Advertisement

ರೈತ ಸಂಘದಿಂದ ಸಿಹಿ ಹಂಚಿ ಸಂಭ್ರಮ

01:16 PM Dec 07, 2019 | Team Udayavani |

ಕೋಲಾರ: ತೆಲಂಗಾಣದ ಪಶು ವೈದ್ಯೆ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ ಹಿನ್ನೆಲೆಯಲ್ಲಿ ರೈತ ಸಂಘದಿಂದ ನಗರದ ಮೆಕ್ಕೆ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.

Advertisement

ವಿಜಯೋತ್ಸವದ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಇಡೀ ನಾಗರಿಕಸಮಾಜವೇ ತಲೆ ತಗ್ಗಿಸುವ ರೀತಿಯಲ್ಲಿ ಪಶು ವೈದ್ಯೆ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿ, ಸುಟ್ಟು ಹಾಕಲಾಗಿತ್ತು. ಆ ನಾಲ್ವರನ್ನು ಸಾರ್ವಜನಿಕವಾಗಿ ಗಲ್ಲಿ ಗೇರಿಸುವಂತೆ ದೇಶದ ಜನರ ಆಗ್ರಹ ವಾಗಿತ್ತು. ಘಟನೆ ನಡೆದಿದ್ದ ಸ್ಥಳದಲ್ಲೇಅವರನ್ನು ಪೊಲೀಸರು ಎನ್‌ಕೌಂಟರ್‌ ಮಾಡಿ, ಅತ್ಯಾಚಾರಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ ಎಂದರು.

ಪ್ರತಿಯೊಬ್ಬ ಅತ್ಯಾಚಾರಿಯನ್ನೂ ಇದೇ ರೀತಿಯಲ್ಲಿ ಎನ್‌ಕೌಂಟರ್‌ ಮಾಡುವಂತಹ ಕಠಿಣ ಕಾನೂನು ಜಾರಿಯಾದಲ್ಲಿ, ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಗಳು ಕ್ರಮೇಣ ಕಡಿಮೆಯಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಕಾನೂನು ವಿದ್ಯಾರ್ಥಿನಿ ಉಮಾ ಗೌಡ ಮಾತನಾಡಿ, ಸಹೋದರಿ ಪಶುವೈದ್ಯೆಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿ ಗಳನ್ನು ಗುಂಡಿಕ್ಕಿ ಕೊಂದಿರುವುದು ಇತರರಿಗೆ ಪಾಠ ವಾಗಿದೆ. ದೇಶದಲ್ಲಿ ಇತ್ತೀಚೆಗೆ ಅತ್ಯಾ ಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ತೆಲಂಗಾಣದಲ್ಲಿ ನಡೆದಿರುವ ಎನ್‌ಕೌಂಟರ್‌ ಮಾದರಿಯಲ್ಲಿ ಎಲ್ಲಾ ಪ್ರಕರಣಗಳಲ್ಲಿಯೂ ಪೊಲೀ ಸರು ಇದೇ ರೀತಿ ಎನ್‌ಕೌಂಟರ್‌ ಮಾಡಿ ಅತ್ಯಾಚಾರಿಗಳನ್ನು ಕೊನೆ ಗಾಣಿಸ ಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಪೊಲೀಸರಿಗೆ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಲಾಯಿತು. ವಿಜಯೋತ್ಸವದಲ್ಲಿ ರೈತಸಂಘದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಮರಗಲ್‌ ಶ್ರೀನಿವಾಸ್‌, ಜಿಲ್ಲಾಧ್ಯಕ್ಷೆ ನಳಿನಿ ಗೌಡ, ಕರವೇ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್‌, ವಿವಿಧ ಸಂಘಟನೆ ಗಳ ಮುಖಂಡರಾದ ಎಸ್‌.ಸಿ.ವೆಂಕಟಕೃಷ್ಣಪ್ಪ, ಮಂಗ ಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಹೊಸಹಳ್ಳಿ ವೆಂಕಟೇಶ್‌, ಮೀಸೆ ವೆಂಕಟೇಶಪ್ಪ, ಕಾನೂನು ವಿದ್ಯಾರ್ಥಿಗಳಾದ ಅರುಣಾ, ಅಶ್ವಿ‌ನಿ, ಭವ್ಯಾ, ಮಂಜುಳಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next