Advertisement

ಅರಣ್ಯ ಒತ್ತುವರಿ ಪ್ರಕರಣ ಸಿಬಿಐಗೆ ಒಪ್ಪಿಸಿ

02:02 PM Jul 24, 2023 | Team Udayavani |

ಶ್ರೀನಿವಾಸಪುರ: ಜಿಲ್ಲಾದ್ಯಂತ ಒತ್ತುವರಿ ಆಗಿರುವ ಅರಣ್ಯ ಭೂಮಿ ಹಗರಣವನ್ನು ಸಿಬಿಐಗೆ ಒಪ್ಪಿಸುವಂತೆ ಅರಣ್ಯ ಸಚಿವರನ್ನು ಒತ್ತಾಯಿಸಿ, ಜು.26 ರಂದು ಅರಣ್ಯ ಇಲಾಖೆ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ತೆರ್ನಹಳ್ಳಿ ಪ್ರಗತಿಪರ ರೈತ ತಾಲೂಕು ಅಧ್ಯಕ್ಷ ಆಂಜಿನಪ್ಪರ ತೋಟದಲ್ಲಿ ನಡೆದ ಸಭೆಯಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‌ ಗೌಡ ಮಾತನಾಡಿ,ಅರಣ್ಯ ರಕ್ಷಕರೇ ಅರಣ್ಯ ಭಕ್ಷಕರಾದರೆ ಇನ್ನೂ ಸರ್ಕಾರದ ಅರಣ್ಯ ಭೂಮಿ ಉಳಿಸುವವರು ಯಾರು? ಒಂದು ಕಡೆ ಸಾವಿರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮತ್ತೂಂದು ಕಡೆ ಅರಣ್ಯದಲ್ಲಿ ಬೆಳೆದಿರುವ ಮರಗಳ ಆಕ್ರಮ ಕಟಾವು ದಂಧೆಗೆ ಕಡಿವಾಣ ಇಲ್ಲವೇ ಎಂದು ಅರಣ್ಯ ಇಲಾಖೆ ಆಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಒತ್ತುವರಿ ತೆರವಿಗೆ ಹಿಂದೇಟು ಯಾಕೆ: ಶ್ರೀನಿವಾಸಪುರ ತಾಲೂಕಿನಾದ್ಯಂತ 3,725 ಎಕರೆ ಅರಣ್ಯ ಭೂಮಿಯನ್ನು ಬಲಾಡ್ಯರು ತಮಗೆ ಇಷ್ಟ ಬಂದ ಕಡೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದು, ನಕಲಿ ದಾಖಲೆಗಳನ್ನು ಕಂದಾಯ ಅಧಿಕಾರಿಗಳು ಸೃಷ್ಠಿಸಿ ಒತ್ತುವರಿದಾರರ ಮನೆಗೆ ತಲುಪಿಸುತ್ತಿರುವುದು ದುರಾದೃಷ್ಟಕರ ಸಂಗತಿ ಎಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.

ಸಣ್ಣ ರೈತ ತನ್ನ ಜಮೀನಿನ ಪಕ್ಕದಲ್ಲಿ ಒಂದು ಹೆಜ್ಜೆ ಅರಣ್ಯ ಭೂಮಿಯಲ್ಲಿ ಇಟ್ಟರೆ ಅದನ್ನೇ ದೊಡ್ಡದು ಮಾಡಿ ಅವರ ವಿರುದ್ಧ ಕ್ರಮ ಮುಂದಾಗುತ್ತಾರೆ. ಅರಣ್ಯ ಅಧಿಕಾರಿಗಳೇ ಸಾವಿರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿರುವ ಭೂ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಏಕೆ? ಸರ್ಕಾರದಿಂದ ಸಂಬಳ ಪಡೆಯುವ ಅಧಿಕಾರಿಗಳೇ ಮಾಜಿ ಶಾಸಕ ರಮೇಶ್‌ ಕುಮಾರ್‌ ಅರಣ್ಯ ಭೂ ಒತ್ತುವರಿ ಜತೆಗೆ ಬಲಾಡ್ಯರ ಒತ್ತುವರಿ ತೆರೆವುಗೊಳಿಸಿ ನಿಮ್ಮ ತಾಕತ್ತು ತೋರಿಸಿ ಎಂದು ಸವಾಲು ಹಾಕಿದರು.

