ಲೈಡಾರ್ ಅನ್ನು ಕೃಷಿಯಲ್ಲಿ ಪರಿಚಯಿಸಲು ಅಮೆರಿಕ ಮೂಲದ ಸೂøಸ್ ಕ್ಯಾಪಿಟಲ್ ಪಾರ್ಟನರ್ ಕಂಪೆನಿಯೊಂದು ಮುಂದಾಗಿದ್ದು, ಇದರಿಂದ ಜಮೀನಿನಲ್ಲಿಯ ಪ್ರತಿಯೊಂದು ಗಿಡವೂ ಡಿಜಿಟಲೀಕರಣಗೊಳ್ಳಲಿದೆ.
Advertisement
ಅಮೆರಿಕದಲ್ಲಿ ಆಲ್ಮಂಡೊ ಪ್ಲಾಂಟೇಷನ್ ಮೇಲೆ ಇದರ ಪ್ರಯೋಗ ಯಶಸ್ವಿಯಾಗಿದ್ದು, ಕೃಷಿ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಈ ತಂತ್ರಜ್ಞಾನ ಬಳಸಲಾಗುತ್ತಿದೆ. ಶೀಘ್ರದಲ್ಲೇ ಮಲೇಷಿಯಾ, ಬ್ರೆಜಿಲ್ ಮತ್ತು ಭಾರತದ ತೆಂಗು, ಅಡಿಕೆಯಂತಹ ಪ್ಲಾಂಟೇಷನ್ ಬೆಳೆಗಳ ನಿರ್ವಹಣೆಗಾಗಿ ಲೈಡಾರ್ ((LiDAR)) ತಂತ್ರಜ್ಞಾನವನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಕೆಲವೇ ದಿನಗಳಲ್ಲಿ ಇದು ಭಾರತ ಪ್ರವೇಶಿಸಲಿದೆ ಕಂಪೆನಿಯ ಸಹ ಪಾಲುದಾರ ಗಣೇಶಮೂರ್ತಿ ಕಿಶೋರ್ ತಿಳಿಸಿದರು.
ಇದರ ಬಳಕೆಯಿಂದ ಕ್ಯಾಲಿಫೋರ್ನಿಯಾದಲ್ಲಿ ಒಂದು ಎಕರೆ ಆಲ್ಮಂಡೊಗೆ ಸಾವಿರ ಡಾಲರ್ ಹಣ ಉಳಿತಾಯ ಆಗುತ್ತಿದೆ. ಒಂದು ದಿನದಲ್ಲಿ ಸಾವಿರ ಎಕರೆಯಷ್ಟು ಪ್ರದೇಶವನ್ನು ಈ ಲೈಡಾರ್ ಅನಾಯಾಸವಾಗಿ ಸುತ್ತಿಬರುತ್ತದೆ. ನಂತರ ಆ ಎಲ್ಲ ಮಾಹಿತಿಯು ಕಂಪ್ಯೂಟರ್‌ನಲ್ಲಿ ದಾಖಲಾಗುವ ಮೂಲಕ ಡಿಜಟಲೀಕರಣಗೊಳ್ಳಲಿದೆ. ಡ್ರೋಣ್‌ನಲ್ಲಿ ಈಗ ಸಾಮಾನ್ಯ ಕ್ಯಾಮೆರಾ ಬಳಸಲಾಗುತ್ತದೆ. ಅದು ಸೆರೆಹಿಡಿಯುವ ಚಿತ್ರಗಳನ್ನು ಸಂಗ್ರಹಿಸಿ, ಮ್ಯಾನ್ಯುವಲ್ ಆಗಿ ವಿಶ್ಲೇಷಣೆ ಮಾಡಲಾಗುತ್ತದೆ. ಆದರೆ, ಲೈಡಾರ್ ಏರಿಯಲ್ ನೋಟದಿಂದ ಪ್ರತಿ “3ಡಿ’ (ಮೂರೂ ದೃಷ್ಟಿಕೋನಗಳಿಂದ) ರೂಪದಲ್ಲಿ ಸಂಗ್ರಹಿಸಿ, ಗಿಡದ ಸ್ಥಿತಿಗತಿಯನ್ನು ವಿಶ್ಲೇಷಿಸುತ್ತದೆ. ಡ್ರೋಣ್‌ನಲ್ಲಿ ಈ ಡಿವೈಸ್ ಅನ್ನು ಅಳವಡಿಸಿ, ತೋಟ ಅಥವಾ ಜಮೀನುಗಳ ಮೇಲೆ ಕಾರ್ಯಾಚರಣೆಗೆ ಬಿಟ್ಟರೆ ಸಾಕು ಎಂದು ಡಾ.ಗಣೇಶಮೂರ್ತಿ ಕಿಶೋರ್ ವಿವರಿಸಿದರು.
Related Articles
ಗಿಡಗಳ ಮಾಹಿತಿ ಡಿಜಿಟಲೀಕರಣಗೊಳ್ಳುವುದರಿಂದ ಹಿಂದಿನ ವರ್ಷ ಮತ್ತು ಈ ವರ್ಷದ ಬೆಳೆಗಳ ಸ್ಥಿತಿಗತಿಯನ್ನೂ ಹೋಲಿಕೆ ಮಾಡಲು ಇದರಲ್ಲಿ ಅವಕಾಶ ಇದೆ. ಅದರಲ್ಲೂ ಅರಣ್ಯ ಪ್ರದೇಶಗಳಲ್ಲಿ ಇದು ಹೆಚ್ಚು ಉಪಯುಕ್ತ. ನಿರ್ದಿಷ್ಟ ಅರಣ್ಯದಲ್ಲಿರುವ ಮರಗಳೆಷ್ಟು? ಯಾವ ಮರ ನಾಪತ್ತೆಯಾಗಿದೆ? ಯಾವುದು ಬೀಳುವ ಸ್ಥಿತಿಯಲ್ಲಿದೆ ಎಂಬುದರ ನಿಖರ ಮಾಹಿತಿ ಸಿಗುತ್ತದೆ ಎಂದೂ ಅವರು ಹೇಳಿದರು.
Advertisement
ಲೈಡಾರ್ ಡಿವೈಸ್ ಅನ್ನು ರಕ್ಷಣಾ ಕ್ಷೇತ್ರದಲ್ಲಿ ಕಟ್ಟಡಗಳ ಅಧ್ಯಯನಕ್ಕೆ ಬಳಸಲಾಗುತ್ತದೆ. ಭೂಮಿಯ ನಕ್ಷೆ, ನೀರುಗಾಲುವೆಗಳಲ್ಲಿ ಅಕ್ರಮವಾಗಿ ಪೈಪ್ ಅಳವಡಿಸಿ ನೀರು ಕದಿಯುವುದು, ವಿದ್ಯುತ್ ಕಳ್ಳತನ ಸೇರಿದಂತೆ ಹತ್ತಾರು ಉದ್ದೇಶಗಳಿಗೆ ಉಪಯೋಗಿಸಲು ಅವಕಾಶಗಳಿವೆ. ಆದರೆ, ಇದಕ್ಕೆ ಮನಸ್ಸು ಮಾಡಬೇಕಷ್ಟೇ ಎಂದು ಅವರು ಸ್ಪಷ್ಟಪಡಿಸಿದರು.
ಕಾರ್ಯವೈಖರಿ ಹೀಗೆಲೇಸರ್ ಕಿರಣಗಳನ್ನು ಬೆಳೆಗಳ ಮೇಲೆ ಬಿಡುತ್ತದೆ. ಅದರಿಂದ ಪ್ರತಿಫಲನಗೊಳ್ಳುವ ಕಿರಣವನ್ನು ಲೈಡಾರ್ ವಿಶ್ಲೇಷಣೆ ಮಾಡುತ್ತದೆ. ಕಾಂಡ ಅಥವಾ ಎಲೆ ದಪ್ಪವಾಗಿದ್ದರೆ, ಪ್ರತಿಫಲನ ಹೆಚ್ಚು ತೀಕ್ಷ್ಣವಾಗಿರುತ್ತದೆ. ತೆಳುವಾಗಿದ್ದರೆ, ಮಂದವಾಗಿರುತ್ತದೆ.