Advertisement

ಬಾಕಿ ಪಾವತಿಗೆ ಕ್ರಮ ಕೈಗೊಳ್ಳಿ

06:41 PM Nov 09, 2020 | Suhan S |

ಬನಹಟ್ಟಿ: ಕಳೆದೆರಡು ವರ್ಷಗಳಿಂದ ತೇರದಾಳದ ಸಾವರಿನ್‌ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಬರಬೇಕಾದ 21.5 ಕೋಟಿ ರೂ. ಕಬ್ಬಿನ ಬಾಕಿ ವಸೂಲಿಗೆ ಸರ್ಕಾರ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿತ್ತು. ಆದರೆ, ಯಾವುದೇ ಪರಿಹಾರ ಒದಗಿಸದೆ ಕಾಲಹರಣ ಮಾಡುತ್ತ ರೈತರನ್ನು ಮತ್ತಷ್ಟು ಸಾಲಕ್ಕೆ ನೂಕುವಂತೆ ಮಾಡುತ್ತಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಹೇಳಿದರು.

Advertisement

ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ನಡೆದರೈತರ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೀಘ್ರ ಸಿಎಂ ಹಾಗೂ ಸಕ್ಕರೆ ಸಚಿವರಾದಿಯಾಗಿ ಸರ್ಕಾರವೇ ಮುಂದೆ ನಿಂತು ನೇರವಾಗಿ ರೈತರಿಗೆ ಪರಿಹಾರ ಒದಗಿಸಬೇಕು. ಈ ಕುರಿತು ಸ್ಥಳೀಯ ಜಿಲ್ಲಾಧಿಕಾರಿಗಳು ಸರ್ಕಾರದಗಮನಸೆಳೆಯಬೇಕು. ರೈತರ ಆಕ್ರೋಶ ಪರೀಕ್ಷೆ ಮಾಡಬಾರದು ಎಂದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಹಾಗೂ ಜನಸಾಮಾನ್ಯರ ವಿರುದ್ಧ ಕ್ರಮ ಕೈಗೊಂಡು ಭೂಸುಧಾರಣೆ, ವಿದ್ಯುತ್‌ಖಾಸಗೀಕರಣ, ಕಾರ್ಮಿಕ ಕಾಯ್ದೆ ಇವೆಲ್ಲವೂ ಜನಸಾಮಾನ್ಯರ ಹಾಗೂರೈತ ವಿರೋ ಧಿಯ ಕಾರ್ಯಗಳಾಗಿವೆ. ಇವೆಲ್ಲವನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು. ಪ್ರಕೃತಿ ವಿಕೋಪದಿಂದ ಹಾನಿಗೊಳಗಾದಬೆಳೆಗಳಿಗೆ ಅದರಲ್ಲೂ ವಾಣಿಜ್ಯಬೆಳೆಗಳ ಹಾನಿಯಿಂದ ರೈತರು ಬದುಕು ಹದಗೆಟ್ಟಿದೆ. ಕೂಡಲೇ ಸರ್ಕಾರ ಸಮಿತಿ ರಚನೆ ಮಾಡಿ ಅಳಿದುಳಿದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದರ ಜತೆಗೆ ಪ್ರಮುಖವಾಗಿ ಹಾಳಾದ ಬೆಳೆಗಳನ್ನು ಪರಿಶೀಲಿಸಿಅದರ ಅರ್ಧದಷ್ಟಾದರೂ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

ಬಸವರಾಜ ಬಾಳಿಕಾಯಿ ಮಾತನಾಡಿ, ರೈತರ ಕಷ್ಟ ಬಗೆಹರಿಸಲು ಆಡಳಿತ ಅಥವಾ ವಿರೋಧ ಪಕ್ಷಗಳು ಸುಳಿಯದಿರುವುದು ವಿಪರ್ಯಾಸದ ಸಂಗತಿಯಾಗಿದೆ. ರೈತರ ಸಮಸ್ಯೆ ಅದರಲ್ಲೂ ಸಕ್ಕರೆ ಕಾರ್ಖಾನೆಗೆ ಸಂಬಂ ಧಿಸಿದ ಕಷ್ಟಗಳಿಗೆ ಹೋರಾಡುತ್ತಿರುವ ರೈತರಿಗೆ ಬೆಂಬಲ ನೀಡಲು ರಾಜಕೀಯ ಮುಖಂಡರು ಹಿಂದೇಟು ಹಾಕುತ್ತಿರುವುದು ರೈತರಿಗೆ ಮಾಡುತ್ತಿರುವ ಮಹಾನ್‌ ಮೋಸವೆಂದು ಗುಡುಗಿದರು. ಸಸಾಲಟ್ಟಿ ಏತ ನೀರಾವರಿ ಸೇರಿದಂತೆ ಅನೇಕ ನೀರಾವರಿ ಸೌಲಭ್ಯಗಳ ಕುರಿತು ಮುಂದಿನ ದಿನಗಳಲ್ಲಿ ಹೋರಾಟ ನಡೆಯಲಿವೆ ಎಂದು ಬಾಳಿಕಾಯಿ ತಿಳಿಸಿದರು.

ರೈತ ಮುಖಂಡರಾದ ವೆಂಕಟೇಶ,ತಾಲೂಕಾಧ್ಯಕ್ಷ ಶ್ರೀಕಾಂತ ಗುಳ್ಳನವರ, ಗಂಗಾಧರ ಮೇಟಿ, ಹೊನ್ನಪ್ಪ ಬಿರಡಿ, ಅಥಣಿ ತಾಲೂಕಾಧ್ಯಕ್ಷ ಮಹಾದೇವ ಮಡಿವಾಳ, ರೇವಣಯ್ಯ ಹಿರೇಮಠ, ಮಗೆಪ್ಪ ತೇರದಾಳ, ನಾಗಪ್ಪ ಜಗದಾಳ, ಸಿದ್ದು ಬಣಜನವರ, ಸುರೇಶ ಚಿಂಚಲಿ, ಮಾರುತಿ ಅರೆನಾಡ, ಶಂಕರ ಉರಭಿನವರ, ಶಂಕರ ಚಿಂಚಲಿ, ಈರಗೊಂಡ ಪಾಟೀಲ, ಸುರೇಶ ಢವಳೇಶ್ವರ, ಸಿದ್ದು ಉಳ್ಳಾಗಡ್ಡಿ, ಸಂಗಪ್ಪ ಮೇಟಿ, ಮಹಾದೇವ ಪಾಟೀಲ, ದುಂಡಪ್ಪ ಜಿಡ್ಡಿಮನಿ, ಕಾಡು ಪಾಟೀಲ, ರಾಜು ಲೋಕ್ಕನ್ನವರ, ನಾಗಪ್ಪ ಬಂದೆನ್ನವರ, ಅಯ್ಯಪ್ಪ ಹುಂದರಗಿ, ಸಿದ್ದು ಒಡೆಯರ, ಸದಾಶಿವ ಉಳ್ಳಾಗಡ್ಡಿ, ಯಲ್ಲಪ್ಪ ಕರಿಗಾರ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next