Advertisement

ಕಬ್ಬಿನ ದರ ನಿಗದಿಗೆ ರೈತರ ಒತ್ತಾಯ

04:03 PM Nov 19, 2019 | Suhan S |

ಬೆಳಗಾವಿ: ಪ್ರಸಕ್ತ ಹಂಗಾಮಿನ ಕಬ್ಬಿನ ದರ ನಿಗದಿ ಹಾಗೂ ಬಾಕಿ ಬಿಲ್‌ ಪಾವತಿಗೆ ಆಗ್ರಹಿಸಿ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ ರೈತರಿಗೆ ಆದ ಹಾನಿಯನ್ನು ಗಮನದಲ್ಲಿ ಇಟ್ಟುಕೊಂಡು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರುಎಫ್‌ಆರ್‌ಪಿ ದರಕ್ಕಿಂತ 500 ರೂ. ಹೆಚ್ಚಿಗೆ ನೀಡಬೇಕು. ಸರ್ಕಾರಕ್ಕೆ ಒಂದು ಟನ್‌ ಕಬ್ಬಿಗೆ 4500 ರೂ. ಅಬಕಾರಿ ಖಾತೆಯಿಂದ ತೆರಿಗೆ ಹೋಗುತ್ತದೆ. ಹೀಗಾಗಿ ಸರ್ಕಾರ ಪ್ರತಿ ಟನ್‌ ಕಬ್ಬಿಗೆ ಸಾವಿರ ರೂ. ರೈತರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.

ಕಾರ್ಖಾನೆಗಳಲ್ಲಿ ರೈತರಿಗೆ ತೂಕದಲ್ಲಿ ಹಾಗೂ ರಿಕವರಿಯಲ್ಲಿ ದೊಡ್ಡ ಮೋಸ ಆಗುತ್ತಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು,ಉಪವಿಭಾಗಾಧಿಕಾರಿಗಳು ನಾಲ್ಕು ದಿನಗಳಿಗೊಮ್ಮೆ ಕಾರ್ಖಾನೆಗೆ ಹೋಗಿ ರಿಕವರಿ ಹಾಗೂ ತೂಕದ ಸೇತುವೆ ಪರಿಶೀಲಿಸಬೇಕು. ಕಟಾವು ಹಾಗೂ ಸಾಗಾಣಿಕೆಯಲ್ಲಿ ಎಂಎನ್‌ಟಿಯನ್ನು 15 ಕಿಮೀ ಒಳಗಾಗಿ ಕಬ್ಬು ತಂದುನುರಿಸಬೇಕು ಎಂಬ ನಿಯಮವಿದೆ. 750 ರೂ. ತೋರಿ‌ಸಿ ರೈತರಿಗೆ ಮೋಸ ಮಾಡಲಾಗುತ್ತಿದೆ. ರೈತರಿಗೆ ಯಾವ ಕಾರ್ಖಾನೆಗೂ ಕಬ್ಬು ಕಳುಹಿಸುವ ಸ್ವಾತಂತ್ರ ನೀಡಬೇಕು ಎಂದು ಒತ್ತಾಯಿಸಿದರು.

ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡಬೇಕು. ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ರೈತ ಮುಖಂಡರಾದ ಚೂನಪ್ಪ ಪೂಜೇರಿ, ರಾಘವೇಂದ್ರ ನಾಯಕ, ಜಯಶ್ರೀ ಗುರಣ್ಣವರ, ಮಂಜು ಗಡಗಿ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next