ತಪ್ಪಿತಸ್ಥ ಅಧಿಕಾರಿಗಳಿಗೆ ಸೂಕ್ತ ಶಿಕ್ಷೆಯಾಗಲಿ: ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಏಷ್ಯಾದ ಎರಡನೇ ಅತಿ ದೊಡ್ಡ ಮಾರುಕಟ್ಟೆಗೆ ಜಾಗಕ್ಕೆ 50 ಎಕರೆ ಅರಣ್ಯ ಭೂಮಿ ನೀಡಲು ಕೇಂದ್ರ ಸರ್ಕಾರದ ಅರಣ್ಯ ಸಚಿವರ ಮೇಲೆ ಬೆರಳು ತೋರಿಸುವ ಅಧಿಕಾರಿಗಳೇ, ಸಾವಿರಾರು ಎಕರೆ ಭೂ ಒತ್ತುವರಿ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ? ಇಲ್ಲ ತಾವೇ ಕೋಟಿ ಕೋಟಿ ಹಣಕ್ಕೆ ಅರಣ್ಯ ಭೂಮಿಯನ್ನು ಮಾರಾಟ ಮಾಡಿದ್ದೀರೇಯೆ? ಇದು ಜಿಲ್ಲೆಯ ರೈತರ ಪ್ರಶ್ನೆ ಆಗಿದೆ ಎಂದರು.

Advertisement

ಅರಣ್ಯ ಭೂಮಿ ಒತ್ತುವರಿ, ಮತ್ತೂಂದು ಕಡೆ ಅರಣ್ಯದಲ್ಲಿ ಬೆಳೆದಿರುವ ಬೆಳೆಬಾಳುವ ಆಕ್ಲಿಪಾರಂ ಆಕ್ರಮ ಮಾರಾಟ ದಂಧೆ, ಅಕ್ರಮ ಗಣಿಗಾರಿಕೆ ಮಾಡುವ ವ್ಯಕ್ತಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಅಧಿಕಾರಿಗಳ ಭ್ರಷ್ಟತೆ ತನಿಖೆಯಾಗಲಿ. ತಪ್ಪಿತಸ್ಥ ಅಧಿಕಾರಿಗಳಿಗೆ ಸೂಕ್ತ ಶಿಕ್ಷೆ ಆಗಬೇಕು. ಸಾವಿರಾರು ಎಕರೆ ಅರಣ್ಯ ಭೂ ಹಗರಣವನ್ನು ಸಿಬಿಐಗೆ ಒಪ್ಪಿಸಲೇ ಬೇಕು ಎಂದು ಜು.26ರಂದು ಹೋರಾಟ ಮಾಡುವ ನಿರ್ಧಾರವನ್ನು ಸಭೆಯಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್‌, ಪಾರುಕ್‌ಪಾಷ, ವಿಜಯ್‌ಪಾಲ್‌, ಆಲವಾಟ ಶಿವ, ಸಹದೇವಣ್ಣ, ಶೇಕ್‌ಶಪಿಹುಲ್ಲಾ, ಮುನಿರಾಜು, ಮಂಗಸಂದ್ರ ತಿಮ್ಮಣ್ಣ, ಮೂರಾಂಡಹಳ್ಳಿ ಶಿವಾರೆಡ್ಡಿ, ಬಂಗಾರಿ ಮಂಜು, ಸುನಿಲ್‌ಕುಮಾರ್‌, ಭಾಸ್ಕರ್‌, ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next