Advertisement
ಎರಡು ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತ ಮುಖಂಡರು ಪಟ್ಟಣದ ಆರ್‌ಎಂಸಿ ಆವರಣದಲ್ಲಿ ಸೇರಿ ನಂತರ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ರೈತರಿಗೆ ಎದುರಾಗಿರುವ ಸಮಸ್ಯೆ ಪರಿಹರಿಸ ಬೇಕು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.
Related Articles
Advertisement
ಪವರ್ ಸ್ಟೇಷನ್ ಪೂರ್ಣಗೊಳಿಸಿ: ವಿದ್ಯುತ್ ಪರಿ ವರ್ತಕಗಳು ಸುಟ್ಟುಹೋದರೆ 72 ಗಂಟೆಯಲ್ಲಿ ಸರಿಪಡಿಸಬೇಕೆಂಬ ಸರ್ಕಾರದ ನಿಯಮವಿದ್ದರೂ ಸಹ ತಿಂಗಳುಗಟ್ಟಲೆ ಸರಿಪಡಿಸದೆ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಹನೂರು ತಾಲೂಕಿನ ಕಾಡಂಚಿನ ಗ್ರಾಮಗಳಿಗೆ ಕಳಪೆ ವಿದ್ಯುತ್ ಪೂರೈಕೆಯಿಂದ ರೈತರು ನಷ್ಟಕ್ಕೆ ಒಳಗಾಗುತ್ತಿದ್ದು, ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಮತ್ತು ಹನೂರು ತಾಲೂಕಿನ
ಅಜ್ಜೀಪುರದಲ್ಲಿ ಪವರ್ ಸ್ಟೇಷನ್ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು. ರೈತ ಮುಖಂಡರ ಸಮಸ್ಯೆಗಳನ್ನು ಆಲಿಸಿದ ಮೈಸೂರಿನ ಸೂಪರಿಟೆಂಡೆಂಟ್ ಎಂಜಿನಿಯರ್ ಮಹದೇವ ಪ್ರಸನ್ನ ರೈತರ ದೂರುಗಳನ್ನು ಆಲಿಸಿದ ಬಳಿಕ ಮಾತನಾಡಿ, ಕೂಡಲೇ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕಾನೂನು ಕ್ರಮದ ಭರವಸೆ: ಕೆಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು 24 ಗಂಟೆಯೊಳಗಾಗಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಮತ್ತು ಕಳೆದ ಮೂರು ತಿಂಗಳ ಹಿಂದೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಲೈನ್‌ಮ್ಯಾನ್‌ಗಳು ಕೇಂದ್ರ ಸ್ಥಾನದಲ್ಲಿ ಇರಬೇಕೆಂದು ಸೂಕ್ತ ನಿರ್ದೇಶನ ನೀಡಿದ್ದು, ಇದರ ಬಗ್ಗೆ ಸಮಗ್ರವಾಗಿ ಪರಿಗಣಿಸಿ ಕಾನೂನು ಕ್ರಮಕೈಗೊಳ್ಳುವ ಭರವಸೆ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವರಾಮು, ಕಾರ್ಯಾಧ್ಯಕ್ಷ ಶೈಲೇಂದ್ರ, ತಾಲೂಕು ಅಧ್ಯಕ್ಷ ಗೌಡೇಗೌಡ, ಉಪಾಧ್ಯಕ್ಷ ಬಸವರಾಜು, ರೈತ ಮುಖಂಡರಾದ ಜೋಯಲ್, ಭಾಸ್ಕರ್, ಚೌಡಶೆಟ್ಟಿ, ಏಲಕ್ಕಿಗೌಡ, ಬಸವರಾಜು, ನಾಗೇಂದ್ರ, ರಾಜಣ್ಣ,
ಸೋಮಣ್ಣ, ಶಿವಮ್ಮ, ರಾಣಿ, ಕೆಂಪಣ್ಣ, ಮುಳ್ಳೂರು ಶಿವಮಲ್ಲು, ಸೆಸ್ಕ್ ಇಇ ಪ್ರದೀಪ್, ಹನೂರು ಎಇಇ ಶಂಕರ್, ಕೊಳ್ಳೇಗಾಲ ಎಇಇ ಲಿಂಗರಾಜು ಇದ್ದರು.