Advertisement

ಭೂ ಹಗರಣ ತನಿಖೆಗೆ ರೈತ ಸಂಘ ಆಗ್ರಹ, ಹೆದ್ದಾರಿ ತಡೆ

05:07 PM Feb 27, 2020 | Suhan S |

ಮುಳಬಾಗಿಲು: ತಾಲೂಕಿನ ದೇವರಾಯ ಸಮುದ್ರ ಕಂದಾಯ ವೃತ್ತದ ಭೂ ಹಗರಣ ತನಿಖೆ ನಡೆಸಬೇಕು, ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 75 ತಡೆದು ಪ್ರತಿಭಟಿಸಿದರು.

Advertisement

ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜನಸಾಮಾ ನ್ಯರ ಕೆಲಸ ನಿರ್ಲಕ್ಷ್ಯ ಮಾಡುವ ಕಂದಾಯ ಅಧಿಕಾರಿಗಳು ಭೂ ದಂಧೆಕೋರರಿಗೆ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ಸರ್ವೆ ನಂ.653, 180, 112ರಲ್ಲಿನ ಗೋಮಾಳ, ಗುಂಡು ತೋಪು, ಹಕ್ಕುದಾರಿ, ಕೆರೆ ಅಂಗಳವನ್ನು ನೋಂದಣಿ, ಸರ್ವೆ ಇಲಾಖೆ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿ ಮಾಡಿ ಪರಭಾರೆ ಮಾಡುತ್ತಿದ್ದಾರೆಂದರು. ಜಮೀನು ಮಂಜೂರು: ಅದೇ ರೀತಿ ಬೆಂಗಳೂರು ಮೂಲದ ರಿಯಲ್‌ ಎಸ್ಟೇಟ್‌ ಆದ ಕಿರಣ್‌ಕುಮಾರ್‌ರೆಡ್ಡಿ, ಭುವೇಂದ್ರರೆಡ್ಡಿ, ತಿಪ್ಪಾರೆಡ್ಡಿ, ರಾಜೇಂದ್ರಗೌಡ ಮತ್ತಿತರ ಪ್ರಭಾವಿ ವ್ಯಕ್ತಿಗಳಿಗೆ ಬಡವರ ಹೆಸರಿನಲ್ಲಿ ಮಂಜೂರು ನೆಪದಲ್ಲಿ ರಾತ್ರೋರಾತ್ರಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಕೋಟ್ಯಂತರ ರೂ.ಗೆ ಸರ್ಕಾರಿ ಜಮೀನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಮಹಿಳಾ ಜಿಲ್ಲಾದ್ಯಕ್ಷೆ‌ ನಳಿನಿ ಮಾತನಾಡಿದರು. ಪ್ರತಿಭಟನೆ ನಡೆಸಿದ ನಂತರ ತಹಶೀಲ್ದಾರ್‌ ರಾಜ್‌ಶೇಖರ್‌ಗೆ ಮನವಿ ಸಲ್ಲಿಸಿದರು. ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್‌ ಶ್ರೀನಿವಾಸ್‌, ಸುಪ್ರೀಂ ಚಲ, ಜಗದೀಶ್‌, ವಿನೋದ್‌, ಸುಧಾಕರ್‌, ವಡ್ಡಹಳ್ಳಿ ಮಂಜುನಾಥ್‌, ನವೀನ್‌, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಐತಾಂಡ ಹಳ್ಳಿ ಮಂಜುನಾಥ್‌, ಹೆಬ್ಬಣಿ ಆನಂದರೆಡ್ಡಿ, ಅಂಬ್ಲಿಕಲ್‌ ಮಂಜುನಾಥ, ಪುತ್ತೇರಿ ರಾಜು, ಪುತ್ತೇರಿ ನಾರಾಯಣಸ್ವಾಮಿ, ಜುಬೇರ್‌ಪಾಷ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next