Advertisement
ಕೃಷ್ಣಾ ಭಾಗ್ಯ ಜಲ ನಿಮಗದ ವತಿಯಿಂದ ಬೀಳಗಿ ಮತಕ್ಷೇತ್ರದ ಬಾದಾಮಿ ತಾಲೂಕಿನ ಕೈನಕಟ್ಟಿ ಗ್ರಾಮದಲ್ಲಿ 238 ಕೋಟಿ ರೂ ವೆಚ್ಚದ ನೀರಾವರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಹೆರಕಲ್ ಬಳಿ ಇರುವ ಚಿಕ್ಕ ಆಣೆಕಟ್ಟಿನಿಂದ ನೀರನ್ನು ಬಳಸಿಕೊಂಡು 15 ಸಾವಿರ ಎಕರೆ ಭೂಮಿ ನೀರಾವರಿ ಹಾಗೂ 7 ಕೆರೆ ತುಂಬಿಸುವ ಯೋಜನೆ ಇದಾಗಿದೆ ಎಂದರು. ರಾಜ್ಯದಲ್ಲಿ 2012-13ನೇ ಸಾಲಿನಲ್ಲಿ 600 ಕೋಟಿ ರೂ.ಗಳ ವೆಚ್ಚದಲ್ಲಿ 52 ಸಾವಿರ ಎಕರೆ ನೀರಾವರಿ ಕ್ಷೇತ್ರವನ್ನಾಗಿಸಬೇಕೆಂಬ ಗುರಿ ಹೊಂದಲಾಗಿತ್ತು. ಕಾರಣಾಂತರಗಳಿಂದ ಆ ಕಾರ್ಯ ಇಂದು ಕೈಗೂಡಿದೆ ಎಂದರು.
Related Articles
Advertisement
ಈ ಯೋಜನೆಯಲ್ಲಿ ಬೀಳಗಿ ಮತಕ್ಷೇತ್ರದ ಗಲಗಲಿ, ಹಲಗಲಿ, ಸುನಗ ಸೇರಿದಂತೆ 16 ಕೆರೆಗಳು ಇನ್ನೊಂದು ಭಾಗವಾಗಿ ತೆಗ್ಗಿ, ಸಿದ್ದಾಪುರ ಗ್ರಾಮಗಳಿಗೆ ನೀರಾವರಿ ಕಲ್ಪಿಸುವ ಮತ್ತು ಬಾದಾಮಿ ತಾಲೂಕಿನ ಸಿಪರಮಟ್ಟಿ, ನರೇನೂರ, ಬೆಳ್ಳಿಕಿಂಡಿ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಬಹುಗ್ರಾಮ ನೀರಾವರಿಗಾಗಿ ಸಿಪರಮಟ್ಟಿ, ಹನಮನೇರಿ, ನರೇನೂರ ತಾಂಡಾ, ನೀರಲಕೇರಿ ರಡ್ಡೇರ ತಿಮ್ಮಾಪುರ, ನಂದಿಹಾಳ ಹಾಗೂ ಜಂಗ್ವಾಡ ಗ್ರಾಮಗಳಿಗೆ ನೀರಾವರಿ ಕಲ್ಪಿಸಲಾಗುವುದೆಂದರು.
ತಜ್ಞರಾದ ಸಂದೀಪ ನಾಡಗೀರ ಮಾತನಾಡಿದರು. ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ಪಿ.ಎಚ್.ಪೂಜಾರ ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ನಿಂಗಪ್ಪಜ್ಜ ವಹಿಸಿದ್ದು, ವಿಧಾನಪರಿಷತ್ ಮಾಜಿ ಸದಸ್ಯ ಸದಸ್ಯ ನಾರಾಯಣಸಾ ಭಾಂಡಗೆ, ಜಿಪಂ ಸದಸ್ಯರಾದ ಭೀಮನಗೌಡ ಪಾಟೀಲ, ಹೂವಪ್ಪ ರಾಠೊಡ, ಕೃಷ್ಣಾ ಓಗೇನ್ನವರ, ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಮಹಾಂತೇಶ ಮಮದಾಪುರ ಉಪಸ್ಥಿತರಿದ್ದರು.