Advertisement
ತೋಟಗಾರಿಕೆ ಇಲಾಖೆಗಳಲ್ಲಿ ರೈತರಿಗೆ ದೊರೆಯುವ ಸವಲತ್ತು ವಿತರಣೆ ವಿಳಂಬದ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಸಲಕರಣೆಗಳನ್ನು ಉತ್ಪನ್ನ ಮಾರಾಟ ಕಂಪೆನಿಯ ಮೂಲಕ ರೈತರಿಗೆ ನೇರವಾಗಿ ತಲುಪಿಸಲು ಸರಕಾರ ನಿರ್ಧರಿಸಿದ ಕಾರಣ ಕೆಲವು ಸವಲತ್ತುಗಳು ಸಿಗಲು ವಿಳಂಬವಾಗಿತ್ತು ಎಂದರು.
ಪುತ್ತೂರು ನಗರಸಭೆಯಲ್ಲಿ ಶೇ. 60ಕ್ಕಿಂತ ಅಧಿಕ ಹುದ್ದೆ ಖಾಲಿ ಇರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲ ತಾಂತ್ರಿಕ ಕಾರಣಗಳಿಂದ ನೇಮಕಾತಿಗೆ ತೊಡಕು ಉಂಟಾಗಿತ್ತು. ಪ್ರಸ್ತುತ ಹುದ್ದೆ ಭರ್ತಿ ಬಗ್ಗೆ ಪ್ರಕ್ರಿಯೆ ಆರಂಭಿಸಿದ್ದು, ಪುತ್ತೂರು ಸೇರಿದಂತೆ ರಾಜ್ಯದ ಸ್ಥಳೀ ಯಾಡಳಿತಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.