ನಗರದ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
Advertisement
ಈ ವೇಳೆ ಪಕ್ಷದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ 34 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿರುವುದು ಸಂತಸ ತಂದಿದೆ ಎಂದರು.
ಅವರು ಸಾಲ ಮನ್ನಾದೊಂದಿಗೆ ವಯೋವೃದ್ಧರ ಪಿಂಚಣಿಯನ್ನು 6 ನೂರರಿಂದ ಸಾವಿರಕ್ಕೆ ಹೆಚ್ಚಿಸಿದ್ದಾರೆ.
ಮತ್ತು ಗರ್ಭಿಣಿಯರಿಗೆ ಪ್ರತಿ ತಿಂಗಳು ಸಾವಿರದಂತೆ 6 ತಿಂಗಳವರೆಗೆ ಆರ್ಥಿಕ ನೆರವು ನೀಡಿದ್ದಾರೆ ಎಂದು
ತಿಳಿಸಿದರು. ಪಕ್ಷದ ತಾಲೂಕು ಘಟಕದ ಕಾರ್ಯದರ್ಶಿ ವೆಂಕಟೇಶ ಭಕ್ರಿ ಮಾತನಾಡಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚಿಸಿ 25
ಕೋಟಿ ರೂ. ಮತ್ತು ಆರ್ಯವೈಶ್ಯ ಅಭಿವೃದ್ಧಿ ಮಂಡಳಿ ರಚಿಸಿ 10 ಕೋಟಿ ರೂ. ಅನುದಾನ ಮೀಸಲಿರಿಸಿರವುದು
ಸ್ವಾಗತರ್ಹವಾಗಿದೆ ಎಂದರು. ಈ ಸಂದರ್ಭದಲ್ಲಿ ತಿಪ್ಪಣ್ಣ ಪಾಟೀಲ, ಸಂಗಣ್ಣ ಬಾಕ್ಲಿ, ಶೌಕತ್ ಅಲಿ, ಹಣಮಂತ್ರಾಯ ಜಹಾಗೀರದಾರ, ಇಸ್ಮಾಯಿಲ್, ಶಖಾವತ್ ಹುಸೇನ ವನದುರ್ಗ, ಅನ್ಸರ್ ಲಾವೋರಿ ಇದ್ದರು.