Advertisement

ಕಡಲೆ ಖರೀದಿ ಕೇಂದ್ರ ಆರಂಭಿಸಲು ರೈತ ಸಂಘ ಆಗ್ರಹ

12:59 PM Jan 28, 2020 | Suhan S |

ಲಿಂಗಸುಗೂರು: ಕಡಲೆ ಖರೀದಿ ಕೇಂದ್ರ ಆರಂಭಿಸಲು ಹಾಗೂ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈತ ಸಂಘದ ಮುಖಂಡರು ಸೋಮವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕಡಲೆ ಬೆಳೆ ಬೆಳೆದಿದ್ದಾರೆ. ಇಳುವರಿ ಕೂಡಾ ಉತ್ತಮವಾಗಿದೆ. ಆದರೆ ಮಾರುಕಟ್ಟೆಯಲ್ಲಿ ದರ ತೀವ್ರ ಕುಸಿತವಾಗಿದ್ದು, ರೈತರು ಕಂಗಲಾಗಿದ್ದಾರೆ. ಕ್ವಿಂಟಲ್‌ ಕಡಲೆಗೆ 3500 ರೂ.ಗಳಿಂದ 3,800 ರೂ.ವರೆಗೆ ಖಾಸಗಿ ವ್ಯಾಪಾರಸ್ಥರು ಕೇಳುತ್ತಿದ್ದಾರೆ. ಕಡಲೆ ಬೆಳೆಗಾರರನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಕನಿಷ್ಠ 5,500 ರೂ.ಗೆ ಖರೀದಿ ಮಾಡಲು ಮುಂದಾಗಬೇಕು.

ಪಟ್ಟಣದ ಎಪಿಎಂಸಿಯಲ್ಲಿ ಬೇಕಾಬಿಟ್ಟಿಯಾಗಿ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ತೂಕದಲ್ಲಿ ಶೇ.2ರಂತೆ ದಲ್ಲಾಳಿ ತೆಗೆಯುತ್ತಿದ್ದು ಹಾಗೂ ಹೆಚ್ಚುವರಿಯಾಗಿ 500 ಗ್ರಾಮ್‌ ತೆಗೆಯುತ್ತಿದ್ದು, ಮುದಗಲ್‌ ಮತ್ತು ಲಿಂಗಸುಗೂರು ಮಾರುಕಟ್ಟೆಗೆ ಭೇಟಿ ನೀಡಿ ರೈತರಿಗೆ ಆಗುವ ಅನ್ಯಾಯ ಸರಿಪಡಿಸಬೇಕು. ತಪ್ಪಿತಸ್ಥ ವ್ಯಾಪಾರಸ್ಥರ ಮೇಲೆ ತುರ್ತು ಕ್ರಮ ಜರಗಿಸಬೇಕು. ಪೋಡಿ ಮುಕ್ತ ಗ್ರಾಮದ ಸರ್ವೇ ಕಾರ್ಯ ಸರಿಯಾಗಿ ನಡೆಯದೇ ಭಾರೀ ಅವ್ಯವಹಾರ ನಡೆಯುತ್ತಿದ್ದು ಹಣ ಕೊಟ್ಟ ರೈತರಿಗೆ ಮಾತ್ರ ಪೋಡಿ ಮಾಡಿಕೊಡುತ್ತಿದ್ದು ಈ ಸರ್ವೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ರೈತ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ, ಹನುಮಪ್ಪ ಪೂಜಾರಿ, ಯಮನೂರು ಕಡದಾರಳ, ದೇವಪ್ಪ, ಅಮರೇಗೌಡ, ಖಾಸಿಂಸಾಬ್‌, ಹುಸೇನ್‌ ನಾಯಕ, ಹೊಳೆಯಪ್ಪ, ಹನುಮಂತ, ದೇವಪ್ಪ ಕಾಳಾಪುರ, ಹನುಮಂತ ಕಾಳಾಪುರ, ಜ್ಞಾನಗೌಡ, ಹುಚ್ಚಣ್ಣ ಗುರಿಕಾರ, ಮಾನಪ್ಪ ಭೋಗಾಪುರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next