Advertisement

ರೈತರು ಆನ್ ಲೈನ್ ಟ್ರೇಡಿಂಗ್ ಮಾಡಿದರೆ ನಷ್ಟವಾಗಲ್ಲ : ಬಿ ಸಿ ಪಾಟೀಲ್

02:55 PM Apr 18, 2020 | keerthan |

ಕೊಪ್ಪಳ: ಕೋವಿಡ್-19 ಹಿನ್ನೆಲೆಯಲ್ಲಿ ರೈತರಿಗೆ ಸಮಸ್ಯೆಯಾಗಿದೆ. ರಾಜ್ಯಾದ್ಯಂತ ನಾನು ಪ್ರವಾಸ ಮಾಡಿ ಅವರ ಸಮಸ್ಯೆ ಆಲಿಸುತ್ತಿದ್ದೇನೆ. ಈ ವೇಳೆ ಆನ್ ಲೈನ್ ಟ್ರೇಡಿಂಗ್ ಮಾಡಿದರೆ ರೈತರು ನಷ್ಟವಾಗಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ರೈತರು ಮಧ್ಯವರ್ತಿಗಳನ್ನು ನಂಬಿ ವ್ಯಾಪಾರ ಮಾಡಬಾರದು. ಇದರಿಂದ ಅವರಿಗೆ ನಷ್ಟವಾಗಲಿದೆ. ಆನ್ ಲೈನ್ ಟ್ರೇಡಿಂಗ್ ಮಾಡಿದರೆ ಅವರಿಗೆ ಅನುಕೂಲವಾಗಲಿದೆ. ಈಗಾಗಲೆ ಕೆಲವು ಕಡೆ ಟ್ರೇಡಿಂಗ್ ನಡೆದಿದೆ ಎಂದರು.

ರೈತರ ಉತ್ಪನ್ನ ಮಾರಾಟಕ್ಕೆ ಗ್ರೀನ್ ಪಾಸ್ ನೀಡಲಾಗುತ್ತಿದೆ. ಅವರಿಗೆ ಯಾವುದೇ ನಿರ್ಬಂಧ ಇಲ್ಲ. ಅಂತರಾಜ್ಯ ಮಾರಾಟಕ್ಕೂ ನಿರ್ಬಂಧ ಇಲ್ಲ ಎಂದರು.

ಇದುವರೆಗೂ ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ಕೋವಿಡ್-19 ಪಾಸಿಟಿವ್ ಕೇಸ್ ಪತ್ತೆಯಾಗದಿರುವುದು ಸಂತೋಷದ ಸಂಗತಿ. ಅಲ್ಲದೆ ಎಪ್ರಿಲ್ ತಿಂಗಳಾಂತ್ಯಕ್ಕೆ ಕೊಪ್ಪಳದಲ್ಲೂ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ ತೆರೆಯಲಾಗುವುದು ಎಂದರು.

ನಮ್ಮದು ಡೋಂಗಿ ರಾಜಕಾರಣ ಅಲ್ಲ, ನಮ್ಮದೇನಿದ್ರೂ ನೇರಾ ನೇರ ರಾಜಕಾರಣ. ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜಕಾರಣ ಬೆರೆಸುವುದು ಸರಿಯಲ್ಲ ಎಂದರು.

Advertisement

ತಬ್ಲೀಘಿಗಳು ಸಹಕರಿಸುತ್ತಿಲ್ಲ. ಅದೇ ಇಷ್ಟು ದೊಡ್ಡ ರಾದ್ಧಾಂತಕ್ಕೆ ಕಾರಣ. ಅದೇ ರೀತಿ ಜುಬಿಲಿಯಂಟ್ ಫ್ಯಾಕ್ಟರಿ ಪ್ರಕರಣವೂ ಸಹ ಆಗಿದೆ ಎಂದರು.

ಇನ್ನು ಜಿಲ್ಲಾಧಿಕಾರಿಗೆ ಪ್ರಶ್ನೆ ಮಾಡಿದ್ದನ್ನ ಸಮರ್ಥಿಸಿಕೊಂಡ ಬಿ.ಸಿ.ಪಾಟೀಲ್, ನಾನು ಮಂತ್ರಿಯಾಗಿ ಬೆಳೆ ಹಾನಿ ಪರಿಶೀಲನೆಗೆ ಆಗಮಿಸಿದ್ರೂ ಡಿಸಿ ಸ್ಥಳಕ್ಕೆ ಬಾರದಿರುವದನ್ನ ಕೇಳಿದ್ದರಲ್ಲಿ ತಪ್ಪೇನಿದೆ. ನಾನು ಬೆಳೆ ಪರಿಶೀಲನೆ, ಸೋಂಕು ನಿಯಂತ್ರಣ ಕುರಿತ ಸಭೆ ನಡೆಸಲು ಆಗಮಿಸಿದ್ದೇನೆ ಹೊರತು ಪಿಕ್‌ ನಿಕ್‌ ಗೆ ಬಂದಿರಲಿಲ್ಲ. ಜನಾಕ್ರೋಶ ಅದೆಲ್ಲ ಏನಿಲ್ಲ, ನಾನು ಸರಕಾರದ ಸಂಬಳ ಪಡೆದು ಜನರ ಕೆಲಸ ಮಾಡ್ತೇನೆ‌. ಸರಕಾರದ ಸಂಬಳ ತಗೊಳ್ಳೋರು ಜನರ ಕೆಲಸ ಮಾಡಬೇಕು ಎಂದರು

Advertisement

Udayavani is now on Telegram. Click here to join our channel and stay updated with the latest news.

Next