Advertisement
ಕಂಬಳಕಟ್ಟ: “ಭೂಮಿ ಹಡಿಲು ಬಿಡಬೇಡಿ. ಬೇಸಾಯ ಮಾಡುವುದರಿಂದ ಆಹಾರ ಉತ್ಪಾದನೆ, ಅಂತರ್ಜಲ ವೃದ್ಧಿ ಆಗುತ್ತದೆ. ಒಂದು ವೇಳೆ ಹಡಿಲು ಬಿಟ್ಟರೆ ಆ ಭೂಮಿಯನ್ನು ವಶಪಡಿಸಿಕೊಳ್ಳಲಾಗುವುದು’ ಎಂದು ಡಿ. 24ರಂದು ಕಾರ್ಯಕ್ರಮವೊಂದರಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದರು. ಇದು ಅಹಾರ ಸ್ವಾವಲಂಬನೆಗೆ ಹಾಗೂ ಜಲ ಸಂರಕ್ಷಣೆಗೆ ಒಳ್ಳೆಯ ನಿರ್ಧಾರ.
Related Articles
Advertisement
ಮೂರು ಬೆಳಯ ಕಾಲಉದಯವಾಣಿ ಸುದಿನ ಅಧ್ಯಯನ ತಂಡವು ಈ ಪ್ರದೇಶದಲ್ಲೆಲ್ಲಾ ಸಂಚರಿಸಿ ಮಾಹಿತಿ ಸಂಗ್ರಹಿಸಿತು. ಎಲ್ಲ ಕಡೆ ಗದ್ದೆಗಳು ಬೇಕಾದಷ್ಟಿವೆ, ಎಲ್ಲವೂ ಹಡಿಲು ಬಿದ್ದಿವೆ. ಯಾರಿಗೆ ಕೇಳಿದರೂ, ಈ ನೀರಿನಲ್ಲಿ ಏನೂ ಬೆಳೆಯಲಾಗದು ಎನ್ನುತ್ತಾರೆ. ಕಂಬಳಕಟ್ಟದ ಬಳಿಯ ರೈತರೊಬ್ಬರು, ಹಿಂದೆ 3 ಸುಗ್ಗಿ ತೆಗೆಯು ತ್ತಿದ್ದೆವು. ವರ್ಷ ದಿಂದ ವರ್ಷಕ್ಕೆ ಸಮಸ್ಯೆ ಬಿಗಡಾಯಿಸುತ್ತ ಬಂದಿತೇ ಹೊರತು ಸುಧಾರಣೆ ಆಗಲಿಲ್ಲ. ಆದ ಕಾರಣ, ಈಗ ಒಂದೇ ಬೆಳೆಗೆ ನಿಲ್ಲಿಸಿದ್ದೇವೆ. ಸ್ವಲ್ಪ ಹುಲ್ಲು, ಜೋಳ ಇತ್ಯಾದಿಯನ್ನು ದನಗಳಿಗೆ ಬೆಳೆಸುತ್ತಿದ್ದೇವೆ. ಅದನ್ನೂ ನಿಲ್ಲಿಸಬೇಕಿದೆ ಎನ್ನುತ್ತಾರೆ. ಮತ್ತೂಬ್ಬ ರೈತರು, ಗದ್ದೆಗೆ ಇಳಿಯದ ಸ್ಥಿತಿ ಇದೆ. ಒಂದು ವೇಳೆ ಗದ್ದೆಗೆ ಇಳಿದು, ಏನಾದರೂ ಕೃಷಿ ಕೆಲಸ ಮಾಡಿದರೆ ಕೈ ಕಾಲಲ್ಲಿ ಕಜ್ಜಿಗಳು ಬರುತ್ತವೆ. ಹಾಗಾಗಿ ಕೃಷಿಯನ್ನೇ ನಿಲ್ಲಿಸುತ್ತಿದ್ದೇವೆ ಎಂದರು. ಕಟ್ಟ ಹಾಕಿದರೆ ಜಗಳ
