ಕೋಲಾರ: ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ಕಸವನ್ನು ದೊಡ್ಡಬಳ್ಳಾಪುರ ತಾಲೂಕು ಗುಂಡ್ಲಹಳ್ಳಿ ಟರ್ರಾ ಫಾರಂ ಬಳಿಯ ಕಸ ವಿಲೇವಾರಿ ಘಟಕ ಮತ್ತು ಚಿಗ ರೇನಹಳ್ಳಿಯ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಗಳಿಗೆ ಹಾಕುತ್ತಿರುವುದರಿಂದ ಈ ಭಾಗದಲ್ಲಿ ಹರಿಯುವ ಎತ್ತಿನಹೊಳೆ ಕುಡಿಯುವ ನೀರು ಕಲುಷಿತವಾಗುವುದನ್ನು ತಡೆಯಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾರಿಗೆ ಮನವಿ ಸಲ್ಲಿಸಲಾಯಿತು.
ಬಿಬಿಎಂಪಿ ಕಸ ವಿಲೇವಾರಿಯಿಂದ ನೀರು ಕಲುಷಿತ: ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯ ಕಸವನ್ನು ದೊಡ್ಡಬಳ್ಳಾಪುರ ತಾಲೂಕು ಗುಂಡ್ಲಹಳಿ ಟರ್ರಾಫಾರಂ ಬಳಿ ಕಸ ವಿಲೇವಾರಿ ಘಟಕ ಮತ್ತು ಚಿಗರೇನಹಳ್ಳಿಯ ಎಂಎಸ್ ಜಿಪಿ ಕಸ ವಿಲೇವಾರಿ ಘಟಕಗಳಿಗೆ ಸುರಿಸುತ್ತಿದ್ದಾರೆ. ಎತ್ತಿನ ಹೊಳೆ ನೀರು ಸಂಗ್ರಹಿಸಲು ನಿರ್ಮಿಸಲಾಗುತ್ತಿರುವ ಭೈರ ಗೊಂಡ್ಲು ಜಲಾಶಯವೂ ಇದೇ ಪ್ರದೇಶದಲ್ಲಿ ಇರುತ್ತದೆ. ಮಳೆ ಗಾಲದಲ್ಲಿ ನೀರು ಹರಿದು ಹೋಗುವ ಜಲಾ ನಯನ ಪ್ರದೇಶದ ಬಹುತೇಖ ಭಾಗ ಇರುವುದೇ ಎಂಎಸ್‌ಜಿಪಿ ಮತ್ತು ಟರ್ರಾಫಾರಂ ಘಟಕಗಳ ವ್ಯಾಪ್ತಿ ಯಲ್ಲಿ ಕಸ ವಿಲೇವಾರಿ ಘಟಕಗಳಿಗೆ
ಸುತ್ತಲಿನ ಕೆರೆಗಳ ಮುಖ್ಯ ಜಲಾನಯನ ಪ್ರದೇಶ ಇರುವುದರಿಂದ ನೀರು ಸಂಗ್ರಹಿಸುವ ಭೈರಗೊಂಡ್ಲು ಜಲಾಶಯಕ್ಕೆ ಸೇರುತ್ತದೆ. ಕಸ, ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಹಾಗೂ ವಿಷಯುಕ್ತ ರಾಸಾ ಯನಿಕಗಳು ಇರುವುದರಿಂದ ಇವು ನೀರಿನಲ್ಲಿ ಬೆರೆತು, ಆ ನೀರನ್ನು ಕುಡಿಯುವುದರಿಂದ ನೇರವಾಗಿ ಮನುಷ್ಯನ ಹಾಗೂ ಜಾನುವಾರು, ಪ್ರಾಣಿಪಕ್ಷಿಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರಿಂದ ರೋಗರುಜಿನು ಉಂಟಾಗಿ ಪ್ರಾಣಾಪಾಯ ಸಂಭವಿಸ ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಟಿ.ಎನ್ ರಾಮೇಗೌಡ ಮಾತನಾಡಿ, ಕಸ ವಿಲೇವಾರಿ ಮಾಡದಂತೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ತಾತ್ಕಾಲಿಕವಾಗಿ ಕಸ ತರುವುದನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ ಕಸ ತಂದು ಈ ಘಟಕಗಳಿಗೆ ಸುರಿಯುತ್ತಿದ್ದಾರೆ. ಈ ವಿಚಾರವನ್ನು ಸ್ಥಳೀಯರು ಕೇಳಿದಕ್ಕೆ ಇದು ಬಿಬಿಎಂಪಿ ಆಯುಕ್ತರ ಆದೇಶ ನಾವು ಪಾಲಿ ಸುತ್ತಿದ್ದೇವೆ. ನಾವು ಏನು ಮಾಡಲಾಗುವುದಿಲ್ಲ ಎಂದು ಕಸ ವಿಲೇವಾರಿ ಗುತ್ತಿಗೆ ಪಡೆದಿರುವವರು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಹೀಗಾಗಿ ತಾವುಗಳು ಕೂಡಲೇ ಎತ್ತಿನಹೊಳೆ ನೀರು ಸಂಗ್ರಹಗೊಳ್ಳುವ ಜಲಾನಯನ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಬೆಂಗಳೂರು ಕಸ ವಿಲೇವಾರಿ ಮಾಡದಂತೆ ಬಿಬಿಎಂಪಿ ಆಯುಕ್ತರಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿ ತಡೆಯಬೇಕು. ಮತ್ತೆ ವಿಲೇವಾರಿಗೆ ಯತ್ನಿಸಿದರೆ ಮುಂದಾದರೆ ಸ್ಥಳೀಯರು ಹಾಗೂ ಬಯಲು ಸೀಮೆಯ ಜಿಲ್ಲೆಯ ರೈತರು ಮತ್ತು ಸಾರ್ವಜನಿಕರು ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನಿಯೋಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಪ್ಪ, ಲಕ್ಷ್ಮಣ, ಮಾಲೂರು ತಾಲೂಕು ಅಧ್ಯಕ್ಷ ಕೆ.ನರಸಿಂಹಯ್ಯ, ಮುನೇಗೌಡ, ಗೋಪಾಲಯ್ಯ ಕೆ.ಆರ್, ಶಿವಶಂಕರ್, ಮಂಜುನಾಥ್, ಬಿ.ಜಿ ಯಲ್ಲಪ್ಪ, ಮುನಿವೆಂಕಟಪ್ಪ, ನಾಗರಾಜ್, ವೆಂಕಟರಾಮಗೌಡ, ಗೋಪಿ, ಗೋಪಾಲ್, ನಾಗರಾಜ್, ವೆಂಕಟಾಚಲಪತಿ ಉಪಸ್ಥಿತರಿದ್ದರು.