Advertisement

ರೈತರಲ್ಲಿ ಸಂತಸ ಮೂಡಿಸಿದ ಮಳೆರಾಯ

10:39 AM Jun 08, 2019 | Suhan S |

ಕುಷ್ಟಗಿ: ವಾರದಲ್ಲಿ ಎರಡು ಬಾರಿ ಮಳೆಯಾಗಿದೆ. ಇದರಿಂದಾಗಿ ರೈತರಲ್ಲಿ ಆವರಿಸಿದ್ದ ಆತಂಕದ ಕಾರ್ಮೋಡ ಕರಗಿದ್ದು, ರೈತರು ಕೃಷಿ ಕಾರ್ಯದಲ್ಲಿ ಖುಷಿಯಿಂದ ನಿರತರಾಗಿದ್ದಾರೆ.

Advertisement

ಜೂ. 2ರಂದು ಮಳೆಯಾಗಿತ್ತು. ಪುನಃ ಜೂ. 6ರಂದು ರಾತ್ರಿ ಮಳೆಯಾಗಿದೆ. ಈ ಐದು ದಿನಗಳ ಅಂತರದಲ್ಲಿ ಭೂಮಿಯ ತೇವಾಂಶ ಹಿಡಿದಿಡಲು ಸಾಧ್ಯವಾಗಿದ್ದು, ಬಿತ್ತನೆಗೆ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ರವಿವಾರ ಸುರಿದ ಮಳೆಯಿಂದ ಬಿತ್ತನೆ ಕಾರ್ಯಗಳು ಬಿರುಸಿನಿಂದ ನಡೆದಿದ್ದು, ಇದೀಗ ಪುನಃ ಮಳೆಯಾಗಿರುವುದು ಬಿತ್ತನೆ ಕ್ಷೇತ್ರಗಳು ವಿಸ್ತರಿಸಿಕೊಳ್ಳಲು ಸಾಧ್ಯವಾಗಿದೆ. ಈಗಾಲೇ ಅಲ್ಪಸ್ವಲ್ಪ ಮಳೆಗೆ ಬಿತ್ತನೆ ನಂತರ ಈ ಮಳೆಯಾಗಿರುವುದು ಸಕಾಲಿಕವಾಗಿದೆ.

ನಿಡಶೇಸಿ ಕೆರೆಗೆ ನೀರು: ಗುರುವಾರ ರಾತ್ರಿ ಯಲಬುರ್ಗಾ ತಾಲೂಕಿನ ಅಲ್ಲಲ್ಲಿ ಮಳೆಯಾಗಿದ್ದು, ನಿಡಶೇಸಿ ಕೆರೆಯತ್ತ ನೀರಿನ ಒಳ ಹರಿವು ಕಂಡು ಬಂದಿದೆ. ಗುರುವಾರ ರಾತ್ರಿ 10:30ಕ್ಕೆ ಶುರುವಾದ ಮಳೆ ಮಧ್ಯರಾತ್ರಿ 1:00 ಗಂಟೆಯಿಂದ ಶುಕ್ರವಾರ ಸಂಜೆಯವರೆಗೂ ನಿಡಶೇಸಿ ಕೆರೆ ಸಂಪರ್ಕಿಸುವ ಶಾಖಾಪುರ, ಯಲಬುರ್ತಿ ಹಳ್ಳದ ನೀರು ಹರಿಯುತ್ತಿರುವುದು ಕಂಡು ಬಂತು. ಹೀಗಾಗಿ ಕೆರೆ ಪ್ರದೇಶದಲ್ಲಿ ಶೇ. 40ರಷ್ಟು ನೀರು ಜಮೆಯಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಒಂದೆರಡು ಮಳೆಯಾದರೆ ಕೆರೆ ಭರ್ತಿಯಾಗುವುದು ಖಾತ್ರಿ ಎನಿಸಿದೆ.

ಜರಿದ ಬಸ್‌: ಮುದೇನೂರು ಮಾರ್ಗದಲ್ಲಿ ಜಮೀನು ನೀರು ರಸ್ತೆಯ ಮೇಲೆ ಹರಿದ ಪರಿಣಾಮ, ರಸ್ತೆಯ ಮೇಲೆ ಕೆಸರು ಜಮೆಯಾಗಿತ್ತು. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ ಮುಂದೆ ಹೋಗದೇ ಪಕ್ಕಕ್ಕೆ ಜರಿಯಿತು. ಅಪಾಯದ ಸನ್ನಿವೇಶ ಅರಿತ ಚಾಲಕ ಬಸ್‌ ನಲಿದ್ದ ಪ್ರಯಾಣಿಕರನ್ನು ಅಲ್ಲಿಯೇ ಇಳಿಸಿದರು. ನಂತರ ಬೇರೆ ವಾಹನದ ವ್ಯವಸ್ಥೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next