ಇದೊಂದು ವಿಚಿತ್ರವಾದ ಪರಿಸ್ಥಿತಿ ಇದೆ ಕಂಬಳಕಟ್ಟದ ಬಳಿ. ಸಾಯಿಬಾಬ ನಗರದ ಬಳಿ ಸಾಂಪ್ರದಾಯಿಕವಾಗಿ ಕೆಲವು ರೈತರು ಇಂದ್ರಾಣಿ ತೀರ್ಥ ನದಿಗೆ ಕಟ್ಟ ಹಾಕುವುದು ಜಾನುವಾರುಗಳಿಗೆ ಬೆಳೆ ಬೆಳೆಯಲು. ಸುತ್ತಮುತ್ತಲಿನ ಜನರು ಇದರ ವಿರುದ್ಧ ನಗರಸಭೆ ಪೌರಾಯುಕ್ತರಿಗೆ ದೂರು ನೀಡಿ ಕಟ್ಟ ಬಿಡಿಸುವಂತೆ ಆಗ್ರಹಿಸುತ್ತಾರೆ. ಈ ಎರಡೂ ಗುಂಪಿಗೆ ಅವರದ್ದೇ ಆದ ಕಾರಣಗಳಿವೆ. ಒಬ್ಬರಿಗೆ ಸೊಳ್ಳೆಯ ಸಮಸ್ಯೆ, ಮತ್ತೂಬ್ಬರಿಗೆ ಬೆಳೆಯ ಸಮಸ್ಯೆ. ಎಲ್ಲವೂ ಚೆನ್ನಾಗಿದ್ದರೆ ?
ನೀರು ಚೆನ್ನಾಗಿದ್ದರೆ ಪರಿಸ್ಥಿತಿಯೇ ಬೇರಾಗಿರುತ್ತಿತ್ತು. ಶುದ್ಧ ನೀರು ನಿಂತಿದ್ದರೆ ಎಲ್ಲರ ಬಾವಿಗೂ ನೀರಿರುತ್ತಿತ್ತು. ಕುಡಿಯಲು ಬಳಸಬಹುದಿತ್ತು. ಸೊಳ್ಳೆಯ ಸಮಸ್ಯೆ ಇರುತ್ತಿರಲಿಲ್ಲ. ಕೃಷಿಕರಿಗೂ ಬೆಳೆ ಬೆಳೆಯ ಬಹುದಿತ್ತು. ಇಂಥದೊಂದು ಶಾಶ್ವತ ಪರಿಹಾರಕ್ಕೆ ಡಿಸಿ ಯತ್ತ ನೋಡುತ್ತಿದ್ದಾರೆ ಸ್ಥಳೀಯರು. ಕೃಷಿ ಬಹಳಷ್ಟಿತ್ತು ಮೊದಲು
ಕೇವಲ ಮೂಡನಿಡಂಬೂರು ಹಾಗೂ ಕೊಡವೂರು ಪ್ರದೇಶವನ್ನೇ ಲೆಕ್ಕ ಹಾಕಿದರೆ ಸುಮಾರು 36 ಹೆಕ್ಟೇರ್‌ಗಳಿಗಂತಲೂ ಹೆಚ್ಚು ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತಿತ್ತು. ಒಟ್ಟೂ ಈ ಇಂದ್ರಾಣಿ ತೀರ್ಥ ನದಿ ಹರಿದು ಹೋಗುವ ಪಾತ್ರದಲ್ಲಿ ಸುಮಾರು 500 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಎರಡು ಭತ್ತದ ಬೆಳೆ ಹಾಗೂ ಒಂದು ಪರ್ಯಾಯ ಬೆಳೆಯನ್ನು ಬೆಳೆಯಲಾಗುತ್ತಿತ್ತು. ಸುಮಾರು ಹತ್ತು ವರ್ಷಗಳಿಂದ ಮಳೆಗಾಲದ ಭತ್ತ ಬೆಳೆ ಬಿಟ್ಟರೆ ಬೇರೇನೂ ಈ ಪ್ರದೇಶದಲ್ಲಿ ಬೆಳೆಯುತ್ತಿಲ್ಲ ಎಂಬುದು ಕೃಷಿ ಇಲಾಖೆ ಅಧಿಕಾರಿಗಳು ಕೊಡುವ ಮಾಹಿತಿ. ಕೃಷಿ ಉದ್ದೇಶಕ್ಕಾಗಿ ನದಿಯ ಬದಿಯಲ್ಲಿ ಜೋಡಿಸಲಾಗಿದ್ದ 40-45 ಪಂಪ್‌ಗ್ಳು ಹಾಳಾಗಿವೆ, ಅದನ್ನು ತೆಗೆಯಲೂ ಕೃಷಿಕರಿಗೆ ಆಸಕ್ತಿಯಿಲ್ಲ. ಇನ್ನುಳಿದಂತೆ ಸುಮಾರು 200 ಕ್ಕೂ ಹೆಚ್ಚು ಪಂಪ್‌ಗ್ಳನ್ನು ಬೆಳೆ ನಿಲ್ಲಿಸಿದ ಮೇಲೆ ಕೃಷಿಕರು ತೆಗೆದಿದ್ದಾರೆ. ಒಟ್ಟು ಪರಿಸ್ಥಿತಿ ಕೃಷಿಗೆ ವಿರುದ್ಧವಾಗಿದೆ. ತೋಟಗಾರಿಕೆ ಕಥೆ
ಇನ್ನು ತೋಟಗಾರಿಕೆ ವಿಷಯಕ್ಕೆ ಬಂದರೆ ಸಾಕಷ್ಟು ತೆಂಗಿನ ಬೆಳೆ ಹಾಳಾಗಿದೆ. ಬೇರೇನೂ ಬೆಳೆಯಲು ಆಸಕ್ತಿ ಇಲ್ಲ. ಬಾಳೆ ಬೆಳೆದರೆ ಬೇರೆ ಸಮಸ್ಯೆ, ಏನೂ ಮಾಡಲಾಗದೇ ಬೆಳೆಗಾರರು ಕಂಗಾಲಾಗಿದ್ದಾರೆ. ದೂರು ಬಂದಿಲ್ಲ
ಈ ಬಗ್ಗೆ ದೂರು ಬಂದಿದೆಯೇ ಎಂದು ತಾಲೂಕು ಪಂಚಾಯತ್ ಇಒ ಮೋಹನ್‌ರಾಜ್ ಅವರಲ್ಲಿ ಕೇಳಿದರೆ, “ನಮಗೆ ಇದುವರೆಗೆ ಯಾವ ರೈತರೂ ದೂರು ಕೊಟ್ಟಿಲ್ಲ. ಒಂದುವೇಳೆ ದೂರು ಬಂದರೂ ನಾವು ಅದನ್ನು ನಗರಸಭೆಗೆ ವರ್ಗಾಯಿಸುತ್ತೇವೆಯೇ ಹೊರತು ಬೇರೇನೂ ಮಾಡಲು ಅಧಿಕಾರವಿಲ್ಲ. ಕೃಷಿಗೆ ಬೇಕಾದ ಪೂರಕ ಸಾಮಗ್ರಿ ಕೊಡುವುದಷ್ಟೇ ನಮ್ಮ ಕೆಲಸ’ ಎಂದರು. ನಾಯರ್‌ಕೆರೆ ಪಂಪ್ ದುರಸ್ತಿಗೆ ಮುಂದಾದ ನಗರಸಭೆ
ನಾಯರ್‌ಕೆರೆ: ಉದಯ ವಾಣಿಯ ಮರೆತೇ ಹೋದ ಇಂದ್ರಾಣಿ ಕಥೆಯ ಸರಣಿ ಹಿನ್ನೆಲೆ ಯಲ್ಲಿ ಕೊನೆಗೂ ಎಚ್ಚೆತ್ತಿರುವ ನಗರ ಸಭೆಯು ಮೊದಲಿಗೆ ನೀರು ಶುದ್ಧೀ ಕರಣಕ್ಕೆ ಸಂಬಂಧಿ ಸಿದ ವಿಭಾಗ ಗಳ ಶಸ್ತ್ರಚಿಕಿತ್ಸೆಗೆ ಮುಂದಾಗಿದೆ.
