ಕುರುಗೋಡು: ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಬಿ. ಮದ್ವೇಶರಾವ್ ಹೇಳಿದರು.
ಸಮೀಪದ ಬೈಲೂರ್ ಗ್ರಾಮದ ಸಹಕಾರ ಸಂಘದ ವತಿಯಿಂದ ಶ್ರೀ ಶರಣ ಮಲ್ಲಪ್ಪ ತಾತನವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಜನ ಸಭೆಯಲ್ಲಿ ಮಾತನಾಡಿದ ಅವರು, ಸಿಂದಿಗೇರಿ ಮತ್ತು ಬೈಲೂರ್ ಗ್ರಾಮದ ರೈತರು ಸ್ಥಳೀಯ ಸಂಘದಲ್ಲಿ ರಸಗೊಬ್ಬರ ತೆಗೆದುಕೊಳ್ಳದೆ ಖಾಸಗಿ ರಸಗೊಬ್ಬರ ಅಂಗಡಿ ಗಳಲ್ಲಿ ಖರೀದಿ ಮಾಡುತ್ತಿದ್ದಾರೆ ಇದರಿಂದ ನಮ್ಮ ಸಂಘದ ಡಿಲೀರ್ ಶಿಪ್ ಮೇಲೆ ಪರಿಣಾಮ ಬಿರುತ್ತಿದ್ದೂ ಬೇಸರಾದ ಸಂಗತಿಯಾಗಿದೆ. ಇದಲ್ಲದೆ ಖಾಸಗಿ ಸಂಸ್ಥೆಗಳು ರೈತರ ಶೋಷಣೆಯಲ್ಲಿ ತೊಡಗಿವೆ. ಆದ್ದರಿಂದ ಸಹಕಾರ ಸಂಘಗಳು ರೈತರಿಗೆ, ಕೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸುವ ಮೂಲಕ ಅವರನ್ನು ಶೋಷಣೆಯಿಂದ ಮುಕ್ತಿಗೊಳಿಸುತ್ತದೆ ಎಂದು ತಿಳಿಸಿದರು.
ಇನ್ನೂ ಇಪ್ಕೋ ಮತ್ತು ಕೋರಮಂಡಲ್ ಕಂಪನಿಗಳು ರೈತರಿಗೆ ಬೇಕಾದ ರಸಗೊಬ್ಬರ ಸೇರಿದಂತೆ ಇತರೆ ಅನುಕೂಲತೆಗಳು ನೀಡುತ್ತಿದ್ದು, ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಸಂಘದ ಸದಸ್ಯರು ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಮರು ಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಈಗಾಗಲೇ ಮಳೆಯಿಂದ ಗ್ರಾಮದಲ್ಲಿ ರೈತರು ಬೆಳೆದ ಬೆಳೆಗಳು ನಷ್ಟಕ್ಕೆ ಹಿಡಾಗಿದ್ದು, ರೈತರು ಸಂಘದಲ್ಲಿ ಪಡೆದ ಸಾಲದ ಬಗ್ಗೆ ಚಿಂತಿಸದೆ ಇರಬೇಕು ಅದನ್ನು ಮನ್ನಾ ಮಾಡುವ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಸುಮಾರು 30 ವರ್ಷದಿಂದ ಸದಸ್ಯರ ಶೇರ್ ಮೊತ್ತ 250 ಇದ್ದು, ಸದ್ಯ 500ಕ್ಕೆ ಏರಿಕೆ ಮಾಡಲಾಗುತ್ತಿದೆ ಎಂದರು. ಇನ್ನೂ ಮುಖ್ಯವಾಗಿ ಸಂಘದ 5 ವರ್ಷ ದಲ್ಲಿ ಸದಸ್ಯರು 3 ಬಾರಿ ಸಭೆಗೆ ಮತ್ತು ವ್ಯವಹಾರ ಮಾಡಿಲ್ಲ ಎಂದಾದರೆ ಅಂತವರನ್ನು ಸದಸ್ಯತ್ವದಿಂದ ತೆಗೆದು ಹಾಕಲಾಗುವುದು ಎಂದು ತಿಳಿಸಿದರು.
ಸಂಘದ ಒಟ್ಟು ನಿವ್ವಾಳ 3 ಲಕ್ಷ 31 ಸಾವಿರ ಲಾಭವಾಗಿದೆ. ಸಂಘದಲ್ಲಿ 1218 ಸದಸ್ಯರಿದ್ದು, ಇವರಿಗೆ 2020 ರಿಂದ 21 ವರಗೆ 1658,76 ಲಕ್ಷ ಸಾಲ ನೀಡಲಾಗಿದೆ.70 ಜನ ರೈತರಿಗೆ 63 ಲಕ್ಷ ಬಿಡಿಪಿ ಲೋನ್ ಕೊಡಲಾಗಿದೆ. 1100 ರೈತರಿಗೆ 8 ಕೋಟಿ 70 ಲಕ್ಷ ಸಾಲ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹಳ್ಳಿ ಅಯ್ಯಣ್ಣ, ಉಪಾಧ್ಯಕ್ಷೆ ಜಾನಕಿ, ಸದಸ್ಯರಾದ ಎಂ. ವೆಂಕಟೇಶ್ವರ ರೆಡ್ಡಿ, ಎಸ್. ಆರ್. ಲತಾ, ಹರಿಜನ ಮರೀಗೆಮ್ಮ, ಮಂಜುನಾಥ ಸ್ವಾಮಿ, ಕೆ. ಗಿರಿ ಮೂರ್ತಿ, ಗುಡದಯ್ಯ ಪಕ್ಕೀರಪ್ಪ, ಆರ್. ಶರಣಪ್ಪ, ಮಿನಿಗರ ರಾಮೇಶಪ್ಪ, ಸಿರಿಗೇರಿ ಲಕ್ಷಣ, ಮುಖಂಡರಾದ ಎಚ್. ಆಂಜಿನಪ್ಪ, ಎಂ. ಶೇಕಣ್ಣ, ಸತ್ಯನಾರಾಯಣ ರೆಡ್ಡಿ, ಹರಿಜನ ಕನಕಪ್ಪ, ಗುಜ್ಜಲ್ ಗಾದಿಲಿಂಗಪ್ಪ ಸೇರಿದಂತೆ ಮತ್ತಿತರರು ಇದ್ದರು.