Advertisement

ವಿದ್ಯುತ್‌ ಖಾಸಗೀಕರಣಕ್ಕೆ ರೈತ ಸಂಘ ವಿರೋಧ

07:50 AM Jun 03, 2020 | Suhan S |

ಗದಗ: ಕೇಂದ್ರ ಸರಕಾರ ದೇಶದ ವಿದ್ಯುತ್‌ ವಲಯವನ್ನು ಖಾಸಗೀಕರಣ ಮಾಡುವ ಚಿಂತನೆ ಅವೈಜ್ಞಾನಿಕ ಮತ್ತು ಜನವಿರೋಧಿ  ನೀತಿಯಾಗಿದ್ದು, ತಕ್ಷಣವೇ ಕೈ ಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.

Advertisement

ಈ ಕುರಿತು ಸಂಘದ ಪ್ರಮುಖರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಕೇಂದ್ರ ಸರ್ಕಾರವು ದೇಶದ ವಿದ್ಯುತ್‌ ವಲಯವನ್ನು ಖಾಸಗೀಕರಣ ಮಾಡುವುದು ಅತ್ಯಂತ ಖೇದಕರ. ಇದರಿಂದ ಕೋಟ್ಯಂತರ ರೈತರು ಮತ್ತು ಕಡು ಬಡವರು ತೊಂದರೆಗೆ ಒಳಗಾಗುತ್ತಾರೆ. ಮಧ್ಯಮ ವರ್ಗದವರೂ ಸಹ ತೊಂದರೆ ಅನುಭವಿಸುವಂತಾಗುತ್ತದೆ. ಕೃಷಿ ವಲಯದಲ್ಲಿ ಉತ್ಪನ್ನ ಕಡಿಮೆಯಾಗುತ್ತದೆ. ಕೃಷಿ ವಲಯಕ್ಕೆ ಇರುವ ಭದ್ರತೆಯೂ ಕುಸಿದು ಹೋಗುತ್ತದೆ. ವಿದ್ಯುತ್ತನ್ನೇ ನಂಬಿರುವ ರೈತಾಪಿ ವರ್ಗದ ಎಲ್‌ ಪಂಪಸೆಟ್‌ಗಳು ಬಂದಾಗುತ್ತವೆ. ಆಹಾರಕ್ಕಾಗಿ ಆಹಾಕಾರ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೀಗಾಗಿ ಹಲವಾರು ರಾಜ್ಯಗಳು ಈ ಮಸೂದೆಯನ್ನು ವಿರೋಧಿಸಿವೆ. ಅದರಂತೆ ರಾಜ್ಯ ಸರ್ಕಾರ ಈ ಮಸೂದೆಯನ್ನು ತಿರಸ್ಕರಿಸಿ ಕೇಂದ್ರಕ್ಕೆ ಕಳುಹಿಸಬೇಕು. ಜೊತೆಗೆ ಅದೇ ರೀತಿ ರೈತರು, ಬಡವರು ಮತ್ತು ಜನ ಸಾಮಾನ್ಯರು ಪ್ರತಿಭಟನೆ, ಹೋರಾಟದ ಮೂಲಕ ಸರಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಕೆ.ಜಿ.ಶಾಂತಸ್ವಾಮಿಮಠ, ರಾಮಣ್ಣ ಕೊಂಚಿಗೇರಿ, ಹನಮಂತ ಗೋಜನೂರ ಇತರೆ ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next