್ಲಿನ ಸಾರ್ವಜನಿಕ ಉದ್ಯಾನವನದಲ್ಲಿ ಶನಿವಾರ ಸಂಜೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಮತ್ತು ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಫಲ-ಪುಷ್ಪ ಪ್ರದರ್ಶನ 2016-17ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

Advertisement

ಬರಗಾಲ, ಹವಾಮಾನ ವೈಪರಿತ್ಯ, ರಸಾಯನಿಕದ ಅಡ್ಡ ಪರಿಣಾಮಗಳಿಂದ ರೈತರು ಪದೇ ಪದೇ ಸೋಲುತ್ತಿದ್ದಾರೆ. ಅವರ ಬೆನ್ನಿಗೆ ಸರಕಾರವಿದೆ ಎನ್ನುವ ಭರವಸೆ ಮೂಡಿಸಬೇಕಾದರೆ ಅವರನ್ನು ಆರ್ಥಿಕವಾಗಿ ಬಲಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಒಂದು ಉತ್ತಮ ಸಾಧನವಾಗಲಿದೆ. ಆದರೆ, ಅಧಿಕಾರಿಗಳು ತೋಟಗಾರಿಕೆಯಲ್ಲಿ ಲಾಭಗಳು, ಬೆಳೆ ಪದ್ಧತಿ ಮತ್ತು ಇಳುವರಿಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು. 

ಅದರಿಂದ ಅವರು ತೋಟಗಾರಿಕೆಯತ್ತ ಮುಖ ಮಾಡುತ್ತಾರೆ ಎಂದರು. ಜಿಲ್ಲೆಯಲ್ಲಿ ತೋಟಗಾರಿಕೆ ಕಡಿಮೆ ಇದೆ. ಅದನ್ನು ಹೆಚ್ಚಿಗೆ ಮಾಡುವ ಮತ್ತು ಕೇವಲ ಇಲಾಖೆ ಗುರಿಗೆ ಜೋತು ಬೀಳದೆ ರೈತರಿಗೆ ಯೋಜನೆ ಪ್ರಯೋಜನ ತಲುಪಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದ ಅವರು, ಈಗೀಗ ತಂತ್ರಜ್ಞಾನ ಬೆಳೆಯುತ್ತಿದೆ. ಯುವಕರು ಹೆಚ್ಚೆಚ್ಚು ಕೃತಿ ಕಡೆಗೆ ಆಕರ್ಷಣೆಗೊಳಗಾಗುತ್ತಿದ್ದಾರೆ.

ಆದ್ದರಿಂದ ಯುವಕರಿಗೆ ನೆರವಾಗುವ ನಿಟ್ಟಿನಲ್ಲಿ ಲಭ್ಯ ಮಾಧ್ಯಗಳನ್ನು ಬಳಕೆ ಮಾಡಿಕೊಂಡು ಯುವ ಜನತೆಯನ್ನು ಕೃಷಿ ಮತ್ತು ತೋಟಗಾರಿಕೆ ಕಡೆಗೆ ಆಹ್ವಾನಿಸಿ ಎಂದರು. ಸೆಡ್‌ನೆಟ್‌, ಪಾಲಿಹೌಸ್‌ ಆಸಕ್ತಿ ಹೆಚ್ಚಾಗುತ್ತಿದೆ. ಜಿಲ್ಲೆಗೆ ನೀಡಿರುವ ಗುರಿಯ ಕುರಿತು ಕೃಷಿ ಸಚಿವರೊಂದಿಗೆ ಮಾತನಾಡಿ ಹೆಚ್ಚಳ ಮಾಡಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಅಲ್ಲದೆ ಏನಾದರೂ ಸಮಸ್ಯೆಗಳಿದ್ದರೆ ನನ್ನೊಂದಿಗೆ ನೇರವಾಗಿ ಮಾತನಾಡಿ, ಸದಾ ನಿಮ್ಮ ಸೇವೆಗೆ ಲಭ್ಯ ಇರತ್ತೇನೆ ಎಂದರು. ಹವಾಮಾನ ಆಧಾರಿತ, ಮಿಶ್ರ ಬೇಸಾಯ ಪದ್ಧತಿ, ನೀರುಕಡಿಮೆ ಬಳಕೆ ಮಾಡುವ ಪದ್ಧತಿಗಳಲ್ಲಿ ತೋಟಗಾರಿಕೆ ಫಲಸಲು ತೆಗೆಯುವ ನಿಟ್ಟಿನಲ್ಲಿ ಮಾಹಿತಿ ನೀಡಿ. ಜಿಲ್ಲೆಯಲ್ಲೂ ಅತೀ ಹೆಚ್ಚು ಹಣ್ಣಿನ ಬೆಳೆಗಳನ್ನು ಬೆಳೆಯಿರಿ, ಜಿಲ್ಲೆಯಲ್ಲಿ ಕಾಗಿಣಾ ನದಿಯಲ್ಲಿ ನೀರಿನ ಕೊರತೆ ಇಲ್ಲ.

Advertisement

ಆದರೆ, ಅದನ್ನು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ್‌ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ್‌ ಯಾಕಾಪುರ ಮಾತನಾಡಿ, ಜಿಲ್ಲೆಯಲ್ಲಿ ತೋಟಗಾರಿಕೆಗೆ ವಿಫುಲ ಅವಕಾಶಗಳಿವೆ. ಆದರೆ, ಇಲಾಖೆಯಲ್ಲಿ ಜಿಲ್ಲೆಗೆ ನೀಡಿರುವ ಹಲವಾರು ಜನೆಗಳ ಅಡಿ ಗುರಿ ಕಡಿಮೆ ಇದೆ. ಇದರಿಂದಾಗಿ ಎಲ್ಲ ಅರ್ಹ ರೈತರಿಗೆ ಯೋಜನೆ ಪ್ರಯೋಜನ ತಲುಪಿಸಲು ಸಾಧ್ಯವಾಗುತ್ತಿಲ್ಲ.

ಆದ್ದರಿಂದ ಸಚಿವರು, ಗುರಿಹೆಚ್ಚಳಕ್ಕೆ ಹೆಚ್ಚು ಆಸಕ್ತಿ ವಹಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಅತಿ ಹೆಚ್ಚು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದರು.ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪಾ ಪಾಟೀಲ ದಂಗಾಪುರ, ತೋಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರು, ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ,

ಎನ್‌ಇಕೆಆರ್‌ಟಿಸಿ ಅಧ್ಯಕ್ಷ ಇಲಿಯಾಸ್‌ ಸೇಠ ಬಾಗಬಾನ್‌, ಜಿಪಂ ಸಿಇಒ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಹಾಪ್ಸಕಾಮ್‌ ಅಧ್‌ ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ ಇದ್ದರು. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮೊಹಮ್ಮದ ಅಲಿ ಸ್ವಾಗತಿಸಿದರು. ಶಿವಕುಮಾರ ಪವಾಡಶೆಟ್ಟಿ ಹಾಗೂ ತಾಲೂಕು ಸಹಾಯಕ ಅಧಿಕಾರಿಗಳು ಇದ್ದರು. ಆರ್‌ಜೆ ವಾಣಿಶ್ರೀ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next