ರೋಗಗ್ರಸ್ಥವಾಗಿದ್ದ ವೆಟ್‌ವೆಲ್‌ಗಳು ಮತ್ತು ಎಸ್‌ಟಿಪಿ ಯಲ್ಲಿ ವ್ಯವಸ್ಥೆ ಸರಿ ಪಡಿ ಸಲು ಮುಂದಾಗಿರುವ ನಗರಸಭೆ, ನಾಯರ್ ಕೆರೆ ಯಲ್ಲಿ ಈ ಹಿಂದೆಯೇ ಕೆಟ್ಟು ಹೋಗಿದ್ದ ಪಂಪ್‌ನ್ನು ತುರ್ತಾಗಿ ದುರಸ್ತಿಗೊಳಿಸಿದೆ. ನಿಟ್ಟೂರು ಎಸ್‌ಟಿಪಿಯನ್ನು ಹಂತ ಹಂತವಾಗಿ ಉನ್ನತೀಕರಣ ಮಾಡುವುದಾಗಿ ತಿಳಿಸಿರುವ ನಗರಸಭೆ ಎಇಇ ಮೋಹನ್‌ರಾಜ್, ಪ್ರಥಮ ಹಂತವಾಗಿ ಎಸ್‌ಟಿಪಿಯ ಲಗೂನ್‌ನಲ್ಲಿ ಹಾಳಾದ ಗೇರ್ ಬಾಕ್ಸ್ ಬದಲಿಸಬೇಕಿದೆ. ಈ ಸಂಬಂಧ 6 ಲ.ರೂ. ಮೊತ್ತದ ಟೆಂಡರ್ ಕರೆಯಲು ಜಿಲ್ಲಾಧಿ ಕಾರಿಗಳಿಂದ ಅನುಮೋದನೆ ಪಡೆಯ ಲಾಗಿದೆ. ಕೂಡಲೇ ಟೆಂಡರ್ ಕರೆಯ ಲಾಗಿದ್ದು, ಒಂದೇ ಬಾರಿಗೆ ಎಲ್ಲ ಸಮಸ್ಯೆ ಪರಿಹರಿಸಲಾಗದು. ಇದು ದಶಕದ ಸಮಸ್ಯೆಯಾದ ಕಾರಣ ಶಾಶ್ವತ ಪರಿಹಾರ ಕಂಡುಹಿಡಿಯುವತ್ರ ಪ್ರಯತ್ನಿಸ ಲಾಗುವುದು ಎಂದು ಉದಯವಾಣಿ ಪ್ರತಿನಿಧಿಗೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ನಗರಸಭೆ ಎಂಜಿನಿಯರ್ ನೇತೃತ್ವದ ಫೆ. 18ರಂದು ನಡೆದ ಸಭೆಯಲ್ಲಿ ನಿಟ್ಟೂರು ಎಸ್‌ಟಿಪಿ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಹೋರಾಟ ಸಮಿತಿಯಿಂದ ಡಿಸಿಗೆ ಮನವಿ
ಉಡುಪಿ: ಇಂದ್ರಾಣಿ ಉಳಿಸಿ ಹೋರಾಟ ಸಮಿತಿ ಸದಸ್ಯರು ಕಳೆದ ಹಲವಾರು ವರ್ಷಗಳಿಂದ ಪ್ರತಿಧ್ವನಿಸು ತ್ತಿರುವ ಇಂದ್ರಾಣಿ ನದಿ ಮಾಲಿನ್ಯದ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು.