Advertisement

ಮೇಳದಲ್ಲಿ ತಂತ್ರಜ್ಞಾನದತ್ತ ರೈತರ ಚಿತ್ತ

10:15 AM Oct 26, 2019 | Team Udayavani |

ಬೆಂಗಳೂರು: ಸಾಂಪ್ರದಾಯಿಕ ಪದ್ಧತಿಗೆ ಅಂಟಿಕೊಂಡಿದ್ದ ರೈತರು ನಿಧಾನವಾಗಿ ತಂತ್ರಜ್ಞಾನದತ್ತ ಮುಖಮಾಡುತ್ತಿದ್ದಾರೆ. ಕುತೂಹಲದಿಂದ ವೀಕ್ಷಿಸಿ, ಅವುಗಳನ್ನು ಅಳವಡಿಸಿಕೊಳ್ಳುವ ಉತ್ಸುಕತೆ ತೋರಿಸುತ್ತಿದ್ದಾರೆ. – ಇಂತಹದ್ದೊಂದು ಪೂರಕ “ಟ್ರೆಂಡ್‌’ ಈ ಬಾರಿ ಕೃಷಿ ಮೇಳದಲ್ಲಿ ಕಂಡುಬರುತ್ತಿದೆ.

Advertisement

ಅದಕ್ಕೆ ತಕ್ಕಂತೆ ತಂತ್ರಜ್ಞಾನಗಳ ಪ್ರದರ್ಶನಕ್ಕೆ ಹೆಚ್ಚು ಒತ್ತುಕೊಡಲಾಗಿದೆ. ಅದಕ್ಕೆ ತಕ್ಕಂತೆ ಕಳೆದೆರಡು ದಿನಗಳಲ್ಲಿ ಭೇಟಿ ನೀಡಿದ ರೈತರು ಕೂಡ ಕೃಷಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಳಿಗೆಗಳು ಮತ್ತು ಪ್ರಾತ್ಯಕ್ಷಿಕೆಗಳಿಗೆ ಭೇಟಿ ನೀಡಿ, ಮಾಹಿತಿ ಪಡೆಯುತ್ತಿರುವುದು ಕಂಡುಬಂದಿತು. ಸೆನ್ಸರ್‌ ಆಧಾರಿತ ಬೇಸಾಯ, ಡ್ರೋನ್‌ ಬಳಕೆ, ಕಡಿಮೆ ಜಮೀನಿನಲ್ಲಿ ನಿಖರ ಬೇಸಾಯ ಪದ್ಧತಿಯಿಂದ ಹೆಚ್ಚು ಬೆಳೆಗಳನ್ನು ಬೆಳೆಯುವುದು, ನೀರಿನ ಸದ್ಬಳಕೆಗೆ ಸೂಕ್ಷ್ಮ ನೀರಾವರಿ, ನೀರಿನೊಂದಿಗೆ ಪೋಷಕಾಂಶ ಪೂರೈಸುವ ರಸಾವರಿ, ಸಂರಕ್ಷಿತ ಬೇಸಾಯ ಸೇರಿದಂತೆ ಹಲವು ಪ್ರದರ್ಶನಗಳು ಈ ಬಾರಿಯ ಪ್ರಮುಖ ಆಕರ್ಷಣೆಗಳಾಗಿವೆ. ಭೇಟಿ ನೀಡುವ ರೈತರು, ತಂತ್ರಜ್ಞಾನದ ಕಾರ್ಯವೈಖರಿ, ಖರ್ಚು-ವೆಚ್ಚದ ಮಾಹಿತಿ ಪಡೆಯುತ್ತಿದ್ದಾರೆ ಎಂದು ಜಿಕೆವಿಕೆ ವಿಜ್ಞಾನಿಗಳು ತಿಳಿಸುತ್ತಾರೆ.

250ಕ್ಕೂ ಅಧಿಕ ಜನ ಅಳವಡಿಕೆಗೆ ಆಸಕ್ತಿ: “ನಾನು ಕಳೆದ ಆರು ವರ್ಷಗಳಿಂದ ಕೃಷಿ ಮೇಳವನ್ನು ನೋಡುತ್ತಿದ್ದೇನೆ. ಈ ಬಾರಿ ರೈತರ ಆಸಕ್ತಿ ಕೊಂಚ ಭಿನ್ನವಾಗಿದೆ. ಭತ್ತದ ಬೆಳೆಯಲ್ಲಿ ಅಳವಡಿಸಿದ ನಿಖರ ಕೃಷಿಯನ್ನು ಕಳೆದೆರಡು ದಿನಗಳಲ್ಲಿ 30 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಇದರಲ್ಲಿ ಸುಮಾರು 250 ಜನ ಸಾಕಷ್ಟು ಮಾಹಿತಿ ಪಡೆದುಕೊಂಡು, ಅಳವಡಿಸಿ ಕೊಳ್ಳುವ ಭರವಸೆ ನೀಡಿದರು. ಹೀಗೆ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ’ ಎಂದು ಬೇಸಾಯ ಶಾಸ್ತ್ರಜ್ಞ ಡಾ.ಡಿ.ಸಿ. ಹನುಮಂತಪ್ಪ ಹೇಳಿದರು.

ಇದಲ್ಲದೆ, ಪ್ರಸಕ್ತ ಸಾಲಿನಲ್ಲಿ ಬಿ2ಬಿ ಆಯೋಜಿಸಲಾಗಿದೆ. ರೈತರು ಮತ್ತು ಉದ್ಯಮಿಗಳು ಹಾಗೂ ವಿಜ್ಞಾನಿಗಳ ನಡುವೆ ಸಂಪರ್ಕ ಕಲ್ಪಿಸಲು ಈ ವೇದಿಕೆಯನ್ನು ಮೊದಲ ಬಾರಿಗೆ ರೂಪಿಸಲಾಗಿದೆ. ಕೆಲವು ರೈತರು ನೀರು ನಿರ್ವಹಣೆ, ಸಮಗ್ರ ಬೇಸಾಯ ಪದ್ಧತಿ ಸೇರಿದಂತೆ ಸಂಬಂಧಪಟ್ಟ ವಿಜ್ಞಾನಿಗಳಿಗೆ ನೀಡಲಾಗುವುದು. ಮೇಳ ಮುಗಿದ ನಂತರ ಆ ರೈತರನ್ನು ಸಂಪರ್ಕಿಸಿ, ಮಾರ್ಗದರ್ಶನ ನೀಡಲಾಗುವುದು ಎಂದು ಬಿ2ಬಿಯಲ್ಲಿದ್ದ ಜಿಕೆವಿಕೆಯ ಅಗ್ರಿಕಲ್ಚರಲ್‌ ಮಾರ್ಕೆಟಿಂಗ್‌ ಆಂಡ್‌ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ವಿಭಾಗದ ಸಿಬ್ಬಂದಿ ಡಾ.ಕಾವ್ಯ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next