Advertisement
ಕೈರಂಗಳ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೆರವಿನೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಡಿಪು ವಲಯ ಸಹಕಾರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಎರಡನೇ ವರ್ಷದ “ಕೈರಂಗಳ ಕೃಷಿ ಉತ್ಸವ-2019’ಕ್ಕೆ ಚಾಲನೆ ನೀಡಿ ಮಾತನಾಡಿದರು.
ನಿಜವಾದ ರೈತ ಕೃಷಿ ಭೂಮಿಯನ್ನು ಮಾರಾಟ ಮಾಡುವುದಿಲ್ಲ . ಅವರಿಗೆ ಮಣ್ಣಿನ ಮೇಲೆ ಪ್ರೀತಿ ಇರುತ್ತದೆ. ಆದರೆ ಕೃಷಿ ಕಾರ್ಯದಿಂದ ವಿಮುಖರಾದವರೂ ಮಾತ್ರ ಮಾರಾಟ ಮಾಡುತ್ತಾರೆ. ಈ ನಿ ನಿಟ್ಟಿನಲ್ಲಿ ಕೃಷಿ ಉತ್ಸವದಲ್ಲಿ ರೈತರಿಗೆ ಆಧುನಿಕ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯವನ್ನು ಕೃಷಿ ಉತ್ಸವದಲ್ಲಿ ವ್ಯವಸ್ಥೆ ಮಾಡಿದೆ ಎಂದರು.
Related Articles
Advertisement
ಕೃಷಿ ಉತ್ಸವಕ್ಕೆ ವಿದ್ಯಾರ್ಥಿಗಳ ದಂಡುಕೈರಂಗಳ ಕೃಷಿ ಉತ್ಸವದ ಮೊದಲ ದಿನವಾದ ಶುಕ್ರವಾರ ಬೆಳಗ್ಗಿನಿಂದಲೇ ವಿದ್ಯಾರ್ಥಿಗಳು ಆಗಮಿಸಿ ಕೃಷಿ ಕುರಿತಾದ ಮಾಹಿತಿಯನ್ನು ಪಡೆದುಕೊಂಡರು. ಕೃಷಿ ಯಂತ್ರೋಪಕರಣಗಳು ವಿವಿಧ ಸಾವಯವ ಹಾಗೂ ರಸಗೊಬ್ಬರಗಳು ನವೋದಯ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ತರಕಾರಿ ಬೀಜಗಳು ಸಾವಯವ ತರಕಾರಿ ಬೀಜಗಳ ಮಾರಾಟ, ಕೋಳಿಗಳ ಪ್ರದರ್ಶನ ಜೇನುಸಾಕಣೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಂದ ಮಾಹಿತಿ ಮಳಿಗೆಗಳು, ಅಲಂಕಾರಿಕ ಮೀನು ಹಾಗೂ ಪಕ್ಷಿಗಳು ಜಾಕ್ ಅನಿಲ್ ಅವರಿಂದ ವಿವಿಧ ತಳಿಗಳ ಹಲಸಿನ ಗಿಡಗಳ ಪ್ರದರ್ಶನ ಮಾರಾಟ, ನರ್ಸರಿಗಳು ಸಾಮ್ರಾಜ್ಯ ಖಾಸಗಿ ಮಾರಾಟಗಾರರಿಂದ ಕೃಷಿಯಾಗಿ ಆಧುನಿಕ ಹೈನುಗಾರಿಕ ಯಂತ್ರೋಪಕರಣಗಳ ಮಾರಾಟ ಮಳಿಗೆಗಳು, ಗೃಹ ಉತ್ಪನ್ನಗಳು ಹಾಗೂ ಗವ್ಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು, ಎಲೆಕ್ಟ್ರಿಕಲ್ಸ್ ಎಲೆಕ್ಟ್ರೋನಿಕ್ಸ್ ಹಾಗೂ ಸೋಲಾರ ಪ್ರದರ್ಶನ-ಮಾರಾಟ, ಕೃಷಿ ನೀರಾವರಿ ಸಲಕರಣೆಗಳ ಪ್ರದರ್ಶನ ಮತ್ತು ಮಾರಾಟ ಪಾರಂಪರಿಕ ಸಲಕರಣೆಗಳ ಪ್ರದರ್ಶನ ವ್ಯವಸ್ಥೆಗೊಳಿಸಿದ್ದು ಡಿ. 29ರ ರವಿವಾರದವರೆಗೆ ಕೃಷಿ ಉತ್ಸವ ನಡೆಯಲಿದೆ. ಬೆಳೆಗೆ ದರ ನಿಗಧಿ ಅಗತ್ಯ
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಂತ್ರೋಪಕರಣಗಳನ್ನು ತಯಾರಿಸಿ ಅದಕ್ಕೆ ದರ ನಿಗದಿ ಮಾಡಲಾಗುತ್ತದೆ. ಆದರೆ ಕೃಷಿಕರು ಬೆಳೆದ ಉತ್ಪನ್ನಗಳಿಗೆ ದರ ನಿಗದಿ ಮಾಡಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರಕಾರ ಚಿಂತಿಸಬೇಕಿದೆ ಎಂದರು.