Advertisement

ಎಕರೆಗೆ 5 ಲಕ್ಷ ಪರಿಹಾರಕ್ಕೆ ರೈತ ಸಂಘ ಒತ್ತಾಯ

01:39 PM Nov 28, 2020 | Suhan S |

ಮುಳಬಾಗಿಲು: ನಿವಾರ್‌ ಚಂಡ ಮಾರುತದಿಂದ ನಷ್ಟವಾಗಿರುವ ಬೆಳೆಗಳ ಸಮೀಕ್ಷೆಗೆ ವಿಶೇಷ ಅಧಿಕಾರಿಗಳ ತಂಡರಚನೆ ಮಾಡಿ, ಪ್ರತಿ ಎಕರೆಗೆ 5 ಲಕ್ಷ ರೂ.ಪರಿಹಾರ ನೀಡಬೇಕೆಂದು ಬೆಳೆನಷ್ಟವಾಗಿದ್ದ ತಾಲೂಕಿನ ವಿವಿಧ ತೋಟ ಗಳಿಗೆ ರೈತ ಸಂಘದ ಕಾರ್ಯಕರ್ತರು ಭೇಟಿ ನೀಡಿದ ನಂತರ ಶುಕ್ರವಾರ ನಗರದಲ್ಲಿ ಕಂದಾಯ ಅದಾಲತ್‌ನಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಸಿ.ಸತ್ಯ ಭಾಮ ಅವರಿಗೆ ಮನವಿ ಸಲ್ಲಿಸಿದರು.

Advertisement

ರೈತ ಸಂಘದ ರಾಜ್ಯ ಉಪಾಧ್ಯಕ್ಷಕೆ.ನಾರಾಯಣಗೌಡ ಮಾತನಾಡಿ, ಕೋವಿಡ್‌ನಿಂದ ತತ್ತರಿಸಿದ್ದ ರೈತರ ಬಾಳಿಗೆನಿವಾರ್‌ ಚಂಡ ಮಾರುತದಿಂದಾಗಿ ಬೆಂಕಿಇಟ್ಟಂತಾಗಿದೆ. ಬಿರುಗಾಳಿ ಸಹಿತಮಳೆಯಿಂದಾಗಿ ಬೆಳೆಗಳು ಸಂಪೂರ್ಣ ವಾಗಿ ನಾಶವಾಗಿದ್ದು, ಹಾನಿಯಾಗಿರುವ ರೈತರ ತೋಟಗಳಿಗೆ ಭೇಟಿ ನೀಡಿ, ಸಮೀಕ್ಷೆನಡೆಸಿ ಪ್ರತಿ ಎಕರೆಗೆ5 ಲಕ್ಷ ರೂ. ಪರಿಹಾರ ಕಲ್ಪಿಸಿ ರೈತರಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು. ಅಲ್ಲದೇ ಎಲ್ಲೆಡೆ ಬೆಳೆಗಳ ಸಮೀಕ್ಷೆಗೆ ರಾಜಸ್ವ ನಿರೀಕ್ಷಕರು ಮತ್ತುಗ್ರಾಮ ಲೆಕ್ಕಿಗರ ಕೊರತೆಯಿರುವುದರಿಂದ ಸದ್ಯ ಕೋವಿಡ್‌ನಿಂದಾಗಿ ಸರ್ಕಾರಿಶಾಲೆಗಳ ಶಿಕ್ಷಕರನ್ನು ಸಮೀಕ್ಷೆಗೆ ನೇಮಕ ಮಾಡಿಕೊಳ್ಳಬೇಕೆಂದರು.

ವರದಿ ತರಿಸಿಕೊಳ್ಳಿ: ತಾಲೂಕು ಅಧ್ಯಕ್ಷ ಫಾರೂಖ್‌ ಪಾಷ ಮಾತನಾಡಿ, ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಕೂಡಲೇ ಅಧಿಕಾರಿಗಳಿಂದ ವರದಿ ತರಿಸಿಕೊಂಡುಪರಿಹಾರನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.

ಸಹಾಯಕ ಕಮೀಷನರ್‌ ಸೋಮಶೇಖರ್‌, ತಹಶೀಲ್ದಾರ್‌ ರಾಜಶೇಖರ್‌ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್‌, ಯುವ ಮುಖಂಡ ಕಿಶೋರ್‌, ರೈತರಾದ ರಾಮಚಂದ್ರಪ್ಪ,ಯಲ್ಲಪ್ಪ,ಮುನಿಯಪ್ಪ ಜಿಲ್ಲಾ ಸಂಚಾಲಕ ಕೆ.ಸ್ರೀನಿವಾಸಗೌಡ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್‌, ಬಂಗಾರಪೇಟೆತಾಲೂಕುಅಧ್ಯಕ್ಷಐತಾಂಡಹಳ್ಳಿ ಮಂಜುನಾಥ್‌, ವೇಣು, ನವೀನ್‌, ಕಿಶೋರ್‌, ಸಾಗರ್‌, ಸುಪ್ರೀಂಚಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next