Advertisement

ರೈತರ ಹಿತ ಕಾಯುವ ಜೆಡಿಎಸ್‌

03:44 PM Apr 21, 2022 | Team Udayavani |

ಮೂಡಲಗಿ: ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ನಿರಂತರವಾಗಿ ಅನ್ನದಾತರ ಹಿತಕಾಯುವ ಆಲೋಚನೆ ನಡೆಸುತ್ತಾ ಬಂದಿದೆ. ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಜೆಡಿಎಸ್‌ ಪಕ್ಷ ಜನತಾ ಜಲಧಾರೆ ಯಾತ್ರೆ ಮೂಲಕ ಜನರಲ್ಲಿ ನೀರಾವರಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ಅರಭಾವಿ ಮತ ಕ್ಷೇತ್ರದ ಜೆಡಿಎಸ್‌ ಮುಖಂಡ ಭೀಮಪ್ಪ ಗಡಾದ ಹೇಳಿದರು.

Advertisement

ಪಟ್ಟಣಕ್ಕೆ ಬುಧವಾರ ಆಗಮಿಸಿದ ಜೆಡಿಎಸ್‌ ಜನತಾ ಜಲಧಾರೆ ರಥಕ್ಕೆ ಕಲ್ಮೇಶ್ವರ ವೃತ್ತದಲ್ಲಿ ಸ್ವಾಗತಕೋರಿ, ಪಟ್ಟಣದಲ್ಲಿ ನಡೆದ ರಥಯಾತ್ರೆಯ ನಂತರ ಬಸ್‌ ನಿಲ್ದಾಣ ಹತ್ತಿರ ಜರುಗಿದ ಸಮಾರಂಭದಲ್ಲಿ ಮಾತನಾಡಿದ ಅವರು, ಘಟಪ್ರಭಾದ ಹತ್ತಿರ ಇರುವ ಧೂಪದಾಳ ಜಲಾಶಯ ನಿರ್ಮಾಣವಾದ ನಂತರದಲ್ಲಿ ಯಾವುದೇ ಅಧಿಕಾರಿಗಳಾಗಲಿ, ಜನಪ್ರತಿನಿಗಳಾಗಲಿ ಹೂಳು ತೆಗೆಯುವ ಕೆಲಸ ಮಾಡಿಲ್ಲ. ಹೂಳು ತೆಗೆಯುವ ಕಾರ್ಯ ಮಾಡಿದರೆ ಈ ಭಾಗದ ಜನರ ನೀರಿನ ಸಮಸ್ಯೆ ತಪ್ಪಿಸಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ ಬೆಳಗಾವಿ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿಪರ ಚಿಂತನೆ ನಡೆಸುತ್ತಿಲ್ಲ. ಬಿಜೆಪಿ ಕಾರ್ಯಕಾರಣಿ ಹೆಸರಿನಲ್ಲಿ ಜನಪರ ಯಾವುದೇ ಚಿಂತನೆ ಮಾಡದೇ ಕೇವಲ ಅಧಿಕಾರಕ್ಕೆ ಹೇಗೆ ಬರಬೇಕು, ಚುನಾವಣೆ ಹೇಗೆ ಗೆಲ್ಲಬೇಕು ಎಂಬುದಷ್ಟೇ ಚಿಂತಿಸುತ್ತಿದೆ. ಇನ್ನೂ ಕಾಂಗ್ರೆಸ್‌ ನಡೆಗೆ ಕೃಷ್ಣೆಯ ಪಾದಯಾತ್ರೆ ನಡೆಸಿ, ನೀರಾವರಿಗೆ ಆದ್ಯತೆ ನೀಡಲಿಲ್ಲ. ಶಿಕ್ಷಣ, ಆರೋಗ್ಯ, ಮಹಿಳಾ ಸ್ವಾವಲಂಬನೆ, ಬೆಲೆ ಇಳಿಕೆ, ಜನಸಾಮಾನ್ಯರ ಬದುಕು ಮೇಲ್ದರ್ಜೆಗೇರಿಸುವುದು ಜೆಡಿಎಸ್‌ ಕಾರ್ಯ ಎಂದರು.

ಹಂದಿಗುಂದ ಶ್ರೀಗಳು, ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಸದಸ್ಯರಾದ ಎ.ಕೆ.ತಾಂಬೋಳಿ, ಶಿವು ಸಣ್ಣಕ್ಕಿ, ಸತ್ತೇವ್ವಾ ಅರಮನಿ, ಬೆಳಗಾವಿ ಸೇವಾದಳ ಜಿಲ್ಲಾಧ್ಯಕ್ಷ ನಕುಲ ಬೋವಿ, ಜಿಲ್ಲಾ ಯುವ ಮುಖಂಡ ಸುನೀಲ, ಮಲ್ಲಪ್ಪ ಮದಗುಣಕಿ, ಚನ್ನಪ್ಪ ಅಥಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೇತನ ಹೊಸಕೋಟಿ, ಪ್ರಕಾಶ ಕಾಳಶೆಟ್ಟಿ, ಮಾರುತಿ ಸುಂಕದ, ಬಸವರಾಜ ಕೌಜಲಗಿ, ಸಂಗಯ್ನಾ ಹಿರೇಮಠ, ಸಂಗಪ್ಪ ಕಳ್ಳಿಗುದಿ, ಲಿಂಗರಾಜ ಅಂಗಡಿ, ಶಂಕರ ಗಿಡಗೌಡ್ರ, ಶಿವಲಿಂಗ ಹಾದಿಮನಿ, ಮೋಸಿನ ತಾಂಬೋಳಿ, ಶಂಕರ ಅಡಿಗಿನಾಳ, ಶ್ರೀಕಾಂತ ಪರುಶೆಟ್ಟಿ, ರಾಮನಗೌಡ ಪಾಟೀಲ, ದರೇಪ್ಪ ಖಾನಗೌಡ್ರ, ಮಲ್ಲಿಕ ಅರಭಾಂವಿ, ಹಸನ ನದಾಫ್‌ ಹಾಗೂ ಅರಭಾವಿ ಕ್ಷೇತ್ರದ ಜೆಡಿಎಸ್‌ ಮುಖಂಡರು, ರೈತರು, ಕಾರ್ಯಕರ್ತರು ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next