Advertisement
ಯೋಜನೆ ಘೋಷಿಸಿದ ತಿಂಗಳ ಬಳಿಕ ರೈತರ ಮಕ್ಕಳ ಖಾತೆಗೆ “ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಅನುಷ್ಠಾನಗೊಂಡಿದ್ದು, ಮೊದಲ ದಿನವೇ ಪಿಯುಸಿಯ 100 ವಿದ್ಯಾರ್ಥಿಗಳು ಹಾಗೂ 52 ವಿದ್ಯಾರ್ಥಿನಿಯರಿಗೆ ಕ್ರಮವಾಗಿ 2,500 ಹಾಗೂ 3,000 ರೂ. ಶಿಷ್ಯವೇತನವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ರೂಪದಲ್ಲಿ ಜಮೆ ಮಾಡಲಾಗಿದೆ.
Related Articles
Advertisement
ಸರಕಾರ 18 ಲಕ್ಷ ರೈತ ಮಕ್ಕಳಿಗೆ ಒಟ್ಟಾರೆ ಸಾವಿರ ಕೋಟಿ ರೂ. ಶಿಷ್ಯ ವೇತನ ನೀಡಲಿದೆ. ಇದು ಸರ್ಕಾರದ ಮೇಲಿನ ಹೊರೆ ಅಲ್ಲ. ಭವಿಷ್ಯದ ಆದಾಯಕ್ಕೆ ಹೂಡಿಕೆಯಾಗಿರುತ್ತದೆ ಎಂದರು.
60 ರೈತ ಸಂಜೀವಿನಿ ವಾಹನ :
ರಾಜ್ಯದಲ್ಲಿ ರೈತರಿಗೆ ತ್ವರಿತ ಸೇವೆಗಳನ್ನು ಒದಗಿಸಲು 60 ರೈತ ಸಂಜೀವಿನಿ ವಾಹನಗಳನ್ನು ಒದಗಿಸಲಾಗಿದೆ. ಇವು ಪರಿಣಾಮಕಾರಿ ಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು. ಸಚಿವರಾದ ಪ್ರಭು ಚೌವ್ಹಾಣ್, ಎನ್. ಮುನಿರತ್ನ, ನಾಗೇಶ್, ರಾಜ್ಯ ಸಾವಯವ ಮಿಷನ್ ಅಧ್ಯಕ್ಷ ಎ.ಎಸ್. ಆನಂದ್ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಕೃಷಿ ಡಿಜಿಟಲ್ ತಂತ್ರಜ್ಞಾನ ದೇಶಕ್ಕೆ ಮಾದರಿ: ನರೇಂದ್ರ ಸಿಂಗ್ ತೋಮರ್ :
ಕೃಷಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರಕಾರ ಅಳವಡಿಸಿಕೊಂಡ ಡಿಜಿಟಲ್ ತಂತ್ರಜ್ಞಾನ ಇಡೀ ದೇಶಕ್ಕೆ ಮಾದರಿಯಾಗಿದ್ದು, ಇದೇ ಮಾದರಿಯನ್ನು ಅನುಸರಿಸುವಂತೆ ವಿವಿಧ ರಾಜ್ಯಗಳಿಗೂ ಸಲಹೆ ನೀಡಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು. ಕಾರ್ಯಕ್ರಮದಲಿ ಮಾತನಾಡಿದ ಅವರು, ಮುಂದಿನ 2 ದಿನಗಳ ಕಾಲ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರೊಂದಿಗೆ ಕೃಷಿ ಸಂಬಂಧಿತ ವಿಷಯಗಳ ಕುರಿತು ಚರ್ಚೆ ನಡೆಯ ಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಅಳವಡಿಸಿಕೊಂಡ ಡಿಜಿಟಲ್ ಮಾದರಿಯನ್ನು ಅನುಸರಿಸಲು ಸಲಹೆ ನೀಡಲಾಗುವುದು ಎಂದರು.