ಶಹಾಬಾದ: ಕೃಷಿ ಉಳಿಸಿ‰ ಪ್ರಜಾಪ್ರಭುತ್ವ ರಕ್ಷಿಸಿ, ಮೂರು ರೈತ ವಿರೋಧಿ ಕೃಷಿ ಮಸೂದೆ ರದ್ದುಪಡಿಸುವಂತೆ ಒತ್ತಾಯಿಸಿ ಮತ್ತು ಎಂಎಸ್‌ಪಿ ಶಾಸನಬದ್ಧ ಆಗಿಸುವಂತೆ ಒತ್ತಾಯಿಸಿ ಶನಿವಾರ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘ ಚಿತ್ತಾಪುರ ಘಟಕದ ಅಧ್ಯಕ್ಷ ಸಾಯಬಣ್ಣ ಗುಡುಬಾ, ಮೂರು ಕೇಂದ್ರ ಕೃಷಿ ಕಾನೂನುಗಳು ಅಸಾಂವಿಧಾನಿಕವಾಗಿವೆ. ಏಕೆಂದರೆ ಕೃಷಿ ಮಾರುಕಟ್ಟೆಗಳ ವಿಷಯದಲ್ಲಿ ಶಾಸನ ಮಾಡಲು ಕೇಂದ್ರ ಸರ್ಕಾರಕ್ಕೆ ಯಾವುದೇ ಅಧಿ ಕಾರವಿಲ್ಲ. ಈ ಶಾಸನಗಳು ಪ್ರಜಾಪ್ರಭುತ್ವ ವಿರೋ ಧಿ ಇಂತಹ ಕಾನೂನುಗಳನ್ನು ರಚಿಸುವ ಮೊದಲು ರೈತರೊಂದಿಗೆ ಯಾವುದೇ ಸಮಾಲೋಚನೆ ಮತ್ತು ಸಂವಾದ ನಡೆಸಿಲ್ಲ.
ಸರಿಯಾದ ಕಾರಣಗಳನ್ನು ಕೇಳದೇ ಮತ್ತು ವಿವರಣೆ ನೀಡದೇ ರಹಸ್ಯವಾಗಿ ಸುಗ್ರೀವಾಜ್ಞೆ ರೂಪದಲ್ಲಿ ತರಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಮಸೂದೆಗಳನ್ನು ಸಂಸತ್‌ನಲ್ಲಿ ಮಂಡಿಸುವಾಗ ರಾಜ್ಯಸಭೆಯಲ್ಲಿ ಮತ ವಿಭಜನೆಗೆ ಅವಕಾಶ ನೀಡಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಇತರರು ರಚಿಸಿದ ಸಂವಿಧಾನದ ಮೊದಲ ರಕ್ಷಕರಾಗಿ ಅಸಾಂವಿಧಾನಿಕ ಪ್ರಜಾಪ್ರಭುತ್ವ ವಿರೋಧಿ ಮತ್ತು ರೈತ ವಿರೋ ಧಿ ಕಾನೂನುಗಳನ್ನು ನಿರಾಕರಿಸುತ್ತಿರೆಂದು ಭಾವಿಸಿದ್ದೆವು. ನೀವು ಹಾಗೆ ಮಾಡಲಿಲ್ಲ ಎಂದು ದೂರಿದರು.
ರೈತರ ಆಂದೋಲನದ ನ್ಯಾಯ ಸಮ್ಮತ ಬೇಡಿಕೆಗಳನ್ನು ತಕ್ಷಣ ಸ್ವೀಕರಿಸಲು ಮೂರು ರೈತ ವಿರೋ ಧಿ ಕಾನೂನುಗಳನ್ನು ರದ್ದುಗೊಳಿಸಲು ಮತ್ತು ಎಲ್ಲ ರೈತರಿಗೆ ಆದಾಯ ನೀಡುವ ಎಂಎಸ್‌ಪಿ ಖಾತ್ರಿಪಡಿಸುವ ಕಾನೂನನ್ನು ಜಾರಿಗೆ ತರಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಪತ್ರದ ಮೂಲಕ ರಾಷ್ಟ್ರಪತಿಗೆ ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಂಚಾಲಕ ರಾಯಪ್ಪ ಹುರಮುಂಜಿ, ಕಾರ್ಯದರ್ಶಿ ಶಕುಂತಲಾ ಪವಾರ, ಮಲ್ಲೇಶಿ ಭಜಂತ್ರಿ ಇತರರು ಇದ್ದರು.