ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ನೇತೃತ್ವದಲ್ಲಿ ಸೋಮವಾರ ಸಭೆ ನಡೆಸಿದ್ದು, ರೈತರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.
Advertisement
ನಗರದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಗೆ ಭೂ ಸಂತ್ರಸ್ತ ರೈತರೆಲ್ಲ ಆಗಮಿಸಿದ್ದರು. ವಿಸ್ತರಣೆ ಕಾಲುವೆ ವ್ಯಾಪ್ತಿಗೆ ಕಲ್ಮಲಾ, ಅಸ್ಕಿಹಾಳ, ಯರಮರಸ್ ಕ್ಯಾಂಪ್, ರಾಂಪುರ, ಚಂದ್ರಬಂಡಾ ಸೇರಿ ವಿವಿಧ ಗ್ರಾಮಗಳು ಸೇರಲಿದ್ದು, ಎಲ್ಲ ಕಡೆಯಿಂದಲೂ ರೈತರು ಆಗಮಿಸಿದ್ದರು. ಎಡಿಸಿ ಗೋವಿಂದರೆಡ್ಡಿ ಮಾತನಾಡಿ, ಈಗಾಗಲೇ ಭೂಮಿ ಸರ್ವೆ ಕಾರ್ಯ ಮುಗಿದಿದ್ದು, ರೈತರಿಗೆ ನೋಟಿಸ್ ವಿತರಣೆ ಮಾಡಲಾಗಿದೆ. ಸರ್ಕಾರ ರೈತರಿಂದ ಅಭಿಪ್ರಾಯ ಪಡೆದು ವರದಿ ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ನೀರಾವರಿ ಇಲಾಖೆ ಕಚೇರಿಗೆ ತೆರಳಿದರೆ ರೈತರಿಗೆ ಕಿಂಚಿತ್ತು ಗೌರವ ನೀಡುವುದಿಲ್ಲ. ಹೀಗಾಗಿ ಕಚೇರಿಯನ್ನು ನಗರದ ಆಸುಪಾಸು ಸ್ಥಳಾಂತರಿಸಬೇಕು. ಜಮೀನು ಮಾತ್ರವಲ್ಲದೇ, ನಿವೇಶನಗಳು ಕೂಡ ಸ್ವಾ ಧೀನಕ್ಕೆ ಒಳಪಡುತ್ತಿವೆ. ದರ ನಿಗದಿ ವಿಚಾರದಲ್ಲಿ ಪರಿಶೀಲಿಸಬೇಕು. ಜಿಎಸ್‌ಟಿ ಜಾರಿಯಾಗುವ ಮುಂಚೆ ಇದ್ದ ದರಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಎಡಿಸಿ ಗೋವಿಂದರೆಡ್ಡಿ ಮಾತನಾಡಿ, ನಿಮ್ಮ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಭೂ ಸ್ವಾಧಿಧೀನಕ್ಕೆ ಜಿಎಸ್‌ಟಿ ಅನ್ವಯವಾಗುವುದಿಲ್ಲ. ಜಿಲ್ಲೆಯಲ್ಲಿ ಒಟ್ಟು 1500 ಎಕರೆಗೂ ಹೆಚ್ಚು ಭೂಮಿ ಸ್ವಾ ಧೀನಪಡಿಸಿಕೊಳ್ಳಲಾಗುತ್ತಿದೆ. ಸುಮಾರು 900 ರೈತರಿಗೆ ಪರಿಹಾರ ವಿತರಿಸಬೇಕಿದೆ. ಶೀಘ್ರದಲ್ಲೇ ಸಚಿವ ಸಂಪುಟ ಸಭೆ ನಡೆಸಲಾಗುವುದು. ಹೀಗಾಗಿ ಸರ್ಕಾರ ರೈತರಿಂದ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ಸೂಚಿಸಿದ್ದರಿಂದ ಸಭೆ ನಡೆಸಿದ್ದಾಗಿ ಹೇಳಿದರು. ನಂತರ ಜಿಲ್ಲೆಯ ಕವಿತಾಳ ಮತ್ತು ಲಿಂಗಸುಗೂರು ಭಾಗದಲ್ಲಿ ಸಭೆ ನಡೆಸಿದರು. ಸಹಾಯಕ ಆಯುಕ್ತ ಮಲ್ಲಪ್ಪ ಪೂಜಾರಿ, ನೂರಾರು ರೈತರು ಪಾಲ್ಗೊಂಡಿದ್ದರು.
Related Articles
ವಿವಿಧ ಗ್ರಾಮಗಳ ರೈತರು
Advertisement